ಕೋವಿಡ್-19: ರಾಜ್ಯದಲ್ಲಿ 23 ದಿನಗಳಲ್ಲಿ 2 ಲಕ್ಷ ಕೇಸ್ ಪತ್ತೆ!

ರಾಜ್ಯದಲ್ಲಿ ಬುಧವಾರ 4,436 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28,19,465ಕ್ಕೆ ತಲುಪಿದೆ. ಬುಧವಾರದ ಅಂಕಿ ಸಂಖ್ಯೆಯೊಂದಿಗೆ ರಾಜ್ಯದಲ್ಲಿ 23 ದಿನಗಳಲ್ಲಿ 2 ಲಕ್ಷ ಪ್ರಕರಣಗಳು ಪತ್ತೆಯಾದಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಬುಧವಾರ 4,436 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 28,19,465ಕ್ಕೆ ತಲುಪಿದೆ. ಬುಧವಾರದ ಅಂಕಿ ಸಂಖ್ಯೆಯೊಂದಿಗೆ ರಾಜ್ಯದಲ್ಲಿ 23 ದಿನಗಳಲ್ಲಿ 2 ಲಕ್ಷ ಪ್ರಕರಣಗಳು ಪತ್ತೆಯಾದಂತಾಗಿದೆ. 

ಜೂನ್.1 ರಿಂದ ಜೂನ್ 23ರವರೆಗೆ ಒಟ್ಟು 23 ದಿನಗಳಲ್ಲಿ ರಾಜ್ಯದಲ್ಲಿ 2,00,730 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಸೋಂಕು ಇಳಿಕೆಯಾಗುವುದರ ಜೊತೆಗೆ ರಾಜ್ಯದಲ್ಲಿ ಕಳೆದ 15 ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಶೇ.8.49ರಷ್ಟಿದ್ದ ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ ಶೇ.8.52ಕ್ಕೆ ಇಳಿಕೆಯಾಗಿದೆ. 

ಈ ನಡುವೆ ಸಾವಿನ ಪ್ರಮಾಣ ಎಂದಿನಂತೆ ಏರುತ್ತಲೇ ಇದ್ದು, ರಾಜ್ಯದಲ್ಲಿ ನಿನ್ನೆ 123 ಮಂದಿ ಸಾವನ್ನಪ್ಪಿದ್ದಾರೆ. ಈ ಬೆಳವಣಿಗೆಯು ಕೊರೋನಾ 3ನೇ ಅಲೆ ಕುರಿತ ಆತಂಕವನ್ನು ಹೆಚ್ಚು ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com