ಬ್ಲ್ಯಾಕ್ ಫಂಗಸ್: ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಅಂಕಿ ಅಂಶದಲ್ಲಿ ವ್ಯತ್ಯಯ; ಗೊಂದಲ ನಿರ್ಮಾಣ!

ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿದ್ದು, ಈ ನಡುವಲ್ಲೇ ಜಿಲ್ಲಾ ಆಡಳಿತ ಮಂಡಳಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ಅಂಕಿ ಅಂಶಗಳು ಗೊಂದಲಗಳನ್ನು ಮೂಡಿಸುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿದ್ದು, ಈ ನಡುವಲ್ಲೇ ಜಿಲ್ಲಾ ಆಡಳಿತ ಮಂಡಳಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತಿರುವ ಅಂಕಿ ಅಂಶಗಳು ಗೊಂದಲಗಳನ್ನು ಮೂಡಿಸುತ್ತಿವೆ. 

ಬ್ಲ್ಯಾಕ್ ಫಂಗಸ್ ಪ್ರಕರಣಗಳ ಕುರಿತು ನಿನ್ನೆಯಷ್ಟೇ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಕಿ ಅಂಶ ಪ್ರಕಟಿಸಿದ್ದು, ಜಿಲ್ಲೆಯಲ್ಲಿ 108 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 98 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 5 ಮಂದಿ ವೈದ್ಯಕೀಯ ಸಲಹೆಗಳನ್ನು ನೀಡಿದ್ದರೂ ಚಿಕಿತ್ಸೆ ಪಡೆದುಕೊಳ್ಳದೆ ಹಿಂತಿರುಗಿದ್ದಾರೆಂದು ಹೇಳಿತ್ತು. 

ಆದರೆ, ಜಿಲ್ಲಾ ಆಡಳಿತ ಮಂಡಳಿಯು ಜಿಲ್ಲೆಯಲ್ಲಿ 91 ಪ್ರಕರಣಗಳು ಪತ್ತೆಯಾಗಿದ್ದು, 80 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದು, 10 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದೆ. 

ಹೀಗಾಗಿ ಜಿಲ್ಲಾ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳು ಗೊಂದಲ ಮೂಡಿಸುತ್ತಿವೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಡಳಿತ ಮಂಡಳಿ ಗೊಂದಲಕರ ಅಂಕಿಅಂಶ ನೀಡುತ್ತಿರುವುದು ಇದು ಮೊದಲನೇನಲ್ಲ. ಈ ಹಿಂದೆಯೂ ಈ ರೀತಿ ಹಲವು ಬಾರಿ ವಿಭಿನ್ನ ರೀತಿಯ ಅಂಕಿಅಂಶಗಳು ಪ್ರಕಟಗೊಂಡಿವೆ.  

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅನಂತ್ ದೇಸಾಯಿಯವರು, ಸೋಂಕು ಪ್ರಕರಣಗಳಲ್ಲಿ ಸಂಖ್ಯೆಗಳು ಕೆಲವೊಮ್ಮೆ ಏರುಪೇರಾಗುವ ಸಾಧ್ಯತೆಗಳಿವೆ.  ಕೆಲವರು ಬಾಗಲಕೋಟೆ ಜಿಲ್ಲೆಯವರಲ್ಲದಿದ್ದರೂ, ಜಿಲ್ಲೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾರೆ. ಇಂತಹವರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿರುತ್ತದೆ. ನಾವು ಕೇವಲ ಸ್ಥಳೀಯರನ್ನು ಮಾತ್ರ ಪಟ್ಟಿ ಮಾಡುತ್ತಿದ್ದೇವೆ. ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ನೀಡುತ್ತಿದ್ದೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com