ಬೆಂಗಳೂರು: ವಾಹನಗಳ ಮೇಲೆ ನೇಮ್ ಬೋರ್ಡ್ ಹೊಂದಿದ್ದ 85 ವಾಹನಗಳ ವಿರುದ್ಧ ಕೇಸ್ ದಾಖಲು

ನಗರ ಸಂಚಾರಿ  ಪೊಲೀಸರು ಶನಿವಾರ ಹೆಸರುಗಳು ಮತ್ತು ದೋಷಯುಕ್ತ ನಂಬರ್‌ ಪ್ಲೇಟ್‌ಗಳ ಬಳಕೆ ವಿರುದ್ಧ ವಿಶೇಷ ತಪಾಸಣೆ ನಡೆಸಿ 85 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಶ್ಚಿಮ ಸಂಚಾರ ವಿಭಾಗದಾದ್ಯಂತ ಬಸವನಗುಡಿ, ಜಯನಗರ, ಬನಶಂಕರಿ, ಜಾಲಹಳ್ಳಿ, ಯಶವಂತಪುರ, ಬ್ಯಾಟರಾಯನಪುರ, ಮಾಗಡಿರಸ್ತೆ ಮತ್ತು ಇತರ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 18 ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರ ಸಂಚಾರಿ  ಪೊಲೀಸರು ಶನಿವಾರ ಹೆಸರುಗಳು ಮತ್ತು ದೋಷಯುಕ್ತ ನಂಬರ್‌ ಪ್ಲೇಟ್‌ಗಳ ಬಳಕೆ ವಿರುದ್ಧ ವಿಶೇಷ ತಪಾಸಣೆ ನಡೆಸಿ 85 ಪ್ರಕರಣಗಳನ್ನು ದಾಖಲಿಸಿದ್ದಾರೆ. ಪಶ್ಚಿಮ ಸಂಚಾರ ವಿಭಾಗದಾದ್ಯಂತ ಬಸವನಗುಡಿ, ಜಯನಗರ, ಬನಶಂಕರಿ, ಜಾಲಹಳ್ಳಿ, ಯಶವಂತಪುರ, ಬ್ಯಾಟರಾಯನಪುರ, ಮಾಗಡಿರಸ್ತೆ ಮತ್ತು ಇತರ ಪ್ರದೇಶಗಳನ್ನು ಒಳಗೊಂಡಂತೆ ಸುಮಾರು 18 ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.

ವಾಹನ ಮಾಲೀಕರಿಗೆ ತಮ್ಮ ಸಂಸ್ಥೆಗಳ ಹೆಸರು ಅಥವಾ ಮೋಟಾರು ವಾಹನಗಳ ಕಾಯ್ದೆಯ ಪ್ರಕಾರ ಉಲ್ಲಂಘನೆಯಾಗಿರುವ ಅಲಂಕಾರಿಕ ಸಂಖ್ಯೆಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

42,500 ದಂಡ ಮೊತ್ತವನ್ನು ಸಂಗ್ರಹಿಸಲಾಗಿದೆ ಮತ್ತು ಎಲ್ಲಾ 85 ದೋಷಯುಕ್ತ ನಂಬರ್ ಪ್ಲೇಟ್ ಬೋರ್ಡ್‌ಗಳನ್ನು ಸ್ಥಳದಲ್ಲೇ ತೆಗೆದುಹಾಕಲಾಗಿದೆ ಎಂದು ಡಿಸಿಪಿ (ಪಶ್ಚಿಮ - ಸಂಚಾರ) ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ಇನ್ನು ಈ ಅಭಿಯಾನ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ರಿಟ್ ಅರ್ಜಿಯ ನಂತರ ದೋಷಯುಕ್ತ ನಂಬರ್ ಪ್ಲೇಟ್‌ಗಳ ವಿರುದ್ಧ ಹೈಕೋರ್ಟ್ ಆದೇಶವನ್ನು ನೀಡಿತ್ತು. ಕನ್ನಡ ಪರ, ಭ್ರಷ್ಟಾಚಾರ ವಿರೋಧಿ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಹೆಸರನ್ನು ಟ್ರಾಫಿಕ್ ಪೊಲೀಸರು ಕಂಡಿಕೊಂಡಿದ್ದಾರೆ, . ಸರ್ಕಾರಿ ಇಲಾಖೆಯು ಬಾಡಿಗೆಗೆ ತೆಗೆದುಕೊಳ್ಳುವ ಕ್ಯಾಬ್‌ಗಳು ಸಹ ರಾಜ್ಯ ಸರಕಾರದ ಲಾಂಛನವನ್ನು  ನಂಬರ್‌ ಪ್ಲೇಟ್‌ಗಳೊಂದಿಗೆ ಹೊಂದಿದೆ ವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com