ಬೆಂಗಳೂರು: ಆನ್ ಲೈನ್ ಮೂಲಕ 2 ಸಾವಿರ ಮಂದಿಗೆ ವಂಚನೆ, ಓರ್ವನ ಬಂಧನ

ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ನಂಬಿಸಿ ಮೋಸಮಾಡುತ್ತಿದ್ದ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ನಂಬಿಸಿ ಮೋಸಮಾಡುತ್ತಿದ್ದ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡಿ. ಎಸ್.ರಂಗನಾಥ್ ಬಂಧಿತ ಆರೋಪಿ. ಶೇ.25ರಷ್ಟು ಲಾಭಾಂಶದ ಆಮಿಷವೊಡ್ಡಿ 2 ಸಾವಿರ ಜನರಿಗೆ ಮೋಸ ಮಾಡಿದ್ದ ಆರೋಪಿ ನಿರ್ದಿಷ್ಟ ಕಚೇರಿ ಇಲ್ಲದೆ ಜಾಹೀರಾತು ಮೂಲಕ ವಂಚನೆ ಮಾಡುತ್ತಿದ್ದ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮೊದಲು 15 ಸಾವಿರ ಹೂಡಿಕೆ ಮಾಡಿ ಸದಸ್ಯತ್ವ ಪಡೆಯಬೇಕು. ಬಳಿಕ ಎಷ್ಟು ವರ್ಷಕ್ಕೆ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಜನರಿಗೆ ಮರಳು ಮಾಡುತ್ತಿದ್ದನು. 15 ಸಾವಿರ ರೂ ಹೂಡಿಕೆ ಮಾಡಿದರೇ 2021ರ ಡಿಸೆಂಬರ್ ನಲ್ಲಿ 1 ಲಕ್ಷ ಲಾಭಾಂಶ ನೀಡಿಕೆ, 2022ರಲ್ಲಿ 5 ಲಕ್ಷ ರೂ, 2023ರಲ್ಲಿ 12 ಲಕ್ಷ ರೂ, 2025ಕ್ಕೆ 25 ಲಕ್ಷ ರೂ ಲಾಭ ನೀಡುವ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಇನ್ನು, 50 ಸಾವಿರ ರೂ ಹೂಡಿಕೆ ಮಾಡಿದರೇ 2021ರ ಡಿಸೆಂಬರ್ ನಲ್ಲಿ 3 ಲಕ್ಷ ಲಾಭಾಂಶ ನೀಡಿಕೆ, 2022ರಲ್ಲಿ 30 ಲಕ್ಷ ರೂ, 2023ರಲ್ಲಿ 45 ಲಕ್ಷ ರೂ, 2025ಕ್ಕೆ 2 ಕೋಟಿ ರೂ ಲಾಭ ನೀಡುವ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ಎಂದರು.

ಸಾರ್ವಜನಿಕರಿಗೆ ವಾಟ್ಸಾಬ್, ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣ ಹಾಗೂ ಜೂಮ್ ಮೀಟಿಂಗ್ ಮೂಲಕ ಪ್ರಚಾರ ಮಾಡಿ ಸಾರ್ವಜನಿಕರಿಗೆ ಪುಸಲಾಯಿಸಿ ಸುಮಾರು 2 ಸಾವಿರ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಹೆಚ್ಚಿನ ಲಾಭಾಂಶ ನೀಡುವುದಾಗಿ ಆರೋಪಿ ವಂಚಿಸುತ್ತಿದ್ದ ಎಂದು ಹೇಳಿದರು.

ಸದಸ್ಯತ್ವ ಪಡೆದವರಿಗೆ ಯುಸರ್ ನೇಮ್, ಪಾಸ್ ವರ್ಡ್ ನೀಡಲಾಗುತ್ತಿತ್ತು. ಆ ಮೂಲಕ ಚೈನ್ ಲಿಂಕ್ ಆಧಾರದಲ್ಲಿ ಹೂಡಕೆ ಮಾಡಿಸಲಾಗುತ್ತಿತ್ತು. ಹೂಡಕೆಯಾದ ಕೋಟ್ಯಾಂತರ ಹಣವನ್ನು ಕ್ರಿಪ್ಟೊ ಕರೆನ್ಸಿಯ ಟ್ರೋನ್ ಕಾಯಿನ್ ಆಗಿ ಹೂಡಕೆ ಮಾಡಲಾಗುತ್ತಿತ್ತು. ಬಳಿಕ ಕಂಪೆನಿ ಹೆಸರಿನಲ್ಲಿ ಡಿಟಿಎಂ ಟೋಕನ್ ಎಂದು ರೂಪಿಸಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ರಂಗನಾಥ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com