ಉತ್ತಮ ಜೀವನ ನಿರ್ವಹಣೆ ಭರವಸೆ: ಮಲೆ ಮಹದೇಶ್ವರ ಬೆಟ್ಟದ ದಟ್ಟಾರಣ್ಯ ಪ್ರದೇಶದಿಂದ ಹೊರಬಂದ ಅರಣ್ಯವಾಸಿಗಳು!

ಸರ್ಕಾರ ನೀಡಿದ್ದ ಉತ್ತಮ ಜೀವನ ನಿರ್ವಹಣೆಯ ಭರವಸೆಯನ್ನು ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 
ಚಂಗಡಿ ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಅರಣ್ಯಾಧಿಕಾರಿಗಳು
ಚಂಗಡಿ ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಅರಣ್ಯಾಧಿಕಾರಿಗಳು

ಬೆಂಗಳೂರು: ಸರ್ಕಾರ ನೀಡಿದ್ದ ಉತ್ತಮ ಜೀವನ ನಿರ್ವಹಣೆಯ ಭರವಸೆಯನ್ನು ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 

906.187 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಕೋರ್‌ ವಲಯ ಹಾಗೂ ನಿರ್ಣಾಯಕ ವನ್ಯಜೀವಿ ಆವಾಸದ ವ್ಯಾಪ್ತಿಯಲ್ಲಿ ಚಂಗಡಿ ಗ್ರಾಮ ಇದೆ. ಕಾಡೊಳಗಿನ ಈ ಚಂಗಡಿ ಗ್ರಾಮದಲ್ಲಿ ಸುಮಾರು 225 ಕುಟುಂಬಗಳು ವಾಸ ಮಾಡುತ್ತಿದ್ದು, ಇವರಲ್ಲಿ 18 ಆದಿವಾಸಿ ಕುಟುಂಬಗಳಿವೆ. ಒಟ್ಟಾರೆ ಇಲ್ಲಿನ ಕಾಡಿನೊಳಗೆ 1,562 ಜನರಿದ್ದಾರೆ. ಗ್ರಾಮವನ್ನು ಸ್ಥಳಾಂತರ ಮಾಡಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅಲ್ಲಿನ ಅರಣ್ಯವಾಸಿಗಳ ಮನವೊಲಿಸಲು ಅರಣ್ಯಾಧಿಕಾರಿಗಳು ಸಾಕಷ್ಟು ಬಾರಿ ಯತ್ನ ನಡೆಸಿದ್ದರು. ಈ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. 

ಸರ್ಕಾರ ಭರವಸೆಗಳಿಗೆ ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 

ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶವನ್ನು 2013 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಣೆ ಮಾಡಲಾಗಿತ್ತು.  ಚಾಮರಾಜನಗರ ವಿಭಾಗದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗದವರ ಸ್ಥಳಾಂತರ ಮಾಡುವ ಕಾರ್ಯವನ್ನು ಆರಂಭಿಸಲಾಗಿತ್ತು. ಹಲವು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯು ನಾಗರಹೊಳೆ, ಬಂಡೀಪುರ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬುಡಕಟ್ಟು ಜನರ ಸ್ಥಳಾಂತರ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಆದರೆ, ಕಾನೂನು ತೊಡಕು, ಆರ್ಥಿಕ ಸಮಸ್ಯೆ ಹಾಗೂ ರಾಜಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಉಪ ಸಂರಕ್ಷಣಾಧಿಕಾರಿ ಯೆದುಕೊಂಡಲು ವಿ ಅವರು ಮಾತನಾಡಿ, ಹೆಣ್ಣೂರು ಟೌನ್ ಬಳಿ ರೂಪುಗೊಳ್ಳುತ್ತಿರುವ ಹಳ್ಳಿಗೆ ಪುನರ್ವಸತಿ ಕಲ್ಪಿಸಲು 350 ಕುಟುಂಬಗಳು ಒಪ್ಪಿಗೆ ನೀಡಿವೆ. ಈ ಜನರಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ 450 ಎಖರೆ ಪ್ರದೇಶ ಭೂಮಿಯನ್ನು ಗುರ್ತಿಸಲಾಗಿದೆ. ಸಿಎಎಂಪಿಎಯ ರೂ.40-45 ಕೋಟಿ ಹಣವನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಅನುಮತಿಗಾಗಿ ಕಾಯಲಾಗುತ್ತಿದೆ. ಅಲ್ಲಿಯವರೆಗೆ ಸಮೀಕ್ಷೆಗಳನ್ನು ನಡೆಸುವುದು ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿರುತ್ತದೆ ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಸರ್ಕಾರದ ಭರವಸೆ ಒಪ್ಪಿ ಅರಣ್ಯದಿಂದ ಹೊರಬಂದ ಬುಡಕಟ್ಟು ಜನರು ಎರಡು ರೀತಿಯ ಪರಿಹಾರ ಪ್ಯಾಕೇಜ್ ಪಡೆಯಬಹುದಾದಿಗೆ. ರೂ.15 ಲಕ್ಷ ನಗದು ಅಥವಾ ಪುನರ್ವಸತಿ ಸೌಲಭ್ಯ ಪಡೆಯುವ ಆಯ್ಕೆಯನ್ನು ಸರ್ಕಾರ ನೀಡಿದೆ. ಪುನರ್ವಸತಿ ಪಡೆಯುವವರಿಗೆ ಹೊಲವನ್ನು ನೀಡಲಾಗುತ್ತಿದ್ದು, ಈ ಮೂಲಕ ಅವರಿಗೆ ಉದ್ಯೋಗ ಕೂಡ ದೊರಕಿದಂತಾಗುತ್ತದೆ ಎಂದು ತಿಳಿದುಬಂದಿದೆ. 

ಆದರೆ, ಸರ್ಕಾರದ ಪುನರ್ವಸತಿಯನ್ನು ಕೆಲವರು ತಿರಸ್ಕರಿಸಿದ್ದು, ಹಣ ಪಡೆದುಕೊಳ್ಳುವ ಮನಸ್ಸು ಮಾಡಿದ್ದಾರೆಂದು ತಿಳಿದುಬಂದಿದೆ. 

ಯೋಜನೆ ಯಶಸ್ವಿಗೊಳ್ಳಲು ಜನರ ಮನವೊಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಿಸಲು ಇದೊಂದು ಪ್ರಯತ್ನವಾಗಿದೆ. ಇದೊಂದು ಸಾಮಾಜಿಕ ಸಮಸ್ಯೆ ಕೂಡ ಆಗಿದ್ದು, ಅದನ್ನು ಸರಿಪಡಿಸಲೇಬೇಕಿದೆ. ಈ ಯೋಜನೆ ಯಶಸ್ವಿಯಾಗಿದ್ದೇ ಆದರೆ, ಇತರೆ ಅರಣ್ಯವಾಸಿಗಳೂ ಕೂಡ ಅರಣ್ಯ ತೊರೆದು ಹೊರಬರಲು ಮನಸ್ಸು ಮಾಡುತ್ತಾರೆಂದು ಯೆದುಕೊಂಡಲು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com