ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಅವಾಂತರ: ಭಾರೀ ಮಳೆಗೆ ಜನಜೀವನ ತತ್ತರ; ರಸ್ತೆ, ಸೇತುವೆಗಳಿಗೆ ಹಾನಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆ ಸೇತುವೆಗಳು ಹಾನಿಯಾಗಿರುವ ವರದಿಯಾಗಿದೆ.
ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ
ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ

ಬೆಳಗಾವಿ/ ಶಿವಮೊಗ್ಗ/ಹಾಸನ/ಉಡುಪಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಸ್ತೆ ಸೇತುವೆಗಳು ಹಾನಿಯಾಗಿರುವ ವರದಿಯಾಗಿದೆ.

ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಚಿಕ್ಕೋಡಿ ಉಪವಿಭಾಗದ ನಾಲ್ಕು ಸೇತುವೆಗಳು ಜಲಾವೃತವಾಗಿವೆ.

ಕೃಷ್ಣ ನದಿ, ವೇದಗಂಗಾ, ದೂದ್ ಗಂಗಾ ಮತ್ತು ಹಿರಣ್ಯಾಕ್ಷಿ ನದಿಗಳ ನೀರಿನ ಮಟ್ಟದಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದೆ, ಅವರು ಜತ್ರತ್-ಭಿವಾಶಿ ಸೇತುವೆ, ನಿಪ್ಪಾನಿ ತಾಲೂಕಿನ ವೇದಗಂಗಾ ನದಿಯ ಅಕೋಲ್-ಸಿಡ್ನಾಲ್ ಸೇತುವೆ, ಕರಡಾಗ-ಭೋಜ್ ಗ್ರಾಮಗಳ ಸಂಪರ್ಕಿಸುವ ಸೇತುವೆ, ಮತ್ತು ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯಲ್ಲಿ ಸಂಪರ್ಕಿಸುವ ಸೇತುವೆಯಾದ ಸಂಕೇಶ್ವರ-ನಾಗ್ನೂರ್ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ.

ಶಿವಮೊಗ್ಗ ಜಿಲ್ಲೆಯ ಹೊಸ ನಗರ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ತುಂಗಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಗುರುವಾರ ಬೆಳಿಗ್ಗೆಯಿಂದ ನೀರಿನ ಹರಿವು ಹೆಚ್ಚಾಗಿದೆ. ಬೆಳಿಗ್ಗೆ ಸುಮಾರು 20,000 ಕ್ಯೂಸೆಕ್ಸ್ ಇದ್ದ ಒಳಹರಿವು ಹೆಚ್ಚಿದೆ, ಬೆಳಿಗ್ಗೆ 11 ರ ಸುಮಾರಿಗೆ ಅದು 25 ಸಾವಿರ ಕ್ಯೂಸೆಕ್‌ ದಾಟಿತು. ಮಧ್ಯಾಹ್ನ 1 ಗಂಟೆ ವೇಳೆಗೆ ತುಂಗಾ ಜಲಾಶಯದಲ್ಲಿ ನೀರಿನ ಒಳಹರಿವು 33,700 ಕ್ಯೂಸೆಕ್ ಇತ್ತು.

ಕಳೆದ 2 ವಾರಗಳಿಂದ ನಿರಂತರವಾಗಿ ಉಡುಪಿಯಲ್ಲಿ ಮಳೆ ಸುರಿದಿದ್ದು, ಗುರುವಾರ ಕೊಂಚ ಬಿಡುವು ನೀಡಿತ್ತು, ಮಧ್ಯಾಹ್ನ ಮತ್ತೆ ಆರಂಭವಾದ ಮಳೆ ಸುಮಾರು 1ಗಂಟೆ ಎಡೆಬಿಡದೆ ಸುರಿದಿದೆ. ಕುಂದಾಪುರದಲ್ಲಿ ಸಂಜೆ ವೇಳೆಗಾ ಧಾರಾಕಾರ ಮಳೆಯಾಗಿತ್ತು, ಮೂರು ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ 40-50 ಕಿಮೀ ವೇಗದಲ್ಲಿ ಪ್ರಬಲ ಗಾಳಿ ಬೀಸುತ್ತಿದೆ.

ಹಾಸನದಲ್ಲಿ ಸುಮಾರು 36 ಗಂಟೆ ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ, ಸಿದ್ದಯ್ಯ ನಗರದಲ್ಲಿನ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಮತ್ತು ನಗರದ ಬೀರನಹಳ್ಳಿ ಪ್ರದೇಶಗಳಲ್ಲಿ ಮಳೆ ನೀರು ತಮ್ಮ ಮನೆಗಳಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ವಾಸಿಸುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದರು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com