ಶಾಲೆಗಳನ್ನು ಆರಂಭಿಸಲು ಸರ್ಕಾರ ತರಾತುರಿಯಲ್ಲಿಲ್ಲ: ಡಾ. ಕೆ.ಸುಧಾಕರ್

ರಾಜ್ಯದಲ್ಲಿ ಶಾಲೆಗಳು ಮತ್ತು ಕಾಲೇಜ್ ಗಳನ್ನು ಪ್ರಾರಂಭಿಸಲು ಯಾವುದೇ ಆತುರ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳು ಮತ್ತು ಕಾಲೇಜ್ ಗಳನ್ನು ಪ್ರಾರಂಭಿಸಲು ಯಾವುದೇ ಆತುರ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಶಾಲಾ- ಕಾಲೇಜುಗಳನ್ನು ಹಂತ- ಹಂತವಾಗಿ ತೆರೆಯಲು ಡಾ. ದೇವಿ ಪ್ರಸಾದ್ ನೇತೃತ್ವದ ಸಮಿತಿ ಸಲಹೆಗೆ ಪ್ರತಿಕ್ರಿಯಿಸಿದ ಡಾ. ಕೆ. ಸುಧಾಕರ್,  ಶಾಲೆಗಳನ್ನು ಪ್ರಾರಂಭಿಸುವುದು ಬಹಳ ಸೂಕ್ಷ್ಮ ವಿಷಯ ಮತ್ತು ಸಾಕಷ್ಟು ಚಿಂತನೆಯ ನಂತರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ನಾವು ಸಮಿತಿಯ ಶಿಫಾರಸುಗಳನ್ನು ಚರ್ಚಿಸುತ್ತಿದ್ದೇವೆ. ಪ್ರತಿ ಕೋನವನ್ನು ಚರ್ಚಿಸಿದ ನಂತರವೇ ನಿರ್ಧಾರಕ್ಕೆ ಬರುತ್ತೇವೆ. ಸರ್ಕಾರ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಗಮನವನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಇದಲ್ಲದೆ, ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಕೋವಿಡ್-19 ಸಾಂಕ್ರಾಮಿಕ ಮತ್ತು ಮುನ್ನೆಚ್ಚರಿಕೆ ಕ್ರಮಗಳು ಹಾಗೂ 3ನೇ ತರಂಗವನ್ನು ಹೇಗೆ ನಿಯಂತ್ರಿಸುವುದು ಎಂಬ ಬಗ್ಗೆ ವರದಿಯನ್ನು ಸಲ್ಲಿಸಲಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com