ಬೆಂಗಳೂರು: 8 ಜನರ ಬಂಧನ, 13 ಪಿಸ್ತೂಲ್ ಗಳು, 52 ಜೀವಂತ ಮದ್ದು ಗುಂಡು ವಶ

ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 8 ಜನ ಆರೋಪಿಗಳನ್ನು ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

Published: 01st March 2021 08:02 PM  |   Last Updated: 01st March 2021 08:02 PM   |  A+A-


Kamal_panth1

ಕಮಲ್ ಪಂತ್

Posted By : Nagaraja AB
Source : UNI

ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 8 ಜನ ಆರೋಪಿಗಳನ್ನು ಸಿಟಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ  ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಗಡೆ ನಗರದ ಫಯಾಝ್(31), ವಿನಯ್(29), ಉತ್ತರ ಪ್ರದೇಶದ ಫರಾಕ್‍ ಕುಮಾರ್(39), ಗುಜರಾತಿನ ಶಹನವಾಝ್ ಅನ್ಸಾರಿ(29), ಮಧ್ಯ ಪ್ರದೇಶದ ನಾಸೀರ್ ಶೇಖ್(50), ಸಲ್ಮಾನ್‍ ಖಾನ್(29), ಫಕ್ರುದ್ದೀನ್(37) ಬಂಧಿತ ಆರೋಪಿಗಳು. ಬಂಧಿತರಿಂದ 13 ಪಿಸ್ತೂಲ್‍ಗಳು, 52 ಜೀವಂತ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಸಿ.ಟಿ. ಮಾರುಕಟ್ಟೆಯ ಕೊನಾರ್ಕ್ ರೆಸಿಡೆನ್ಸಿ ಲಾಡ್ಜ್ ನಲ್ಲಿ ಅಕ್ರಮವಾಗಿ ಪಿಸ್ತೂಲ್, ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಮತ್ತೊಬ್ಬ ಆರೋಪಿ ಹೆಗಡೆ ನಗರದ ಖದೀರ್ ಖಾನ್(32) ಎಂಬಾತನನ್ನು ಬಂಧಿಸಿದ್ದಾರೆ ಎಂದರು‌.

ರಾಜಸ್ಥಾನ ಮತ್ತು ಮುಜಾಫರ್ ನಗರದಲ್ಲಿರುವ ಸಂಪರ್ಕಿತರಿಂದ ಪಡೆದಿದ್ದಾಗಿ ಖದೀರ್ ಹೇಳಿದ್ದಾನೆ. ಆರೋಪಿಗಳ ನೆಟ್ ವರ್ಕ್ ಮತ್ತು ಶಸಾಸ್ತ್ರಗಳನ್ನು ಖರೀದಿಸಿದ ಗ್ರಾಹಕರ ಬಗ್ಗೆ ಮಾಹಿತಿ ಅಸ್ಪಷ್ಪವಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp