ರಾಜ್ಯದ ಮೊದಲ ಕರಕುಶಲ ಪ್ರವಾಸೋದ್ಯಮ ಗ್ರಾಮ ಸ್ಥಾಪನೆ ಪ್ರಕ್ರಿಯೆ ಚುರುಕು; ಜೂನ್ ವೇಳೆಗೆ ಪೂರ್ಣ

ರಾಜ್ಯದ ಮೊದಲ ಕರಕುಶಲ ಪ್ರವಾಸೋದ್ಯಮ ಗ್ರಾಮ ಸ್ಥಾಪನೆಯ ಪ್ರಕ್ರಿಯೆ ಚುರುಕುಗೊಳಿಸುವುದಕ್ಕೆ ರಾಜ್ಯ ಕರಕುಶಲ ನಿಗಮ ಮುಂದಾಗಿದೆ. 

Published: 01st March 2021 01:03 PM  |   Last Updated: 01st March 2021 01:03 PM   |  A+A-


MD of Karnataka State Handicrafts Development Corporation D Roopa interacts with NGO volunteers and artisans at Anegundi during her visit last week. (Photo | Express)

ಕೆಎಸ್ ಹೆಚ್ ಡಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಐಜಿ ಪಿ ಡಿ.ರೂಪ ಆನೆಗೊಂದಿಗೆ ಭೇಟಿ

Posted By : Srinivas Rao BV
Source : The New Indian Express

ಹುಬ್ಬಳ್ಳಿ: ರಾಜ್ಯದ ಮೊದಲ ಕರಕುಶಲ ಪ್ರವಾಸೋದ್ಯಮ ಗ್ರಾಮ ಸ್ಥಾಪನೆಯ ಪ್ರಕ್ರಿಯೆ ಚುರುಕುಗೊಳಿಸುವುದಕ್ಕೆ ರಾಜ್ಯ ಕರಕುಶಲ ನಿಗಮ ಮುಂದಾಗಿದೆ. ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿ ಈ ಕರಕುಶಲ ಪ್ರವಾಸೋದ್ಯಮ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಜೂನ್ ವೇಳೆಗೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕರಕುಶಲ ಪ್ರವಾಸೋದ್ಯಮ ಗ್ರಾಮ ಕಾಣಸಿಗುತ್ತದೆ.

ಈ ಯೋಜನೆಯನ್ನು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್ ಹೆಚ್ ಡಿಸಿ) ಹಾಗೂ ಸ್ಥಳೀಯ ಎನ್ ಜಿಒ ಗಳ ಸಹಯೋಗದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆಲವು ತಿಂಗಳುಗಳ ಹಿಂದೆ ಯೋಜನೆಯ ಘೋಷಣೆಯಾಗಿದ್ದು, ಯೋಜನೆಯ ಜಾರಿ ಪ್ರಕ್ರಿಯೆ ಕುಂಟುತ್ತಾ ಸಾಗಿತ್ತು. 

ಕೆಎಸ್ ಹೆಚ್ ಡಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಐಜಿ ಪಿ ಡಿ.ರೂಪ ಆನೆಗೊಂದಿಗೆ ಭೇಟಿ ನೀಡಿ, ಕುಶಲಕರ್ಮಿಗಳ ಜೊತೆ ಮಾತನಾಡಿ, ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ. ಆನೆಗೊಂದಿ ವಿಜಯನಗರ ಅರಸರ ರಾಜಧಾನಿಯಾಗಿದ್ದ ಪ್ರದೇಶವಾಗಿದ್ದು, ಹಲವಾರು ಕುಶಲಕರ್ಮಿಗಳು ನೆಲೆ ಕಂಡುಕೊಂಡಿದ್ದಾರೆ.

ಬಾಳೆ ನಾರು, ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವುದು ಇಲ್ಲಿನ ಕುಶಲಕರ್ಮಿಗಳ ವೈಶಿಷ್ಟ್ಯವಾಗಿದ್ದು, ಆನೆಗೊಂದಿಯಲ್ಲಿ ಪ್ರಸ್ತುತ 300 ಕುಶಲಕರ್ಮಿಗಳಿದ್ದು, ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. 

ಆನೆಗೊಂದಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಕರಕುಶಲ ಪ್ರವಾಸೋದ್ಯಮ ಗ್ರಾಮ ಸ್ಥಾಪನೆ ಯೋಜನೆಯನ್ನು ''ನಿರ್ಮಿತಿ'' ಗೆ ವಹಿಸಲಾಗಿದ್ದು, ಸ್ಥಳೀಯ ಎನ್ ಜಿಒಗಳೊಂದಿಗೆ ಈ ತಂಡ ಕೆಲಸ ಮಾಡಲಿದೆ. ಸ್ಥಳೀಯ ಮಟ್ಟದಲ್ಲಿ ಯೋಜನೆಯ ಅಭಿವೃದ್ಧಿಯತ್ತ ಗಮನ ಹರಿಸುವುದಕ್ಕಾಗಿ ವಿಶೇಷ ಅಧಿಕಾರಿಯನ್ನೂ ನೇಮಕ ಮಾಡಲಾಗಿದ್ದು, ಸ್ಥಳೀಯ ಪಂಚಾಯತ್ ಸದಸ್ಯರೂ ಸೇರಿ ಸಂಬಂಧಪಟ್ಟವರೊಂದಿಗೆ ಇತ್ತೀಚೆಗೆ ಡಿಸಿ ಜೊತೆಗೆ ಸಭೆಯೂ ನಡೆದಿದೆ.

ಯೋಜನೆಯ ಭಾಗವಾಗಿ ರಸ್ತೆಗಳ ಅಲಂಕಾರ, ಕುಶಲಕರ್ಮಿಗಳಿಗೆ ಪ್ರತ್ಯೇಕವಾದ ಜಾಗ ನೀಡುವ ಕೆಲಸಗಳನ್ನು ಆದ್ಯತೆಯ ಮೇರೆ ಮಾಡಲಾಗುತ್ತಿದೆ. ಯೋಜನೆಯನ್ನು ಚುರುಕುಗೊಳಿಸಲು ಸರ್ಕಾರಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂಡು ಡಿ ರೂಪಾ ಮಾಹಿತಿ ನೀಡಿದ್ದಾರೆ. ಕರಕುಶಲ ಅಭಿವೃದ್ಧಿ ನಿಗಮ, ಬಾಳೆ ನಾರುಗಳಿಂದ, ಬಿದಿರಿನಿಂದ ತಯಾರಿಸಲಾಗುವ ಕರಕುಶಲ ವಸ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಪ್ರಚಾರವನ್ನು ನೀಡಲಿದೆ ಎಂದು ರೂಪಾ ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp