ಬೆಂಗಳೂರಿನ ಕೋವಿಡ್-19 ನಿರ್ವಹಣೆ ಇಂಡೆಕ್ಸ್ ಆಪ್ ಗೆ ಕೇಂದ್ರದ ಪ್ರಶಸ್ತಿ

ಕೋವಿಡ್-19 ನ ಮೊದಲ ಅಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದ ಕೋವಿಡ್-19 ನಿರ್ವಹಣಾ ಪೋರ್ಟಲ್ ನಲ್ಲಿದ್ದ ಇಂಡೆಕ್ಸ್ ಆಪ್ ನ್ನು ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ. 
ಕೋವಿಡ್-19 ನಿಯಂತ್ರಣ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಗಳು (ಸಾಂಕೇತಿಕ ಚಿತ್ರ)
ಕೋವಿಡ್-19 ನಿಯಂತ್ರಣ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿಗಳು (ಸಾಂಕೇತಿಕ ಚಿತ್ರ)

ಬೆಂಗಳೂರು: ಕೋವಿಡ್-19 ನ ಮೊದಲ ಅಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಅಭಿವೃದ್ಧಿಪಡಿಸಿದ್ದ ಕೋವಿಡ್-19 ನಿರ್ವಹಣಾ ಪೋರ್ಟಲ್ ನಲ್ಲಿದ್ದ ಇಂಡೆಕ್ಸ್ ಆಪ್ ನ್ನು ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ. 

ಸ್ಮಾರ್ಟ್ ಸಿಟಿ ಮಿಷನ್ ನ ಅಡಿಯಲ್ಲಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಜೂ.25 ರಂದು ದೆಹಲಿಯಲ್ಲಿ ಪ್ರಶಸ್ತಿ ನೀಡಿದೆ. ಕೋವಿಡ್-19 ನ ಮೊದಲ ಅಲೆಯಲ್ಲಿ ಬೆಂಗಳೂರು ತನ್ನ ಆವಿಷ್ಕಾರಕ್ಕೆ ಗುರುತಿಸಿಕೊಂಡಿತ್ತು. ಇಂಡೆಕ್ಸ್ ಆಪ್ ಪರಿಕಲ್ಪನೆಯನ್ನು ಜೂ.19 ರಂದು ಮೊದಲ ಬಾರಿಗೆ ಮಾಡಲಾಗಿತ್ತು. ಕೇವಲ ಬೇರೆ ಆಪ್ ಗಳು ಹಾಗೂ ಪೋರ್ಟಲ್ ಗಳೊಂದಿಗೆ ಮಾತನಾಡುವುದಕ್ಕೆ ಅಷ್ಟೇ ಅಲ್ಲದೇ ರೋಗಿಗಳನ್ನು ಶೀಘ್ರವಾಗಿ ಗುರುತಿಸುವುದಷ್ಟೇ ಅಲ್ಲದೇ ಬೆಡ್ ಹಂಚಿಕೆಯನ್ನೂ ತ್ವರಿತವಾಗಿ ಮಾಡುವುದಕ್ಕೆ ಸಹಕಾರಿಯಾಗಿತ್ತು.

ಆಪ್ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಇದು ದೇಶದಲ್ಲಿ ಇದೇ ಮೊದಲ ಪ್ರಯೋಗವಾಗಿದ್ದು, ಪುಣೆ, ಅಹ್ಮದಾಬಾದ್, ದೆಹಲಿಯೊಂದಿಗೂ ಇದನ್ನು ಹಂಚಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಐಸಿಎಂಆರ್ ಪೋರ್ಟಲ್ ನಿಂದ ನೇರವಾಗಿ ರೋಗಿಗಳ ಮಾಹಿತಿಯನ್ನು ಗುರುತಿಸುತ್ತಿದ್ದ ಇಂಡೆಕ್ಸ್ ಆಪ್, ರೋಗಿಗಳಿಗೆ ವಿಶಿಷ್ಟ ಗುರುತಿನ ನಂಬರ್ ನ್ನು ನೀಡುತ್ತಿತ್ತು ಹಾಗೂ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಾಗಿನಿಂದ ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೂ ಅಥವಾ ಕೋವಿಡ್-19 ಕೇರ್ ಕೇಂದ್ರದಲ್ಲಿ ಚೇತರಿಕೆ ಕಾಣುವವರೆಗೂ ಅಥವಾ ಮೃತಪಟ್ಟಿದ್ದಾರೆಂದು ಘೋಷಿಸುವವರೆಗೂ  

ಆಪ್ ನ್ನು ನಂತರದ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈಗಲೂ ಈ ಕೆಲಸ ಪ್ರಗತಿಯಲ್ಲಿದೆ. "ಸಾಮಾನ್ಯವಾಗಿ ಟ್ರ್ಯಾಕಿಂಗ್ ಹಾಗೂ ಬೆಡ್ ಹಂಚಿಕೆಗೆ 2-3 ದಿನಗಳ ಸಮಯ ಬೇಕಾಗುತ್ತಿತ್ತು. ಆದರೆ ಒಮ್ಮೆ ಆನ್ ಲೈನ್ ಮೂಲಕ ಪ್ರಕ್ರಿಯೆಗಳು ಪ್ರಾರಂಭವಾದೊಡನೆ 6-7 ಗಂಟೆಗಳಲ್ಲಿ ಬೆಡ್ ಹಂಚಿಕೆಯಾಗುತ್ತಿತ್ತು. ಈಗ ಕೇವಲ ಒಂದು ಗಂಟೆ ಅಥವಾ ಅದಕ್ಕೂ ಮುನ್ನ ಬೆಡ್ ಹಂಚಿಕೆಯಾಗುತ್ತಿದೆ". ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮಾಜಿ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಅವರ ಅವಧಿಯಲ್ಲಿ ಈ ಆಪ್ ನ್ನು ಅಭಿವೃದ್ಧಿಪಡಿಸಲಾಗಿದ್ದು, ವಾರ್ ರೂಮ್ ಹಾಗೂ ಆಪ್ ಗೆ ಪ್ರಶಸ್ತಿ ಲಭಿಸಿರುವುದು ಗೌರವದ ವಿಷಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com