ಬ್ಲ್ಯಾಕ್ ಫಂಗಸ್: ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್'ಐ, ಸಿಟಿ ಸ್ಕ್ಯಾನ್ ಉಚಿತ

ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆ ಹಚ್ಚಲು ನಡೆಸುವ ಎಂಆರ್'ಐ, ಸಿಟಿ ಸ್ಕ್ಯಾನ್'ನ್ನು ಉಚಿತವಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆ ಹಚ್ಚಲು ನಡೆಸುವ ಎಂಆರ್'ಐ, ಸಿಟಿ ಸ್ಕ್ಯಾನ್'ನ್ನು ಉಚಿತವಾಗಿ ಮಾಡಲು ಸರ್ಕಾರ ನಿರ್ಧರಿಸಿದೆ. 

ಈ ಕುರಿತು ಆರೋಗ್ಯ ಸಚಿವ ಡಾ,ಸುಧಾಕರ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ಮಾಹಿತಿ ನೀಡಿದ್ದಾರೆ.

ಮ್ಯೂಕರ್ ಮೈಕೋಸಿಸ್ ಸೋಂಕು ಪತ್ತೆ ಹಚ್ಚಲು ಸಿಟಿ ಸ್ಕ್ಯಾನ್ ಮತ್ತು ಎಂಆರ್ ಐ ಸ್ಕ್ಯಾನ್ ನ ಸಂಯೋಜನೆ ಅಗತ್ಯವಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ/ ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಹಾಗೂ ಖಾಸಗಿ ಆಸ್ಪತ್ರೆ/ಪಯೋಗಾಲಯಗಳಲ್ಲಿ ಈ ಕೆಳಕಂಡಂತೆ ದರವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಅದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಹಚ್ಚಲು ನಡೆಸುವ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಏಕರೂಪದ ದರವನ್ನು ಸರ್ಕಾರ ಪ್ರಕಟಿಸಿದೆ. 

ಸದ್ಯ ಬ್ಲ್ಯಾಕ್ ಫಂಗಸ್ ಪತ್ತೆಹಚ್ಚಲು ನಡೆಸುವ ಸಿಟಿ ಸ್ಕ್ಯಾನ್ ಮತ್ತು ಎಮ್​ಆರ್​ಐ ಸ್ಕ್ಯಾನ್​ಗಳಿಗೆ ಖಾಸಗಿ ಆಸ್ಪತ್ರೆಗಳು 25ರಿಂದ 28 ಸಾವಿರ ಶುಲ್ಕ ಪಡೆಯುತ್ತಿದೆ. ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ರೂ.12 ಸಾವಿರ ಮಾತ್ರ ಪಡೆಯಬೇಕು. 

ಪ್ರತ್ಯೇಕ ಸ್ಕ್ಯಾನ್ ಗಳಿಗೂ ಸರ್ಕಾರ ದರ‌ ನಿಗದಿಪಡಿಸಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಬ್ರೈನ್ ಎಂಆರ್‌ಐ ಸ್ಕ್ಯಾನ್ 3000 ರೂ, ಪಿಎನ್ಎಸ್ ಸ್ಕ್ಯಾನ್ 3000 ರೂ, ಆರ್ಬಿಟ್ಸ್ ಎಂಆರ್‌ಐ 3000 ರೂ, ಮೂರೂ ಸ್ಕ್ಯಾನ್ ಗಳಿಗೆ ಒಟ್ಟು 7500 ರೂ, ಕಾಂಟ್ರಾಸ್ಟ್ ಸ್ಕ್ಯಾನ್ ನ ಎಂಆರ್‌ಐ 1500 ರೂ. ನಿಗದಿಪಡಿಸಲಾಗಿದೆ.

ಎಪಿಎಲ್ ನವರಿಗೆ ಕಾರ್ಡ್ ದಾರರಿಗೆ ಬ್ರೈನ್ ಎಂಆರ್‌ಐ ಸ್ಕ್ಯಾನ್ 4000 ರೂ, ಪಿಎನ್ಎಸ್ ಸ್ಕ್ಯಾನ್ 4000 ರೂ,  ಆರ್ಬಿಟ್ಸ್ ಎಂಆರ್‌ಐ 4000 ರೂ, ಮೂರೂ ಸ್ಕ್ಯಾನ್ ಗಳಿಗೆ ಒಟ್ಟು 10,000 ರೂ, ಕಾಂಟ್ರಾಸ್ಟ್ ಸ್ಕ್ಯಾನ್ ಎಂಆರ್‌ಐ 1500 ರೂ. ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ ಈವರೆಗೆ 3,232 ಜನರಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿತ್ತು, ಈ ಪೈಕಿ 1,600 ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 262 ಬ್ಲ್ಯಾಕ್ ಫಂಗಸ್ ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com