ಕೋವಿಡ್-19: ರಾಜ್ಯದಲ್ಲಿ ಸೋಂಕು ಇಳಿದರೂ ಸಾವಿನ ಪ್ರಮಾಣದಲ್ಲಿ ಏರಿಕೆ; ಹೆಚ್ಚಿದ ಆತಂಕ

ರಾಜ್ಯದಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆಯಾಗಿ, ಗುಣಮುಖರ ಪ್ರಮಾಣ ಸುಧಾರಿಸುತ್ತಿದ್ದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಮಾತ್ರ ಆತಂಕವನ್ನು ಹೆಚ್ಚು ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆಯಾಗಿ, ಗುಣಮುಖರ ಪ್ರಮಾಣ ಸುಧಾರಿಸುತ್ತಿದ್ದರೂ ಸಾವಿನ ಪ್ರಮಾಣ ಏರಿಕೆಯಾಗುತ್ತಿರುವುದು ಮಾತ್ರ ಆತಂಕವನ್ನು ಹೆಚ್ಚು ಮಾಡಿದೆ. 

ರಾಜ್ಯದಲ್ಲಿ ನಿನ್ನೆ ಒಂದೇ ದಿನ 168 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 33,602ಕ್ಕೆ ಏರಿಕೆಯಾಗಿದೆ. ಜೊತೆಗೆ ಸಾವಿನ ಪ್ರಮಾಣ ಶೇ.1.2ರಿಂದ ಶೇ. 1.19ಕ್ಕೆ ಏರಿಕೆಯಾಗಿದೆ. 

ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮರಣ ಪ್ರಮಾಣ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 34 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 15,410ಕ್ಕೆ ತಲುಪಿದೆ. ಸಿಲಿಕಾನ್ ಸಿಟಿಯಲ್ಲಿ ಸಾವಿನ ಪ್ರಮಾಣ ಶೇ.1.27ರಿಂದ 1.28ಕ್ಕೆ ಏರಿಕೆಯಾಗಿದೆ. 

ಇನ್ನು ರಾಜ್ಯದಲ್ಲಿ ಸಕ್ರಿಯ ಪ್ರಮಾಣ 1,46,726 ರಿಂದ 1,37,050ಕ್ಕೆ ಇಳಿಕೆಯಾಗಿದ್ದರೆ, ಬೆಂಗಳೂರಿನಲ್ಲಿ 78,943 ರಿಂದ 73,844ಕ್ಕೆ ಇಳಿಕೆಯಾಗಿದೆ. 

ರಾಜ್ಯದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದರೂ, ಗುಣಮುಖರ ಪ್ರಮಾಣ ಸುಧಾರಿಸುತ್ತಿದೆ. ರಾಜ್ಯದಲ್ಲಿ ಶೇ.93.54ರಷ್ಟಿದ್ದ ಚೇತರಿಕೆ ಪ್ರಮಾಣ ಶೇ.93.89ಕ್ಕೆ ತಲುಪಿದೆ. ಇನ್ನು ಬೆಂಗಳೂರಿನಲ್ಲಿ ಶೇ.92.15ರಿಂದ ಶೇ.92.58ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com