ಮಡಿಕೇರಿ: ಕೋವಿಡ್ ಲಸಿಕೆಗೆ ಹೆದರಿ ಮನೆಗೆ ಬೀಗ ಹಾಕಿ ಪರಾರಿಯಾದ ಬುಡಕಟ್ಟು ಜನರು

ಕುಶಾಲನಗರ ಸಮೀಪದ ಬೈದಗೊಟ್ಟದಲ್ಲಿನ ದಿಡ್ಡಳ್ಳಿ ಪುನರ್ವಸತಿ ಸ್ಥಳದಲ್ಲಿ ಅನೇಕ ಬುಡಕಟ್ಟು ಜನಾಂಗದ ಮಂದಿ ತಮ್ಮ ಮನೆ ಬಾಗಿಲುಗಳಿಗೆ ಬೀಗ ಹಾಕಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದರು. ಇದಕ್ಕೆ ಕಾರಣ ಆರೋಗ್ಯ ಇಲಾಖೆ ಗುರುವಾರ ವಿಶೇಷ ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದೇ ಆಗಿತ್ತು.  200 ಕ್ಕೂ ಹೆಚ್ಚು ನಿವಾಸಿಗಳ ಪೈಕಿ ಕೇವಲ 35  ಜನರಿಗೆ ಮಾತ್ರ ಲಸಿಕೆ ನೀಡ
ಲಸಿಕೆ ತೆಗೆದುಕೊಳ್ಳಲು ಭಯಪಟ್ಟು ಮನೆಗೆ ಬೀಗ ಹಾಕಿ ಪರಾರಿಯಾದ ಬುಡಕಟ್ಟು ಜನಾಂಗದ ಜನ
ಲಸಿಕೆ ತೆಗೆದುಕೊಳ್ಳಲು ಭಯಪಟ್ಟು ಮನೆಗೆ ಬೀಗ ಹಾಕಿ ಪರಾರಿಯಾದ ಬುಡಕಟ್ಟು ಜನಾಂಗದ ಜನ

ಮಡಿಕೇರಿ: ಕುಶಾಲನಗರ ಸಮೀಪದ ಬೈದಗೊಟ್ಟದಲ್ಲಿನ ದಿಡ್ಡಳ್ಳಿ ಪುನರ್ವಸತಿ ಸ್ಥಳದಲ್ಲಿ ಅನೇಕ ಬುಡಕಟ್ಟು ಜನಾಂಗದ ಮಂದಿ ತಮ್ಮ ಮನೆ ಬಾಗಿಲುಗಳಿಗೆ ಬೀಗ ಹಾಕಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದರು. ಇದಕ್ಕೆ ಕಾರಣ ಆರೋಗ್ಯ ಇಲಾಖೆ ಗುರುವಾರ ವಿಶೇಷ ಕೋವಿಡ್ -19 ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವುದೇ ಆಗಿತ್ತು.  200 ಕ್ಕೂ ಹೆಚ್ಚು ನಿವಾಸಿಗಳ ಪೈಕಿ ಕೇವಲ 35  ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಆದಾಗ್ಯೂ, ತಾಲೂಕು ಆರೋಗ್ಯ ಅಧಿಕಾರಿ, ಪುನರ್ವಸತಿ ಸ್ಥಳದಲ್ಲಿನ ಪ್ರತಿಯೊಬ್ಬರಿಗೆ  ಲಸಿಕೆ ಹಾಕಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದರು.

ಬೈದಗೊಟ್ಟ ವ್ಯಾಪ್ತಿಯ ಬುಡಕಟ್ಟು ಜನಾಂಗದ ಜನರು ಎರಡನೇ ಅಲೆ ನಂತರ ಸಾಕಷ್ಟು ಮೂಡನಂಬಿಕೆಗಳ ಕಾರಣ ಸುದ್ದಿಯಾಗಿದ್ದರು.ಕೋವಿಡ್ -19 ಗಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು  ಅವರು ಒಪ್ಪಲಿಲ್ಲ, ಏಕೆಂದರೆ ತಮ್ಮ ಬುಡಕಟ್ಟು ದೇವತೆ ನಮ್ಮನ್ನು ಕ್ರಾಮಿಕ ರೋಗದಿಂದ ರಕ್ಷಿಸುತ್ತಾನೆ ಎಂದು ಅವರು ಹೇಳಿದ್ದಾರೆ. ಇದನ್ನು ಅನುಸರಿಸಿ, ಆರೋಗ್ಯ ಇಲಾಖೆಯು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿತು.

ಇದಲ್ಲದೆ ಬೈದಗೊಟ್ಟ ಸಮುದಾಯ ಭವನದಲ್ಲಿ ಮೊದಲ ಶಿಬಿರವನ್ನು ಆಯೋಜಿಸಿದ ನಂತರ ಬುಡಕಟ್ಟು ಜನಾಂಗದವರಿಗೆ ಲಸಿಕೆ ಅಭಿಯಾನ  ನಡೆಸಲು ಇಲಾಖೆ ನಿರ್ಧರಿಸಿದೆ. ಆದಾಗ್ಯೂ, ಪುನರ್ವಸತಿ ಪ್ರದೇಶದಲ್ಲಿ ಹೆಚ್ಚಿನ ಬುಡಕಟ್ಟು ಜನಾಂಗದ ಮಂದಿ ಲಸಿಕೆ ಪಡೆಯಲು ಮುಂದಾಗಿಲ್ಲ. ಇದಲ್ಲಾಗಿ ಲಸಿಕೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಬುಡಕಟ್ಟು ಜನಾಂಗದವರಿಗೆ ಮನವರಿಕೆ ಮಾಡಿಕೊಡಲು ಮನೆಗಳಿಗೆ ಭೇಟಿ ನೀಡಲು ಅಧಿಕಾರಿಗಳು ಬಯಸಿದಾಗ ಮನೆಗಳ ಬೀಗ ಅವರಿಗೆ ಸ್ವಾಗತ ಕೋರಿದೆ. ಸ್ಥಳೀಯ ವ್ಯಾಪ್ತಿಯ ಒಟ್ಟು 35 ನಿವಾಸಿಗಳಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ.

“ಎಲ್ಲಾ ಇಲಾಖೆಗಳ ಅಧಿಕಾರಿಗಳು ಬುಡಕಟ್ಟು ಜನಾಂಗದವರಿಗೆ ಮನವರಿಕೆ ಮಾಡಿಕೊಡಲು ಪುನರ್ವಸತಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಆದರೆ ಅವರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿಲ್ಲ. ಚುಚ್ಚುಮದ್ದನ್ನು ತೆಗೆದುಕೊಂಡ 30ರಷ್ಟು  ನಿವಾಸಿಗಳಲ್ಲಿ ಬುಡಕಟ್ಟು ಮುಖಂಡ ಸ್ವಾಮಿ ಸಹ ಸೇರಿದ್ದಾರೆ. ನಾಯಕ ಈಗ ಚೆನ್ನಾಗಿದ್ದಾನೆ ಮತ್ತು ಲಸಿಕೆ  ತೆಗೆದುಕೊಳ್ಳಲು ಇತರರನ್ನು ಮನವೊಲಿಸಲು ನಾವು ಕೇಳಿದ್ದೇವೆ. ಲಸಿಕೆ ತೆಗೆದುಕೊಳ್ಳಲು ನಾವು ಬುಡಕಟ್ಟು ಜನಾಂಗದವರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ ”ಎಂದು ಸೋಮವಾರಪೇಟೆ  ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ಹಂಚಿಕೊಂಡಿದ್ದಾರೆ. ಲಸಿಕೆಗಳಿಗೆ ಸಂಬಂಧಿಸಿದಂತೆ ಅವರ ಎಲ್ಲಾ ಅಪನಂಬಿಕೆಗಳನ್ನು ಅಳಿಸಲು ಬುಡಕಟ್ಟು ವಸತಿ ಬಳಿ ವಾಸಿಸುವ ಗ್ರಾಮಸ್ಥರಿಗೆ  ಇಲಾಖೆ ಚುಚ್ಚುಮದ್ದು ನೀಡುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com