ನಗರದಲ್ಲಿ ಲಾಕ್ ಡೌನ್ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ!

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿನ ಸ್ಮಾರ್ಟ್ ಸಿಟಿ ಕೆಲಸ ಚುರುಕು ಪಡೆದಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿನ ಸ್ಮಾರ್ಟ್ ಸಿಟಿ ಕೆಲಸ ಚುರುಕು ಪಡೆದಿದೆ ಎಂದು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೇಳಿದೆ.

ಮೊದಲ ಲಾಕ್‌ಡೌನ್‌ಗಿಂತ ಭಿನ್ನವಾಗಿ, ಎರಡನೆಯ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಮತ್ತು ನಗರ ನಿಗಮಗಳು ಈಗ ನಡೆಯುತ್ತಿರುವ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಮರ್ಥವಾಗಿ ಬಳಸಿಕೊಂಡವು, ಈ ಕಾಮಗಾರಿಗಳ ವೇಳೆ 21 ರಸ್ತೆಗಳು  ಪೂರ್ಣಗೊಂಡಿದ್ದು, ಜೂನ್ ಮತ್ತು ಜುಲೈನಲ್ಲಿ ಪ್ರಯಾಣಿಕರಿಗೆ ಇವು ಮುಕ್ತವಾಗಲಿದೆ. 

ಈ ಬಗ್ಗೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಬಿಎಸ್ಸಿಎಲ್) ಹಂಚಿಕೊಂಡ ಮಾಹಿತಿಯ ಪ್ರಕಾರ, ಎರಡನೇ ಲಾಕ್ ಡೌನ್ ಸಮಯದಲ್ಲಿ ಒಟ್ಟು 15.15 ಕಿ.ಮೀ ರಸ್ತೆಯ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಅಂತೆಯೇ 4.843 ಕಿ.ಮೀ.ಗಳ ಕಾಮಗಾರಿ ಬಾಕಿ ಇದೆ.

ಜೂನ್ ಅಂತ್ಯದಿಂದ ಜನರು ಬಳಸಲು ಮುಕ್ತವಾಗಿರುವ ರಸ್ತೆಗಳ ಪಟ್ಟಿ ಇಂತಿದ್ದು, ಹೇಯ್ಸ್ ರಸ್ತೆ, ವುಡ್ ಸ್ಟ್ರೀಟ್, ಟೇಟ್ ಲೇನ್, ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಕಾನ್ವೆಂಟ್ ರಸ್ತೆ, ಮೆಕ್‌ಗ್ರಾತ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಲಾವೆಲ್ಲೆ ರಸ್ತೆ, ಬ್ರಿಗೇಡ್ ರಸ್ತೆ, ಡಿಕನ್ಸನ್ ರಸ್ತೆ , ಕ್ವೀನ್ಸ್ ರಸ್ತೆ,  ಅರಮನೆ ರಸ್ತೆ ಮತ್ತು ಇನ್ ಫೆಂಟ್ರಿ ರಸ್ತೆಗಳು ಜೂನ್ ಅಂತ್ಯಕ್ಕೆ ಮುಕ್ತವಾಗಲಿದೆ. 

ಅಂತೆಯೇ ಜುಲೈ ಅಂತ್ಯದ ವೇಳೆಗೆ ಕಮರ್ಷಿಯಲ್ ಸ್ಟ್ರೀಟ್, ಕಂಟೋನ್ಮೆಂಟ್ ರಸ್ತೆ, ಮಿಲ್ಲರ್ಸ್ ರಸ್ತೆ ವಿಸ್ತರಣೆ, ಜುಮ್ಮಾ ಮಸೀದಿ ರಸ್ತೆ ಮತ್ತು ಕಸ್ತೂರ್ಬಾ ರಸ್ತೆಗಳು ಜುಲೈನಲ್ಲಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. 

ಈ ಬಗ್ಗೆ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿರುವ ಬಿಎಸ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು, 'ಹೆಚ್ಚಿನ ರಸ್ತೆಗಳ ಸಂದರ್ಭದಲ್ಲಿ, ಅಂತಿಮ ಟಾರ್ರಿಂಗ್, ರಸ್ತೆಗುಂಡಿಗಳನ್ನು ಮುಚ್ಚುವುದು ಮತ್ತು ಪಾದಚಾರಿಗಳನ್ನು ತೆರವುಗೊಳಿಸುವುದು ಬಾಕಿ ಇದೆ.  ಹವಾಮಾನವು ಅನುಮತಿಸಿದರೆ ಕಾಮಗಾರಿಗಳನ್ನು ತ್ವರಿತಗೊಳಿಸಲಾಗುತ್ತದೆ. ಸಂಚಾರ ಕಡಿಮೆ ಇರುವುದರಿಂದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಲಾಕ್‌ ಡೌನ್ ಅವಧಿಯನ್ನು ಬಳಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅಡಿಯಲ್ಲಿ ಒಟ್ಟು 31 ರಸ್ತೆಗಳ  ಕಾಮಗಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 21 ರಸ್ತೆ ಕಾಮಗಾರಿ ಕೆಲಸಗಳನ್ನು ಪೂರ್ಣ ಮಾಡಲಾಗಿದ್ದು, ಕಾಮರಾಜ್ ರಸ್ತೆ, ಅವೆನ್ಯೂ ರಸ್ತೆ, ಇನ್ ಫೆಂಟ್ರಿ ರಸ್ತೆ, ರೇಸ್ ಕೋರ್ಸ್ ರಸ್ತೆ, ಅಲಸೂರು ರಸ್ತೆ, ರಾಜ್ ಭವನ ರಸ್ತೆ ಮತ್ತು ತಾರಾಲಯ ರಸ್ತೆಗಳ ಕೆಲಸ ಬಾಕಿ  ಉಳಿದಿದೆ ಎಂದು ಅವರು ಹೇಳಿದರು.

ಕೆಲಸಗಳು ಬಾಕಿ ಉಳಿದಿದ್ದರೆ, ಕಾಮಗಾರಿಗಳು ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಿ ಒಂದು ಬದಿಯನ್ನು ಸಂಚಾರಕ್ಕೆ ಅನುವು ಮಾಡಲಾಗುತ್ತದೆ, ಪಾವರ್‌ಗಳು ಮತ್ತು ಅಂಡರ್ ಗ್ರೌಂಡ್ ಕೇಬಲಿಂಗ್ ಕೆಲಸ ಬಾಕಿ ಉಳಿದಿವೆ ಎಂದು ಚೋಳನ್ ಹೇಳಿದರು. ಎಂ.ಜಿ.ರಸ್ತೆ, ಶಿವಾಜಿನಗರ,  ಬಾಲೆಕುಂದ್ರಿ ಸರ್ಕಲ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ಅಲಿ ಅಸ್ಕರ್ ರಸ್ತೆ ಮುಂತಾದವುಗಳ ಕೆಲಸ ಇನ್ನೂ ನಡೆಯುತ್ತಿದೆ ಎಂದು ಹೇಳಿದರು.

ಅಂತೆಯೇ ಹಾಲಿ ಲಭ್ಯವಿರುವ ಕಾರ್ಮಿಕರೊಂದಿಗೇ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಹಿಂದಿನಂತೆ ಈಗ ಕಾರ್ಮಿಕರು ಲಭ್ಯರಾಗುತ್ತಿಲ್ಲ. ಕೋವಿಡ್ ಲಾಕ್ ಡೌನ್ ನಿಂದಾಗಿ ಕಚೇರಿಗಳು ಮುಚ್ಚಲ್ಪಟ್ಟಿದ್ದು, ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ವಿಳಂಬವಾಗುತ್ತಿದೆ. ಇದರಿಂದ ಫೈಲ್  ಗಳ ಕೆಲಸಕ್ಕೆ ಅಡ್ಡಿಯಾಗಿ ಕಾಮಗಾರಿಗೂ ಅನುಮತಿ ದೊರೆಯದೇ ವಿಳಂಬವಾಗುತ್ತಿದೆ ಎಂದು ಹೇಳಿದರು, 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com