ಟೂಲ್ ಕಿಟ್ ಕೇಸ್: ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋದ ನಿಕಿತಾ ಜಾಕಬ್
ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೂಲ್ ಕಿಟ್ ವೊಂದನ್ನು ಹಂಚಿಕೆ ಮಾಡಿಕೊಂಡಿದ್ದಕ್ಕೆ ದಿಶಾ ರವಿ ಅವರೊಂದಿಗೆ ಆರೋಪ ಎದುರಿಸುತ್ತಿರುವ ನಿಕಿತಾ ಜಾಕಬ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Published: 01st March 2021 08:51 PM | Last Updated: 01st March 2021 08:51 PM | A+A A-

ನಿಕಿತಾ ಜಾಕಬ್
ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟೂಲ್ ಕಿಟ್ ವೊಂದನ್ನು ಹಂಚಿಕೆ ಮಾಡಿಕೊಂಡಿದ್ದಕ್ಕೆ ದಿಶಾ ರವಿ ಅವರೊಂದಿಗೆ ಆರೋಪ ಎದುರಿಸುತ್ತಿರುವ ನಿಕಿತಾ ಜಾಕಬ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದೇಶದ್ರೋಹ ಆರೋಪಕ್ಕೊಳಗಾಗಿರುವ ಜಾಕಬ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ಬರಲಿದೆ.
ಫೆಬ್ರವರಿ 17 ರಂದು ಬಾಂಬೆ ಹೈಕೋರ್ಟ್ನಿಂದ ಮೂರು ವಾರಗಳ ಕಾಲ ಆಕೆಗೆ ಜಾಮೀನು ಸಿಕ್ಕಿದ್ದು, ದೆಹಲಿಯಲ್ಲಿ ಸಂಬಂಧಪಟ್ಟ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನಿಂದ ದೆಹಲಿ ಪೊಲೀಸರು ಬಂಧಿಸಿರುವ ಹವಾಮಾನ ಕಾರ್ಯಕರ್ತ ದಿಶಾ ರವಿ ಅವರಿಗೆ ಫೆಬ್ರವರಿ 23 ರಂದು ನ್ಯಾಯಾಲಯ ಜಾಮೀನು ನೀಡಿತ್ತು.