ಬೆಂಗಳೂರಿನ ಕಾವೇರಿ ಪೈಪ್‌ಲೈನ್ ಸೋರಿಕೆ: ಪ್ರತಿನಿತ್ಯ 1 ಮಿಲಿಯನ್ ಲೀಟರ್ ನೀರು ನಷ್ಟ!

ತೊರೆಕಾಡನಹಳ್ಳಿ(ಟಿಕೆ ಹಳ್ಳಿ) ಯಿಂದ ನಗರಕ್ಕೆ ಮುಖ್ಯ ನೀರಿನ ಪೈಪ್‌ಲೈನ್‌ನಲ್ಲಿ ಆರು ತಿಂಗಳ ಹಳೆಯ ಸೋರಿಕೆಯನ್ನು ತಡೆಯುವ ಕೆಲಸವನ್ನು ಕೈಗೊಳ್ಳಲು ಬಿಡಬ್ಲ್ಯೂಎಸ್‌ಎಸ್‌ಬಿ ಬುಧವಾರ ಮತ್ತು ಗುರುವಾರ ಬೃಹತ್ ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತೊರೆಕಾಡನಹಳ್ಳಿ(ಟಿಕೆ ಹಳ್ಳಿ) ಯಿಂದ ನಗರಕ್ಕೆ ಮುಖ್ಯ ನೀರಿನ ಪೈಪ್‌ಲೈನ್‌ನಲ್ಲಿ ಆರು ತಿಂಗಳ ಹಳೆಯ ಸೋರಿಕೆಯನ್ನು ತಡೆಯುವ ಕೆಲಸವನ್ನು ಕೈಗೊಳ್ಳಲು ಬಿಡಬ್ಲ್ಯೂಎಸ್‌ಎಸ್‌ಬಿ ಬುಧವಾರ ಮತ್ತು ಗುರುವಾರ ಬೃಹತ್ ಬೆಂಗಳೂರು ಮಹಾನಗರಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸುತ್ತಿದೆ.

ಪೈಪ್‌ಲೈನ್‌ ಮೊದಲೇ ಸೋರಿಕೆಯಾಗುತ್ತಿತ್ತು, ಆದರೆ ಕಳೆದ ಕೆಲವು ದಿನಗಳಿಂದ, ವ್ಯರ್ಥವಾಗುತ್ತಿದ್ದ ನೀರಿನ ಪ್ರಮಾಣ ದಿನಕ್ಕೆ ಒಂದು ಮಿಲಿಯನ್ ಲೀಟರ್ (ಎಂಎಲ್ಡಿ) ಕ್ಕೆ ಏರಿದೆ. ನಗರವು ಶಿವ ಅನೈಕಟ್ ಜಲಾಶಯದಿಂದ ಸುಮಾರು 100 ಕಿ.ಮೀ. ಕಾವೇರಿ ನದಿಯುದ್ದಕ್ಕೂ ನೀರಿನ ಸರಬರಾಜು ಪಡೆಯುತ್ತದೆ. ಇದು ಟಿಕೆ ಹಳ್ಳಿ ಜಲಾಶಯವನ್ನು ತಲುಪುತ್ತದೆ ಮತ್ತು ನಂತರ ಮೂರು ಪಂಪಿಂಗ್ ಕೇಂದ್ರಗಳು ಮತ್ತು ಬೃಹತ್ ಪೈಪ್‌ಲೈನ್‌ಗಳ ಮೂಲಕ ನಗರಕ್ಕೆ ಹರಿಯುತ್ತದೆ.

ನಗರವು ಪ್ರತಿದಿನ 1,462 ರಿಂದ 1,475 ಎಂಎಲ್‌ಡಿ ನೀರನ್ನು ಪಡೆಯುತ್ತದೆ. ಟಿ.ಕೆ.ಹಳ್ಳಿ  ಯ ಬಿಡಬ್ಲ್ಯೂಎಸ್ಎಸ್ಬಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಆರ್.ಹೇಮಂತ್ ಕುಮಾರ್, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾತನಾಡಿ "ಪೈಪ್‌ಲೈನ್‌ ​​ಅನ್ನು 2002 ರಲ್ಲಿ ಹಾಕಲಾಯಿತು. ಹಾನಿಗೊಳಗಾದ ಕಾರಣ ಇದೀಗ ಕವಾಟವನ್ನು ಬದಲಾಯಿಸಬೇಕಾಗಿದೆ. ಈ ಪ್ರದೇಶವು ಗುಬ್ಬಳ  ಗ್ರಾಮದಲ್ಲಿದೆ, ಟಿಕೆ ಹಳ್ಳಿಯಿಂದ  ಇದು ಸ್ವಲ್ಪ ದೂರದಲ್ಲಿದೆ  ಈ 5.6 ಕಿ.ಮೀ ಪೈಪ್‌ಲೈನ್‌ನ ಒಂದು ಭಾಗವನ್ನು ನಾವು ಹೊಸ ಪೈಪ್ ಮತ್ತು ಕವಾಟಕ್ಕೆ ಬದಲಿಸುತ್ತೇವೆ. ಇದಕ್ಕಾಗಿ ಕೆಲಸವನ್ನು ನಿರ್ವಹಿಸಲು ನಾವು ನೀರು ಸರಬರಾಜನ್ನು ಸ್ಥಗಿತಗೊಳಿಸಬೇಕು. "

ಕೆಲಸವು 16 ರಿಂದ 18 ಗಂಟೆ ಅವಧಿಯದ್ದಾಗಿದೆ. "ಕೆಲಸವನ್ನು ಪ್ರಾರಂಭಿಸುವ ಮೊದಲು ಪೈಪ್ ನಿಂದ  ಹೆಚ್ಚಿನ ಪ್ರಮಾಣದ ನೀರನ್ನು ಹೊರಹಾಕಬೇಕಾಗಿದೆ" ಎಂದು ಅವರು ವಿವರಿಸಿದರು.

ಮುಖ್ಯ ಪೈಪ್‌ಲೈನ್ ಎರಡು ಹಂತಗಳಲ್ಲಿ ಕೊತ್ತನೂರು ದಿಣ್ಣೆ(ಪುಟ್ಟೇನಹಳ್ಳಿ ಕೆರೆ ಬಳಿ) ಮತ್ತು ಹೆಗ್ಗನಹಳ್ಳಿ (ಭಿಕ್ಷುಕರ ಕಾಲೋನಿ ಬಳಿ) ನಗರವನ್ನು ಪ್ರವೇಶಿಸುತ್ತದೆ. ನಂತರ ಬೆಂಗಳೂರಿನಾದ್ಯಂತ ನೆಲಮಟ್ಟದ ಜಲಾಶಯಗಳಿಗೆ ನೀರನ್ನು ಪಂಪ್ ಮಾಡಲಾಗುತ್ತದೆ, ಇದು ಕಾವೇರಿ ವಾಟರ್ ಸ್ಟೇಜ್ IV (ಹಂತ -1) ಮೂಲಕ ನೀರು ಪಡೆಯುವ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ.

ಬಿಡಬ್ಲ್ಯೂಎಸ್ಎಸ್ಬಿ ಎರಡು ತಿಂಗಳ ಹಿಂದೆ ಈ ಕೆಲಸವನ್ನು ಕೈಗೆತ್ತಿಕೊಳ್ಳಲು ಯೋಜಿಸಿತ್ತು. "ಆಗ ಸೋರಿಕೆ ಕಡಿಮೆ ಇತ್ತು. ಆದರೆ ಕೋವಿಡ್  D ಮತ್ತು ಕಾರ್ಮಿಕ ಕೊರತೆಯಿಂದಾಗಿ ನಾವು ಅದನ್ನು ಪೂರೈಸಲು  ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com