ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯದ ಈ ಮೂರು ಗ್ರಾಮ ಪಂಚಾಯಿತಿಗಳು ಇತರರಿಗೆ ಮಾದರಿ!

ಕೊರೋನಾ ಎರಡನೇ ಅಲೆಯ ಹೊಡೆತದಿಂದ ಇನ್ನೂ ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳು ಹೊರ ಬಂದಿಲ್ಲದಿರುವಾಗ ಮೂರು ಗ್ರಾಮ ಪಂಚಾಯತಿಗಳು ತಮ್ಮ ಕಾರ್ಯವೈಖರಿಯಿಂದ ದೇಶ ಮಟ್ಟದಲ್ಲಿ ಗುರುತಿಸಿಕೊಂಡಿವೆ.

Published: 19th June 2021 09:25 AM  |   Last Updated: 19th June 2021 01:52 PM   |  A+A-


Munirabad GP near Koppal

ಕೊಪ್ಪಳದ ಹತ್ತಿರವಿರುವ ಮುನಿರಾಬಾದ್ ಗ್ರಾಮ ಪಂಚಾಯಿತಿ

Posted By : Sumana Upadhyaya
Source : The New Indian Express

ಕೊಪ್ಪಳ: ಕೊರೋನಾ ಎರಡನೇ ಅಲೆಯ ಹೊಡೆತದಿಂದ ಇನ್ನೂ ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳು ಹೊರ ಬಂದಿಲ್ಲದಿರುವಾಗ ಮೂರು ಗ್ರಾಮ ಪಂಚಾಯತಿಗಳು ತಮ್ಮ ಕಾರ್ಯವೈಖರಿಯಿಂದ ದೇಶ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಕಳೆದ ವರ್ಷ ಮೊದಲ ಅಲೆಯ ಸಮಯದಲ್ಲಿಯೇ ಈ ಗ್ರಾಮ ಪಂಚಾಯತ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ.

ಕೊರೋನಾ ಸಾಂಕ್ರಾಮಿಕ ವಿರುದ್ಧ ಉತ್ತಮವಾಗಿ ಹೋರಾಡಿದ ಮೂರು ಗ್ರಾಮ ಪಂಚಾಯತಿಗಳನ್ನು ಪ್ರತಿ ರಾಜ್ಯಗಳಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯ್ಕೆ ಮಾಡಿದೆ. ಕರ್ನಾಟಕದಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಗ್ರಾಮ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮ ಪಂಚಾಯತ್ ಮತ್ತು ಕೊಡಗು ಜಿಲ್ಲೆಯಿಂದ ಹೊಡ್ಡೂರು ಗ್ರಾಮ ಪಂಚಾಯತ್ ಗಳು ಆಯ್ಕೆಗೊಂಡಿವೆ.

ಮುನಿರಾಬಾದ್ ಗ್ರಾಮ ಪಂಚಾಯತ್  ಕೊರೋನಾ ಸಮಯದಲ್ಲಿ ಜನರ ಚಲನವಲನಗಳ ಮೇಲೆ, ಫುಡ್ ಕಿಟ್ ವಿತರಣೆ, ಕೋವಿಡ್-19 ನಿಯಂತ್ರಣ ಸಾಧನಗಳು, ಬಡವರಿಗೆ ವೈದ್ಯಕೀಯ ನೆರವು ಮತ್ತು ಶುಚಿತ್ವ ಕಾರ್ಯಗಳ ಮೇಲೆ ನಿಗಾ ವಹಿಸಿದ್ದರೆ, ಅರ್ಹ ಪ್ರತಿಯೊಬ್ಬರಿಗೂ ಲಸಿಕೆ ಅಭಿಯಾನ ಕೈಗೊಳ್ಳಲು ಸೂಕ್ತ ದಾಖಲಾತಿ ಮಾಡುವಲ್ಲಿ, ಕೋವಿಡ್ ಕಾರ್ಯ ಪಡೆಗೆ ಸೂಕ್ತ ತರಬೇತಿ ನೀಡುವಲ್ಲಿ, ಶುಚಿತ್ವ ಕಾರ್ಯ, ವೈದ್ಯಕೀಯ ನೆರವು ಮತ್ತು ಉಚಿತ ಫುಡ್ ಕಿಟ್ ವಿತರಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮ ಪಂಚಾಯತ್ ಮಾದರಿಯಾಗಿದೆ.

ಕೊಡಗು ಜಿಲ್ಲೆಯ ಹೊಡ್ಡೂರು ಗ್ರಾಮ ಪಂಚಾಯತ್, ವಲಸಿಗರ ಮೇಲೆ ಕೋವಿಡ್ -19 ಪರೀಕ್ಷೆಗಳನ್ನು ನಡೆಸಿ, ನೈರ್ಮಲ್ಯೀಕರಣ ಚಟುವಟಿಕೆಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಮನೆಯಲ್ಲಿ ಕ್ವಾರಂಟೈನ್ ಆದವರಿಗೆ  ಆಹಾರ ಕಿಟ್‌ಗಳನ್ನು ಪೂರೈಸಿ ಮಾದರಿ ಕೆಲಸ ಮಾಡಿದೆ. 

ಮುನಿರಾಬಾದ್ ಗ್ರಾಮ ಪಂಚಾಯತ್ ಹೊರಗಿನಿಂದ ಬಂದವರಿಗೆ ಕೊರೋನಾ ಪರೀಕ್ಷೆ ನಡೆಸಲು ಕಳೆದ ವರ್ಷ 24X7 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿತ್ತು. ಅವುಗಳ ಮೇಲ್ವಿಚಾರಣೆ ಮಾಡಿ ಯಶಸ್ವಿಯಾಯಿತು.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp