ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ

ಕೋವಿಡ್-19 ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ.
ಇಎಸ್ಐಸಿ ಕೋವಿಡ್-19 ಪರಿಹಾರ ಯೋಜನೆ

ಕಾರ್ಮಿಕರ ರಾಜ್ಯ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಇ.ಎಸ್.ಐ ಕಾಯ್ದೆಯಡಿಯಲ್ಲಿ ಬರುವ ವಿಮಾದಾರರ ಜೀವನದಲ್ಲಿ ಅನೇಕ ಸಮಸ್ಯೆಗಳು ಉಧ್ಭವಿಸಿವೆ ಮತ್ತು ಈ ಮಾರಕ ಸಾಂಕ್ರಾಮಿಕದಿಂದ ಹಲವು ಕುಟುಂಬಗಳು ತಮ್ಮ ಗಳಿಸುವ ಸದಸ್ಯರನ್ನು ಕಳೆದುಕೊಂಡಿವೆ.

ಈ ಸಾಂಕ್ರಾಮಿಕದಿಂದ ಪ್ರಾಣ ಕಳೆದುಕೊಂಡ ವಿಮಾದಾರರ ಅವಲಂಬಿತರಿಗಾಗಿ “ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆ” ಯನ್ನು ಇ.ಎಸ್.ಐ.ಸಿ ಪ್ರಕಟಿಸಿದೆ ಎಂದು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ 15.06.2021 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಅದಲ್ಲದೆ ಈ ಹಿಂದೆ ಈ ಸೌಲಭ್ಯವನ್ನು ಕೇವಲ ಔದ್ಯೋಗಿಕ ಗಾಯಗಳಾದ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತಿತ್ತು ಇದೀಗ ಈ ಸೌಲಭ್ಯವನ್ನು ಕೋವಿಡ್-19 ನಿಂದಾದ ಮರಣಗಳಿಗೂ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೀಗ ನೋಂದಾಯಿತ  ಮಹಿಳೆಯ ಮರಣವಾದ ಸಂದರ್ಭದಲ್ಲಿ ಅವರ ಪತಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಯೋಜನೆಯು 24.03.2020 ರಿಂದ ಎರಡು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ.

ಇ.ಎಸ್.ಐ.ಸಿ ಕೋವಿಡ್ -19 ಪರಿಹಾರ ಯೋಜನೆಯಡಿಯಲ್ಲಿ, ಅವಲಂಬಿತರ ಸೌಲಭ್ಯದಲ್ಲಿ ನೀಡಿದಂತೆಯೇ, ನಗದು ಲಾಭವನ್ನು ನೀಡಲಾಗುತ್ತದೆ. ಪ್ರತಿ ತಿಂಗಳು ಅವಲಂಬಿತರ ಖಾತೆಗಳಲ್ಲಿ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ ಪರಿಹಾರವು ವಿಮಾದಾರರ ವೇತನದ ಶೇ.90% ಅಥವಾ  ರೂ.1800/- ಗಳಾಗಿರುತ್ತದೆ.

ಈ ಪರಿಹಾರವನ್ನು ಪಡೆಯಲು, ಹಕ್ಕುದಾರರು ಕೋವಿಡ್ -19 ಪಾಸಿಟಿವ್ ವರದಿ ಮತ್ತು ಮರಣ ಪ್ರಮಾಣ ಪತ್ರವನ್ನು ಹತ್ತಿರದ ಇ.ಎಸ್.ಐ ಶಾಖಾ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹತ್ತಿರದ ಇ.ಎಸ್.ಐ.ಸಿ ಕಛೇರಿಯನ್ನು ಸಂಪರ್ಕಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com