ಲೈಂಗಿಕ ಕಿರುಕುಳ: ದಾಬಸ್ ಪೇಟೆಯ ವಿಶೇಷ ಚೇತನ ಶಾಲಾ ಪ್ರಾಂಶುಪಾಲ ಅರೆಸ್ಟ್

ತನ್ನ ವಿದ್ಯಾರ್ಥಿಯೊಬ್ಬನಿಗೆ  ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಾಬಸ್ ಪೇಟೆಯಲ್ಲಿ ವಿಶೇಷ ಚೇತನ ಮಕ್ಕಳ  ಶಾಲೆಯೊಂದರ 43 ವರ್ಷದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ವಿದ್ಯಾರ್ಥಿಯೊಬ್ಬನಿಗೆ  ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಾಬಸ್ ಪೇಟೆಯಲ್ಲಿ ವಿಶೇಷ ಚೇತನ ಮಕ್ಕಳ  ಶಾಲೆಯೊಂದರ 43 ವರ್ಷದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

ಮೇ 5 ರಂದು ಆರೋಪಿ ಪ್ರಾಂಶುಪಾಲರು 21 ವರ್ಷದ ಪುರುಷ ವಿದ್ಯಾರ್ಥಿಯನ್ನು ತನ್ನ ಮನೆಗೆ ಕರೆದು ಅಶ್ಲೀಲ ವಿಡಿಯೋಗಳನ್ನು ನೋಡುವಂತೆ ಒತ್ತಾಯಿಸಿದ್ದಾರೆಂದು ಆರೋಪಿಸಲಾಗಿದೆ. ಕೌನ್ಸೆಲಿಂಗ್ ಸೆಷನ್ ನಲ್ಲಿ  ವಿದ್ಯಾರ್ಥಿಗೆ ಕಿರುಕುಳ ನೀಡಲಾಗಿದೆ ಮತ್ತು ಆತನ ದೂರಿನ  ಆಧಾರದ ಮೇಲೆ ಪ್ರಾಂಶುಪಾಲರನ್ನು ಶುಕ್ರವಾರ ಬಂಧಿಸಲಾಗಿದೆ.

ಶಾಲೆಯ ಕಾರ್ಯದರ್ಶಿ ವಿದ್ಯಾರ್ಥಿಯ ನಡವಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಗಮನಿಸಿದ್ದರಿಂದ ಆತನನ್ನು ಕೌನ್ಸೆಲಿಂಗ್‌ಗೆ ಕರೆದೊಯ್ಯಲಾಯಿತು. "ಪ್ರಾಂಶುಪಾಲರನ್ನು ವಿಚಾರಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ನ್ಯಾಯಾಲಯ ಆರೋಪಿಗೆ  ನ್ಯಾಯಾಂಗ ಬಂಧನ ವಿಧಿಸಿದೆ." ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಂಶುಪಾಲರ ನಿವಾಸವು ಶಾಲೆಯ ಆವರಣದಲ್ಲಿದೆ ಮತ್ತು ಅವರು ಕಳೆದ ಎಂಟು ವರ್ಷಗಳಿಂದ ಶಾಲೆಯಲ್ಲಿ  ಕೆಲಸ ಮಾಡುತ್ತಿದ್ದಾರೆ. ಈವರೆಗೆ ಇತರ ವಿದ್ಯಾರ್ಥಿಗಳಿಂದ ಯಾವುದೇ ದೂರುಗಳು ಬಂದಿಲ್ಲ ಎಂದರು. ವಿಚಾರಣೆ ವೇಳೆ ಪ್ರಾಂಶುಪಾಲರು ತಾನು ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು  ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com