ಬಿಬಿಎಂಪಿ ಲಸಿಕೆ ಸಂಗ್ರಹ ವಾಹನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ 'ಲಸಿಕಾ' ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಚಾಲನೆ ನೀಡಿದರು.
ಬಿಬಿಎಂಪಿಯ ಲಸಿಕಾ ಅಭಿಯಾನದ ಅಂಗವಾಗಿ ಲಸಿಕೆ ವಾಹನಗಳನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಿದರು
ಬಿಬಿಎಂಪಿಯ ಲಸಿಕಾ ಅಭಿಯಾನದ ಅಂಗವಾಗಿ ಲಸಿಕೆ ವಾಹನಗಳನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪನವರು ಉದ್ಘಾಟಿಸಿದರು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ 'ಲಸಿಕಾ' ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಚಾಲನೆ ನೀಡಿದರು.

ಪ್ಯಾರೆಕ್ಸೆಲ್, ಫ್ಲೋಸರ್ವ್, ಕೀಸೈಟ್ ಮತ್ತು ಯುನೈಟೆಡ್ ವೇ ಬೆಂಗಳೂರಿನ ಸಹಭಾಗಿತ್ವದಲ್ಲಿ ಈ ವಾಹನಗಳನ್ನು ಪರಿಚಯಿಸಲಾಗಿದೆ. ಷಣ್ಮುಖ ಇನ್ನೋವೇಷನ್ಸ್ ತಯಾರಿಸಿರುವ ವಾಹನಗಳು ಐಸಿಎಂಆರ್ ಅನುಮೋದಿತ ಸಂಚಾರಿ ಪ್ರಯೋಗಾಲಯದ ಮೂಲಕ ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳನ್ನೂ ಕೂಡ ನಗರದ ವಿವಿಧ ಭಾಗಗಳಿಂದ ಸಂಗ್ರಹ ಮಾಡಲಿವೆ.

ಬಿಬಿಎಂಪಿಯ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಈ ವಾಹನಗಳು ಈ ವಾಹನಗಳು ನಗರದಾದ್ಯಂತ ಲಸಿಕೆಗಳನ್ನು ವಿತರಿಸುತ್ತವೆ. ಲಸಿಕಾ ಕೇಂದ್ರಗಳಿಗೆ ಲಸಿಕೆಗಳನ್ನು ವಾಹನದ ಮೂಲಕ ತಲುಪಿಸಲಾಗುತ್ತದೆ.

ಒಂದು ವಾಹನದಲ್ಲಿ 8 ಲಸಿಕೆ ಪೆಟ್ಟಿಗೆಗಳು/ 6 ಸಿರಿಂಜ್ ಪೆಟ್ಟಿಗೆಗಳನ್ನು ಸಾಗಿಸಬಲ್ಲದು. ಒಂದು ಬಾರಿಗೆ ಸುಮಾರು 9000 ಡೋಸ್ ಲಸಿಕೆಗಳನ್ನು ಈ ವಾಹನದಲ್ಲಿ ಸಾಗಿಸಬಹುದು.

ಕರ್ನಾಟಕದಲ್ಲಿಯೇ ಬೆಂಗಳೂರು ನಗರದಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ. ಸೋಮವಾರ ಮಹಾ ಲಸಿಕೆ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,72,713 ಡೋಸ್ ಲಸಿಕೆಯನ್ನು ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com