ಮೇಕೆದಾಟು ಯೋಜನೆ ಕಾನೂನು ವ್ಯಾಪ್ತಿ ಮೀರಿ ಹೋಗಿಲ್ಲ: ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ ಕಾನೂನು ವ್ಯಾಪ್ತಿ ಮೀರಿ ಹೋಗಿಲ್ಲ ಎಂದು ಗೃಹಸಚಿವರೂ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೇಕೆದಾಟು ಯೋಜನೆ ಕಾನೂನು ವ್ಯಾಪ್ತಿ ಮೀರಿ ಹೋಗಿಲ್ಲ ಎಂದು ಗೃಹಸಚಿವರೂ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮೇಕೆದಾಟು ವಿಚಾರವಾಗಿ ಒಂದು ಸೊಮೋಟೋ ಕೇಸ್ ಆಗಿದೆ. ಪ್ರಕರಣವನ್ನು ಚೆನ್ನೈ ಎನ್.ಜಿ.ಟಿ ಕೋರ್ಟ್ ತೆಗೆದುಕೊಂಡಿತ್ತು. ಈಗ ನ್ಯಾಷನಲ್ ಎನ್.ಜಿ.ಟಿ ಪ್ರಕರಣ ಕೈಗೆತ್ತಿಕೊಂಡಿದೆ. ಇದನ್ನು ತ್ರೀ ಮೆಂಬರ್ ಕಮಿಟಿ ತೀರ್ಮಾನ ಮಾಡಲಿದೆ. ಗುರುವಾರ ವಾದಮಂಡನೆ ಆಗಿದೆ ಎಂದರು.

ನಾವು ಯಾವುದೇ ಉಲ್ಲಂಘನೆ ಮಾಡಿಲ್ಲ.ಸುಪ್ರೀಂ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ರಾಜ್ಯದ ಹಿತಾಸಕ್ತಿ ನಾವು ಬದ್ಧತೆಯಿಂದ ಕೆಲಸ ಮಾಡುತ್ತಿದ್ದು, ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com