ಉತ್ತಮ ಮಳೆಯಿಂದಾಗಿ ಮೈದುಂಬಿಕೊಂಡ ಜಲಪಾತಗಳು: ಪ್ರವಾಸಿಗರನ್ನು ಸ್ವಾಗತಿಸಲು ಸಕಲ ಸಿದ್ಧತೆ!

ರಾಜ್ಯದಲ್ಲಿ ಕೊವಿಡ್ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದೆ, ಇದರ ಜೊತೆಗೆ ಉತ್ತಮ ಮಳೆಯಾಗುತ್ತಿರುವುದರಿಂದ ಜಲಪಾತಗಳೆಲ್ಲಾ ಉಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಸ್ವಾಗತಕ್ಕೆ ಸಿದ್ದವಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ಕೊವಿಡ್ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದೆ, ಇದರ ಜೊತೆಗೆ ಉತ್ತಮ ಮಳೆಯಾಗುತ್ತಿರುವುದರಿಂದ ಜಲಪಾತಗಳೆಲ್ಲಾ ಉಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಸ್ವಾಗತಕ್ಕೆ ಸಿದ್ದವಾಗಿವೆ.

ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಹಲವು ಜಲಪಾತ ತುಂಬಿ ಹರಿಯುತ್ತಿವೆ, ಹೀಗಾಗಿ ಪ್ರವಾಸಿಗರನ್ನು ಸ್ವಾಗತಿಸಲು ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳು ಸಿದ್ಧತೆ ಆರಂಭಿಸಿವೆ.

ಲಾಕ್ ಡೌನ್ ಹೊರತಾಗಿಯೂ ಕರ್ನಾಟಕದ ಘಾಟ್ ಪ್ರದೇಶಳಲ್ಲಿರುವ ಜಲಪಾತಗಳನ್ನು ನೋಡಲು ಕ್ವೈರಿ ಆರಂಭವಾಗಿತ್ತು. ಬೆಂಗಳೂರಿನ ಹಲವಾರು ಪ್ರವಾಸಿಗರಿಗೆ ಚಿಕ್ಕಮಗಳೂರು ಮತ್ತು ಕೂರ್ಗ್‌ಗಳು ಪ್ರವಾಸ ತಾಣವಾಗಿ ಕಂಡರೇ, ಉತ್ತರ ಕರ್ನಾಟಕದ  ಜನರು ದಾಂಡೇಲಿ ಪ್ರವಾಸ ಮಾಡಲು ಪ್ಲಾನ್ ಮಾಡಿದ್ದಾರೆ.

ದೀರ್ಘಕಾಲದ ಲಾಕ್‌ಡೌನ್ ಕಾರಣ, ಈ ವರ್ಷದ ಮಾನ್ಸೂನ್ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತಮ ಲಾಭ ತರುವ ನಿರೀಕ್ಷೆಯಿದೆ. ಜೂನ್ 21 ರಿಂದ ಬಸ್ಸುಗಳ ಸಂಚಾರ ಆರಂಭವಾಗುತ್ತಿರುವುದರಿಂದ, ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಿಗೆ ಹೆಚ್ಚಿನ ಜನ ಬರುವ ನಿರೀಕ್ಷೆಯಿದೆ. ಉತ್ತರ ಕನ್ನಡ ಜಿಲ್ಲೆಯ ಹಲವಾರು ಹೋಂಸ್ಟೇ ಮಾಲೀಕರು ಪ್ರವಾಸಿಗರಿಗೆ ತಮ್ಮ ವಾಸ್ತವ್ಯದ ಸೌಲಭ್ಯಗಳನ್ನು ತೆರೆಯುವುದಾಗಿ  ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಹೊಸ ಪ್ರವಾಸೋದ್ಯಮ ಸನ್ನಿವೇಶವನ್ನು ನಿಭಾಯಿಸುವಾಗ ಹೋಂಸ್ಟೇ ಮಾಲೀಕರು ಮತ್ತು ರೆಸಾರ್ಟ್ ನಿರ್ವಾಹಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಟ್ರಾವೆಲ್ ಏಜೆನ್ಸಿ ಮಾಲೀಕ ಗೋವಿಂದ ಕೆ ಸಲಹೆ ನೀಡಿದ್ದಾರೆ. ಹಲವಾರು ಪ್ರವಾಸಿಗರು ಈಗ ಕಡಿಮೆ ಜನಸಂದಣಿಯನ್ನು ಹೊಂದಿರುವ ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆರೋಗ್ಯಕರ ವಾತಾವರಣವನ್ನು ಒದಗಿಸಲು ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಸಾಮರ್ಥ್ಯವನ್ನು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com