ವಿದ್ಯಾರ್ಥಿಗಳೇ ಸಿದ್ಧಪಡಿಸಿರುವ ಉಪಗ್ರಹ ‘ಸಿಂಧುನೇತ್ರ’ ನಭಕ್ಕೆ, ಭಾರತದ ಸಮುದ್ರ ಗಡಿಗಳ ಮೇಲೆ ಕಣ್ಣು

ಗರದ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದ ಕಿರು ಉಪಗ್ರಹ ಸಿಂಧುನೇತ್ರ ನಭಕ್ಕೆ ಹಾರಿದ್ದು, ಭಾರತದ ಸಮುದ್ರದ ಗಡಿಗಳ ಮೇಲೆ ನಿಗಾ ಇರಿಸಲಿದೆ.

Published: 01st March 2021 01:23 PM  |   Last Updated: 01st March 2021 01:26 PM   |  A+A-


Sindhu-Netra

ಪಿಎಸ್ಎಲ್ ವಿ ಸಿ51

Posted By : Srinivasamurthy VN
Source : The New Indian Express

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದ ಕಿರು ಉಪಗ್ರಹ ಸಿಂಧುನೇತ್ರ ನಭಕ್ಕೆ ಹಾರಿದ್ದು, ಭಾರತದ ಸಮುದ್ರದ ಗಡಿಗಳ ಮೇಲೆ ನಿಗಾ ಇರಿಸಲಿದೆ.

ಹಡಗುಗಳ ಅನುಮಾನಾಸ್ಪದ ಚಲನೆಯನ್ನು ಗಮನಿಸಲು ಮತ್ತು ಮತ್ತೊಂದು 26/11 ಮಾದರಿಯ ದಾಳಿಯನ್ನು ತಡೆಯಲು ಭಾರತವು ಈಗ ಬಾಹ್ಯಾಕಾಶದಲ್ಲಿ ಸೂಕ್ಷ್ಮ ಉಪಗ್ರಹವನ್ನು ಹೊಂದಿದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ನಾಲ್ಕು ಉಪಗ್ರಹಗಳಲ್ಲಿ ಇದೂ ಕೂಡ ಒಂದಾಗಿದ್ದು, ಇದೇ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್‌ಎಲ್‌ವಿ-ಸಿ 51 ಭಾನುವಾರ ಉಡಾವಣೆ ಮಾಡಿತ್ತು. 

ಹೌದು.. ನಿನ್ನೆ ಸಿಂಧುನೇತ್ರ ಉಪಗ್ರಹವನ್ನು ಆಂಧ್ರಪ್ರದೇಶದಲ್ಲಿನ ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಎಚ್‌ಎಆರ್‌) ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಇದೀಗ ಉಪಗ್ರಹ ಬಾಹ್ಯಾಕಾಶ ಕಕ್ಷೆ ತಲುಪಿದ್ದು, ಪ್ರಾಥಮಿಕ ಹಂತದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಪಿಇಎಸ್‌ ತಂಡದಲ್ಲಿನ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಈ ಉಪಗ್ರಹವನ್ನು ಪಿಇಎಸ್ ವಿಶ್ವವಿದ್ಯಾಲಯದ ಅಧ್ಯಾಪಕ ಸದಸ್ಯರು ಮತ್ತು ವಿದ್ಯಾರ್ಥಿಗಳ ತಂಡವು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಎಂದು ಪಿಇಎಸ್ ನ ಕ್ರೂಸಿಬಲ್ ಆಫ್ ರಿಸರ್ಚ್ & ಇನ್ನೋವೇಶನ್ (ಸಿಒಆರ್ಐ) ನಿರ್ದೇಶಕ ವಿ ಸಾಂಬಶಿವ ರಾವ್ ಅವರು ಮಾಹಿತಿ ನೀಡಿದರು.

ಪಿಇಎಸ್‌ನ ಡಾ. ಸಾಂಬಶಿವ ರಾವ್ ಮತ್ತು ಡಾ. ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೆರವಿನಿಂದ ಈ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ್ದಾರೆ. ಡಿಆರ್‌ಡಿಒ ಈ ಕಾರ್ಯಕ್ಕೆ 2.2 ಕೋಟಿ ಧನಸಹಾಯ ನೀಡಿದೆ. ವಿದ್ಯಾರ್ಥಿಗಳಾದ ಎಂ. ಯೋಗೇಶ್, ಪರ್ವೇಜ್ ಮಹಮ್ಮದ್‌, ಕಾವ್ಯಶ್ರೀ, ಅಜಿತ್ ಕುಮಾರ್‌, ಮಹಾಂತೇಶ್, ಅಬ್ದುಲ್‌, ಅಭಿರಾಮಿ ಉಪಗ್ರಹ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ‘ಸಿಂಧುನೇತ್ರ’ ಉಡಾವಣೆಯು ಯಶಸ್ವಿಯಾಗಿದ್ದು, ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ವಿಜ್ಞಾನ ದಿನದಂದೇ ಕಾಲೇಜಿನ ಈ ತಂಡ ಇಂತಹ ವಿಶಿಷ್ಟ ಸಾಧನೆ ಮಾಡಿರುವುದು ಅಭಿನಂದನಾರ್ಹ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಉಪಗ್ರಹಗಳನ್ನು ನಿಯಂತ್ರಿಸುತ್ತಿದ್ದಾರೆ: ಪಿಇಎಸ್
ಇನ್ನು ವಿದ್ಯಾರ್ಥಿಗಳು ಉಪಗ್ರಹಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪಿಇಎಸ್ ಸಂಸ್ಥೆ ಹೇಳಿದ್ದು. ಈ ಬಗ್ಗೆ ಮಾತನಾಡಿರುವ ಸಾಂಬಶಿವ ರಾವ್ ಅವರು ಅವರು, ‘ಹೈದರಾಬಾದ್‌ನಲ್ಲಿರುವ ಇಸ್ರೊದ ನಿಯಂತ್ರಣ ಕೇಂದ್ರವು ಈ ಉಪಗ್ರಹ ಕಾರ್ಯಾಚರಣೆಯ ಮೇಲೆ ನಿಗಾ ಇರಿಸಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಆರ್‌ಎಸ್‌ಎಟಿಯಿಂದ ಸಂದೇಶಗಳು ಬರಲಿವೆ.  ಉಪಗ್ರಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಟರಿ ಸಾಮರ್ಥ್ಯ ಉತ್ತಮವಾಗಿದೆ. ಉಪಗ್ರಹವು ನಿಗದಿತ ಕಕ್ಷೆ ಸೇರಿದ್ದರ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ಉಪಗ್ರಹ ಸಂಪೂರ್ಣ ಕಾರ್ಯಾಚರಣೆಯನ್ನೂ ಮಂಗಳವಾರದಿಂದಲೇ ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.  

ಈಗ ಪದವಿ ಪಡೆದ 13 ವಿದ್ಯಾರ್ಥಿಗಳಿಗೆ ಸ್ಟೈಫಂಡ್ ನೀಡಲಾಗುತ್ತಿದೆ ಮತ್ತು ಯೋಜನೆಯಡಿಯಲ್ಲಿ ಉದ್ಯೋಗ ನೀಡಲಾಗಿದೆ. ಹೆಚ್ಚುವರಿಯಾಗಿ, ಇತರೆ 50 ವಿದ್ಯಾರ್ಥಿಗಳು ವಿನ್ಯಾಸದಲ್ಲಿ ಸಹಾಯ ಮಾಡಿದರು. ಅವರಿಗೆ ಯೋಜನೆಗಳನ್ನು ಕೂಡ ಗುರುತಿಸಲಾಗಿದೆ  ಎಂದೂ ಹೇಳಿದರು.

ಪಿಇಎಸ್ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪಿಎಚ್‌ಡಿ ವಿದ್ಯಾರ್ಥಿನಿ ಸುಷ್ಮಾ ಶಂಕರಪ್ಪ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಸಂಸ್ಥೆಯಲ್ಲಿ ಮಾಜಿ ಇಸ್ರೋ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದ್ದು ನಮಗೆ ಒಂದು ಉತ್ತಮ ಅನುಭವ ನೀಡಿದೆ. ಮೈಕ್ರೋ ಸ್ಯಾಟಲೈಟ್‌ಗಾಗಿ ಆಂಟೆನಾಗಳ ವಿನ್ಯಾಸ, ಫ್ಯಾಬ್ರಿಕೇಶನ್ ಮತ್ತು ಪರೀಕ್ಷೆಯ ಉದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡಿದರು. ನಾವು ಆಂಟೆನಾಗಳನ್ನು ವಿನ್ಯಾಸಗೊಳಿಸಲು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಸಾಫ್ಟ್‌ವೇರ್ ಅನ್ನು ಬಳಸಿದ್ದೇವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. 

ಅಂತೆಯೇ ಫ್ಯಾಬ್ರಿಕೇಶನ್ ನಮಗೆ ಉಪಕರಣಗಳನ್ನು ಸಂಗ್ರಹಿಸಲು ಅಗತ್ಯವಾಗಿತ್ತು, ಇದನ್ನು ನಾನು ಮಾಜಿ ಇಸ್ರೋ ವಿಜ್ಞಾನಿಗಳಾದ ಪ್ರಾಧ್ಯಾಪಕರ ಸಹಾಯದಿಂದ ಮಾಡಿದ್ದೇನೆ ಎಂದು ತುಮಕುರು ಮೂಲದ ಸುಷ್ಮಾ ಹೇಳಿದರು. ಶೈಕ್ಷಣಿಕ ಸುಧಾರಣೆಗಳ ಕುರಿತು ಕರ್ನಾಟಕ ಸರ್ಕಾರದ ಸಲಹೆಗಾರ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp