ಬಂಟ್ವಾಳ: 3 ಲಕ್ಷ ರೂ. ಮೌಲ್ಯದ ಶ್ರೀಗಂಧ ಮತ್ತು ಉಡ ಮಾರಾಟಕ್ಕೆ ಯತ್ನ; ಇಬ್ಬರ ಸೆರೆ
ಜೂನ್ 25 ಶುಕ್ರವಾರ ಶ್ರೀಗಂಧದ ಮರ ಮತ್ತು ಉಡವನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದ ಇಬ್ಬರನ್ನು ಬಂಟ್ವಾಳ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Published: 25th June 2021 07:21 PM | Last Updated: 25th June 2021 07:47 PM | A+A A-

ಶ್ರೀಗಂಧ ಕಳ್ಲರ ಸೆರೆ
ಬಂಟ್ವಾಳ: ಜೂನ್ 25 ಶುಕ್ರವಾರ ಶ್ರೀಗಂಧದ ಮರ ಮತ್ತು ಉಡವನ್ನು ಅಕ್ರಮವಾಗಿ ಮಾರಾಟ ಮಾಡುವ ಪ್ರಯತ್ನ ನಡೆಸಿದ್ದ ಇಬ್ಬರನ್ನು ಬಂಟ್ವಾಳ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳದ ಇರಾ ಮೂಲದ ಮೊಯ್ದೀನ್ (55) ಮತ್ತು ಕಾಸರಗೋಡು ವರ್ಕಾಡಿ ನಿವಾಸಿ ಇಬ್ರಾಹಿಂ (48) ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳಾದ ವರ್ಕಾಡಿಯ ಸಿದ್ದಿಕ್ ಮತ್ತು ಕೊರಂಗು ಸಿದ್ದಿಕ್ ಪರಾರಿಯಾಗಿದ್ದಾರೆ.
ಆರೋಪಿಗಳಿಂದ 3 ಲಕ್ಷ ಮೌಲ್ಯದ ಶ್ರೀಗಂಧದ ಮರ, ಉಡ ಮತ್ತು ಮರಗಳನ್ನು ಕಡಿಯಲು ಬಳಸಿದ ಆಯುಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅರಣ್ಯ ಅಧಿಕಾರಿ ರಾಜೇಶ್ ಬಳಿಗಾರ್, ಉಪ ಯ ಅರಣ್ಯ ಅಧಿಕಾರಿ, ಯಶೋಧರ್, ಪ್ರಥಮ್ ಎಸ್, ಬಸಪ್ಪ ಹಲಗೆರೆ, ಅರಣ್ಯ ಸಿಬ್ಬಂದಿ, ಜಿತೇಶ್ ಪಿ, ಶೋಬಿತ್, ದಯಾನಂದ ಎನ್ ರೇಖಾ, ಅರಣ್ಯ ವೀಕ್ಷಕ ಪ್ರವೀಣ್, ಚಾಲಕ ಜಯರಾಮ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.