ಶ್ರೀಮಂತ ಜೀವವೈವಿಧ್ಯಗಳ ಸೆಲೆ: ಸಿಂಗನಾಯಕನಹಳ್ಳಿ ಕೆರೆ ಆವರಣದಲ್ಲಿನ ಮರ ಕಡಿಯುವುದಕ್ಕೆ ತೀವ್ರ ವಿರೋಧ

ಕೆರೆ ಅಭಿವೃದ್ಧಿ ಹೆಸರಿನಲ್ಲಿ ಸಿಂಗನಾಯಕನಹಳ್ಳಿ ಕೆರೆ ಆವರಣದಲ್ಲಿನ ಸುಮಾರು 3,613 ಮರಗಳನ್ನು ಕಡಿಯುವುದರ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸುವ ಸಮಯ ಮುಗಿಯುತ್ತಿರುವ ಕಾರಣ, ಸ್ಥಳೀಯರು, ಪರಿಸರ ಸಂರಕ್ಷಣಾವಾದಿಗಳು ಮತ್ತು ಎನ್‌ಜಿಒ ಸದಸ್ಯರು  ಸಿಂಗನಾಯಕನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. 
ಸಿಂಗನಾಯಕನಹಳ್ಳಿ ಕೆರೆ ಆವರಣ
ಸಿಂಗನಾಯಕನಹಳ್ಳಿ ಕೆರೆ ಆವರಣ

ಬೆಂಗಳೂರು: ಕೆರೆ ಅಭಿವೃದ್ಧಿ ಹೆಸರಿನಲ್ಲಿ ಸಿಂಗನಾಯಕನಹಳ್ಳಿ ಕೆರೆ ಆವರಣದಲ್ಲಿನ ಸುಮಾರು 3,613 ಮರಗಳನ್ನು ಕಡಿಯುವುದರ ವಿರುದ್ಧ ಕರ್ನಾಟಕ ಅರಣ್ಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸುವ ಸಮಯ ಮುಗಿಯುತ್ತಿರುವ ಕಾರಣ, ಸ್ಥಳೀಯರು, ಪರಿಸರ ಸಂರಕ್ಷಣಾವಾದಿಗಳು ಮತ್ತು ಎನ್‌ಜಿಒ ಸದಸ್ಯರು  ಸಿಂಗನಾಯಕನಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. 

‘ನಮ್ಮ ಬೆಂಗಳೂರು ಫೌಂಡೇಷನ್‌’ (ಎನ್‌ಬಿಎಫ್‌) ಸದಸ್ಯರು, ಪರಿಸರ ವಿಜ್ಞಾನಿಗಳು ಹಾಗೂ ಪರಿಸರ ಕಾರ್ಯಕರ್ತರನ್ನು ಒಳಗೊಂಡ ತಂಡವು ಸ್ಥಳಕ್ಕೆ ಸೋಮವಾರ ಭೇಟಿ ಕೆರೆಯಂಗಳಕ್ಕೆ ನೀಡಿ ಪರಿಶೀಲನೆ ನಡೆಸಿತು. ಸಣ್ಣ ನೀರಾವರಿ ಮತ್ತು ಅರಣ್ಯ ಇಲಾಖೆ ಹೇಳಿದಂತೆ ಅವರು ಹುಲ್ಲುಗಾವಲುಗಳನ್ನು  ಪರಿಶೀಲಿಸಿದರು ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಇಲ್ಲಿನ, ಮರಗಳು 20-25 ವರ್ಷ ಹಳೆಯದಲ್ಲ ಬದಲಿಗೆ ಮರಗಳು ವಾಸ್ತವವಾಗಿ 40- 45 ವರ್ಷಕ್ಕಿಂತ ಮೇಲ್ಪಟ್ಟವು ಎಂದು ಹೇಳಲಾಗಿದೆ.

ಬಿಬಿಬಿಎಂಪಿ ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ವಿಜಯ್‌ ನಿಶಾಂತ್‌ ಅವರು ಮಾತನಾಡಿ, 'ನಾವು ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನರಿಯೊಂದರ ಕಳೇಬರವು ಕಾಣಸಿಕ್ಕಿದೆ. ಇಲ್ಲಿ ನರಿಗಳೂ ಹೇರಳ ಸಂಖ್ಯೆಯಲ್ಲಿವೆ. ಕಡಲೆಕಾಯಿಗಳ ನೆಲದ ಗೂಡುಗಳು, ದೊಡ್ಡ ಇರುವೆ ಬೆಟ್ಟಗಳು, ಹಾವಿನ  ಹೊಂಡಗಳು, ಸಸ್ಯಹಾರಿ ಬಿಲಗಳು ಮತ್ತು ಇತರ ಹುಲ್ಲುಗಾವಲು ವನ್ಯಜೀವಿಗಳು ಇರುವುದು ತಿಳಿದುಬಂದಿದೆ. ಇಲ್ಲಿನ ಮರಗಳನ್ನು ಕಡಿದು ಕೆರೆಯ ಹೂಳೆತ್ತಿದರೆ ಇಲ್ಲಿನ ಪರಿಸರ ವ್ಯವಸ್ಥೆ ಸಂಪೂರ್ಣ ಹದಗೆಡಲಿದೆ ಎಂದು ಹೇಳಿದರು.

ಅರಣ್ಯ ಇಲಾಖೆಗೆ ಪತ್ರ
ಇನ್ನು ಪರಿಸರ ಸಂರಕ್ಷಣಾವಾದಿಗಳು ಮತ್ತು ಸ್ಥಳೀಯ ನಾಗರಿಕರು ಪರ್ಯಾಯಗಳನ್ನು ಹುಡುಕುವಂತೆ ಅರಣ್ಯ ಮತ್ತು ರಾಜ್ಯ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಂತೆಯೇ ಪತ್ರದ ಪ್ರತಿಯನ್ನು ಅವರು ಸಣ್ಣ ನೀರಾವರಿ ಇಲಾಖೆ ಮತ್ತು ಮುಖ್ಯಮಂತ್ರಿಗೂ ತಲುಪಿಸಿದ್ದಾರೆ. ಪತ್ರ ಬರೆದು  ಯೋಜನೆಯ ಸಂಪೂರ್ಣ ವಿವರಗಳನ್ನು ಕೇಳಲಾಗಿದ್ದು, ನೀರಿನ ಸಂಪರ್ಕ ಮತ್ತು ಟ್ಯಾಂಕ್ ಪುನಃಸ್ಥಾಪನೆಗಾಗಿ ಮರಗಳ ಕಡಿತವನ್ನು ಒಪ್ಪಲಾಗುದಿಲ್ಲ. ಜೀವವೈವಿದ್ಯಗಳ ಆವಾಸಸ್ಥಾನ, ಜಲಾನಯನ ಪ್ರದೇಶದ ಬಗ್ಗೆ ಮತ್ತು ಸಂಪೂರ್ಣ ಯೋಜನೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಪ್ರಾಜೆಕ್ಟ್ ವೃಕ್ಷಾ  ಮುಖ್ಯಸ್ಥ ವಿಜಯ್ ನಿಶಾಂತ್ ಹೇಳಿದ್ದಾರೆ. 

ಶ್ರೀಮಂತ ಜೀವವೈವಿಧ್ಯತೆ
ಉತ್ತರ ಬೆಂಗಳೂರಿನಲ್ಲಿ ಇಂತಹ ಶ್ರೀಮಂತ ಜೀವವೈವಿಧ್ಯತೆಯ ತಾಣವನ್ನು ಕಂಡು ಅನೇಕ ನಾಗರಿಕರು ಅಚ್ಚರಿಪಟ್ಟಿದ್ದಾರೆ. ಈ ಪ್ರದೇಶವು ನೀರಿನ ಸಂಗ್ರಹ ಮತ್ತು ಅಂತರ್ಜಲ ಸಂರಕ್ಷಣೆಗೆ ಸಹಾಯ ಮಾಡುತ್ತಿದೆ. ಕೆರೆ ಪುನಃಶ್ಛೇತನ ಅಗತ್ಯವಿದ್ದರೂ, ಜೀವವೈವಿಧ್ಯತೆಯ ನಾಶವನ್ನು ಒಪ್ಪಿಕೊಳ್ಳಲಾಗುವುದಿಲ್ಲ  ಎಂದು ಸಂರಕ್ಷಣಾ ತಜ್ಞರು ಹೇಳಿದ್ದಾರೆ. ಸಿಂಗನಾಯಕನಹಳ್ಳಿಗೆ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಪಟ್ಟಿ ಮಾಡಲಾಗಿರುವ ಸರೋವರಗಳಿಗೆ ಸಂಪರ್ಕ ಕಲ್ಪಿಸುವ ಕೆರೆಗಳು ಮತ್ತು ಹೆಬ್ಬಾಳ-ನಾಗವಾರ ಕೆರೆಗಳನ್ನು ಸಂಪರ್ಕಿಸುವ ರಾಜಕಾಲುವೆಗಳ ಪಟ್ಟಿಯನ್ನು ಸರ್ಕಾರ ಸಾರ್ವಜನಿಕವಾಗಿ ಪ್ರಕಟಿಸುವಂತೆ  ಫ್ರೆಂಡ್ಸ್ ಆಫ್ ಲೇಕ್ಸ್ ಸದಸ್ಯರು ಒತ್ತಾಯಿಸಿದೆ. 

ಸ್ಥಳೀಯರ ವಿರೋಧ
ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿಯೊಬ್ಬರು, 'ಈ ಪ್ರದೇಶದಲ್ಲಿ ನಿತ್ಯವೂ ಸಾವಿರಕ್ಕೂ ಹೆಚ್ಚು ಗೋವುಗಳು ಮೇಯುತ್ತಿರುತ್ತವೆ. ಈ ಮರಗಳನ್ನೆಲ್ಲ ಕಡಿದರೆ ಇಲ್ಲಿ ಜಾನುವಾರುಗಳನ್ನು ಮೇಯಿಸುವುದಕ್ಕೂ ಸಮಸ್ಯೆ ಆಗಲಿದೆ.ಕಿರು ಅರಣ್ಯದಂತೆ ಬೆಳೆದಿರುವ ಈ ಪ್ರದೇಶದಲ್ಲಿ ನೂರಾರು ನವಿಲುಗಳು ಹಾಗೂ  ನಾನಾ ಬಗೆಯ ಪಕ್ಷಿಗಳು ಆಶ್ರಯ ಪಡೆದಿವೆ. ಈಗ ನವಿಲು ಸಂತಾನೋತ್ಪತ್ತಿ ಮಾಡುವ ಸಮಯ. ನವಿಲು ಮೊಟ್ಟೆ ಇಟ್ಟ ಜಾಗವನ್ನೂ ಪರಿಸರ ಕಾರ್ಯಕರ್ತರ ತಂಡದವರಿಗೆ ತೋರಿಸಲಾಗಿದೆ ಎಂದು ಹೇಳಿದರು.

ಎನ್‌ಬಿಎಫ್‌ನ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ಅವರು ಮಾತನಾಡಿ, 'ಕೆರೆ ಅಭಿವೃದ್ಧಿಪಡಿಸುವುದನ್ನು ನಾವು ವಿರೋಧಿಸುವುದಿಲ್ಲ. ಮರಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ. ಕಾಮಗಾರಿಯಿಂದ ಇಲ್ಲಿನ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಲಿ. ಇಲ್ಲಿ  ಕಡಿಯಲು ಉದ್ದೇಶಿಸಿರುವ ಮರಗಳಿಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುನ್ನವೇ ಗುರುತು ಸಂಖ್ಯೆ ನೀಡಿದ್ದು ಕಂಡು ಆಶ್ಚರ್ಯವಾಯಿತು ಎಂದು ಹೇಳಿದರು. 

ಆನ್ ಲೈನ್ ನಲ್ಲೂ ಅಭಿಯಾನ
ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ 6,316 ಮರಗಳನ್ನು ಕಡಿಯುವುದಕ್ಕೆ ಪರಿಸರ ಕಾರ್ಯಕರ್ತರಿಂದ ಹಾಗೂ ವಿವಿಧ ಸಂಘಟನೆಗಳಿಂದ ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ. ಈ ಕೆರೆಯಂಗಳದಲ್ಲಿ ಬೆಳೆದಿರುವ ಕಿರು ಅರಣ್ಯ ಸಂರಕ್ಷಣೆಗಾಗಿ ಆನ್‌ಲೈನ್‌ ನಲ್ಲೂ ಅಭಿಯಾನ ಆರಂಭವಾಗಿದೆ. ಈ ಕೆರೆಯಂಗಳದ  ಮರಗಳನ್ನು ಉಳಿಸಿಕೊಳ್ಳಲು ಹಮ್ಮಿಕೊಂಡಿರುವ ಆನ್‌ಲೈನ್‌ ಅಭಿಯಾನಕ್ಕೆ (https://act.jhatkaa.org/campaigns/no-axing-of-trees-hebbal-nagwara-valley) ಭಾರಿ ಬೆಂಬಲ ವ್ಯಕ್ತವಾಗಿದೆ. 8 ಸಾವಿರಕ್ಕೂ ಅಧಿಕ ಮಂದಿ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.  ಮರಗಳನ್ನು ಕಡಿಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ನಮ್ಮ ಬೆಂಗಳೂರು ಫೌಂಡೇಷನ್‌ ಬೆಂಗಳೂರು ನಗರ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ. 

‘ಕೆರೆ ಅಭಿವೃದ್ಧಿಗಾಗಿ ಮರ ಕಡಿಯುವ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ (aranya.gov.in) ಹಂಚಿಕೊಂಡಿರುವ ಮಾಹಿತಿಯಲ್ಲಿ ಇಲ್ಲಿನ ಜೀವವೈವಿಧ್ಯದ ಬಗ್ಗೆ ಉಲ್ಲೇಖವೇ ಇಲ್ಲ. ಇಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಪರಿಸರ ವ್ಯವಸ್ಥೆ ದಶಕಗಳಿಂದ  ಅಂತರ್ಜಲ ವೃದ್ಧಿಗೂ ಕೊಡುಗೆ ನೀಡುತ್ತಿದೆ. ಈ ಅಂಶಗಳನ್ನೂ ಪರಿಗಣಿಸಬೇಕು’ ಎಂದು ಪ್ರತಿಷ್ಠಾನವು ಒತ್ತಾಯಿಸಿದೆ.

ಆಕ್ಷೇಪಣೆ ಸಲ್ಲಿಕೆ-ಕಾಲಾವಕಾಶ ಹೆಚ್ಚಿಸಿ
ಕೆರೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಕುರಿತು ಆಕ್ಷೇಪಣೆ ಸಲ್ಲಿಸಲು ಜೂನ್‌ 14ರಿಂದ 24ರವರೆಗೆ ಮಾತ್ರ ಅರಣ್ಯ ಇಲಾಖೆ ಕಾಲಾವಕಾಶ ನೀಡಿದೆ. ಲಾಕ್‌ಡೌನ್‌ ಜಾರಿಯಲ್ಲಿದ್ದ ಕಾರಣ ಈ ಕಾಲಾವಕಾಶವನ್ನು ಹೆಚ್ಚಿಸಬೇಕು’ ಎಂದು ವಿನೋದ್‌ ಜೇಕಬ್‌ ಒತ್ತಾಯಿಸಿದರು.

ಅಂತಾರಾಷ್ಟ್ರೀಯ ಬೆಂಬಲ
ಏತನ್ಮಧ್ಯೆ, ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಸೋಮವಾರ ಸಂರಕ್ಷಣಾವಾದಿಗಳಿಗೆ ತಮ್ಮ ಬೆಂಬಲವನ್ನು ನೀಡಿದರು ಮತ್ತು ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com