ಮಂಗಳೂರು: ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು

ಕುಟುಂಬದವರೊಂದಿಗೆ ಸೂರತ್ಕಲ್ ನ ಗುಡ್ಡೆಕೋಪ್ಲಾ ಬೀಚ್‌ಗೆ ಬಂದಿದ್ದ ಶಿವಮೊಗ್ಗದ 15 ವರ್ಷದ ಬಾಲಕ ಮರಳಿನಲ್ಲಿ ಆಟವಾಡುತ್ತಿದ್ದಾಗ ಭಾರೀ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Published: 01st March 2021 05:36 PM  |   Last Updated: 01st March 2021 05:36 PM   |  A+A-


dead1

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಮಂಗಳೂರು: ಕುಟುಂಬದವರೊಂದಿಗೆ ಸೂರತ್ಕಲ್ ನ ಗುಡ್ಡೆಕೋಪ್ಲಾ ಬೀಚ್‌ಗೆ ಬಂದಿದ್ದ ಶಿವಮೊಗ್ಗದ 15 ವರ್ಷದ ಬಾಲಕ ಮರಳಿನಲ್ಲಿ ಆಟವಾಡುತ್ತಿದ್ದಾಗ ಭಾರೀ ಅಲೆಗಳ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕನನ್ನು ಮುಬಾರಕ್ ಅಯೂಬ್ ಖಾನ್ ಎಂದು ಗುರುತಿಸಲಾಗಿದೆ.

ಬಾಲಕನ ಸಹಾಯಕ್ಕೆ ಆತನ ತಂದೆ ಸಮುದ್ರಕ್ಕೆ ಇಳಿದರಾದರೂ ಅವರು ಸಹ ನೀರಿನಲ್ಲಿ ಮುಳುಗುವುದರಲ್ಲಿದ್ದರು. ಅಷ್ಟರಲ್ಲಿ ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಿದ್ದಾರೆ.

ಮುಬಾರಕ್ ಮೃತದೇಹವನ್ನು ಅಗ್ನಿ ಶಾಮಕ ಸಿಬ್ಬಂದಿ, ಕರಾವಳಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಹೊರತೆಗೆಯಲಾಗಿದೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp