20 ವರ್ಷದ ಹಿಂದಿನ ಕೇಸ್ ಒಪನ್ ಮಾಡಿದ ಕೊಪ್ಪಳ ಪೊಲೀಸರು: ಆರೋಪಿ ಅಂದರ್

ಎರಡು ದಶಕಗಳ ಹಿಂದಿನ ಕೇಸ್ ಒಪನ್ ಮಾಡಿರುವ ಕೊಪ್ಪಳ ಪೊಲೀಸರು ಸುಮಾರು 175 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಬಾಬು
ರಾಮಬಾಬು

ಕೊಪ್ಪಳ: ಎರಡು ದಶಕಗಳ ಹಿಂದಿನ ಕೇಸ್ ಒಪನ್ ಮಾಡಿರುವ ಕೊಪ್ಪಳ ಪೊಲೀಸರು ಸುಮಾರು 175 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಕಾಯಿತಿ, ಕಳ್ಳತನ, ಹಲ್ಲೆ, ಮತ್ತು ಕೊಲೆ ಹಾಗೂ ವಂಚನೆ ಕೇಸ್ ಗಳಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ ರಾಮಬಾಬು ಎಂಬ ಆರೋಪಿಯನ್ನು ಜೂನ್ 21 ರಂದು ಪೊಲೀಸರು ಬಂಧಿಸಿದ್ದಾರೆ.

2003ರಲ್ಲಿ ಕೊಪ್ಪಳದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆತನನ್ನು ಬಳ್ಳಾರಿಯ ಗಾಂಧಿನಗರದಲ್ಲಿ ಬಂಧಿಸಲಾಗಿದೆ. ಕಳ್ಳತನ ಪ್ರಕರಣದ ಮತ್ತೊಬ್ಬ ಆರೋಪಿ ಜಾಮೀನು ಪಡೆದು 1997 ರಿಂದ ನಾಪತ್ತೆಯಾಗಿದ್ದ.  ಆತನನನ್ನು ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಿದ್ದಾರೆ.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್‌ಡಿಸಿ) ಉದ್ಯೋಗಿಯೊಬ್ಬರ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಆತನ ವಿರುದ್ಧ  2005 ರಲ್ಲಿ ಪ್ರಕರಣ ದಾಖಲಿಸಲಾಯಿತು. ಕೇಸ್ ದಾಖಲಾದ ನಂತರ ಆತ ಪರಾರಿಯಾಗಿದ್ದ, ಆರೋಪಿಯನ್ನು ಈ ವರ್ಷದ ಮಾರ್ಚ್‌ನಲ್ಲಿ  ವಿಶೇಷ ವಿಭಾಗವು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪೊಲೀಸರು 30 ಕ್ಕೂ ಹೆಚ್ಚು ಹಳೆಯ ಪ್ರಕರಣಗಳನ್ನು ಮತ್ತೆ ತೆರೆದಿದ್ದಾರೆ ಮತ್ತು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದ ನಂತರ ಹಳೆಯ ಪ್ರಕರಣಗಳಲ್ಲಿ 36 ಆರೋಪಿಗಳನ್ನು ಬಂಧಿಸಲು ಕೊಪ್ಪಳ ಪೊಲೀಸರು ಸಮರ್ಥರಾಗಿದ್ದಾರೆ. 1968 ರಿಂದೀಚೆಗೆ ಕೆಲವು ಪ್ರಕರಣಗಳಲ್ಲಿ  ಪರಾರಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಟಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com