ಬೆಂಗಳೂರು: ಎಟಿಎಂ ಸೆಂಟರ್‌ ಗಳಲ್ಲಿ ವಂಚಿಸಿ ಹಣ ಡ್ರಾ ಮಾಡುತ್ತಿದ್ದವನ ಬಂಧನ

ಎಟಿಎಂ ಸೆಂಟರ್ ಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ ಆರೋಪಿ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Published: 02nd March 2021 03:50 PM  |   Last Updated: 02nd March 2021 04:00 PM   |  A+A-


ದೀಪಕ್

Posted By : Raghavendra Adiga
Source : UNI

ಬೆಂಗಳೂರು: ಎಟಿಎಂ ಸೆಂಟರ್ ಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ ಆರೋಪಿ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ದೀಪಕ್ (20) ಬಂಧಿತ ಆರೋಪಿ.

ಬಂಧಿತನಿಂದ ವಿವಿಧ ಬ್ಯಾಂಕ್‍ಗಳ 48 ಎಟಿಎಂ ಕಾರ್ಡ್‌ಗಳು, 58,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಎಟಿಎಂ ಮೆಷಿನ್ ನಲ್ಲಿ ಹಣ ಬರುವ ಜಾಗದಲ್ಲಿ ಕೈಯಿಟ್ಟು ಮೆಷಿನ್ ಹ್ಯಾಂಗ್ ಆಗುವಂತೆ ಮಾಡಿ ವಂಚಿಸುತ್ತಿದ್ದ. ಹಣ ಸಿಕ್ಕ ನಂತರ ಹಣ ಡ್ರಾ ಆಗಿಲ್ಲ ಎಂದು ಬ್ಯಾಂಕಿಗೆ ಮೇಲ್ ಮೂಲಕ ಸಂದೇಶ ಕಳಿಸಿ ತನ್ನ ಅಕೌಂಟ್ ಗೆ ಮತ್ತೆ ಹಣ ಜಮೆ ಮಾಡಿಸಿಕೊಳ್ಳುತ್ತಿದ್ದ. ಈತ 19 ಯೂನಿಯನ್ ಬ್ಯಾಂಕ್, 20 ಎಸ್​ಬಿಐ, 4 ಫೆಡರಲ್ ಬ್ಯಾಂಕ್, 2 ಹೆಚ್​ಡಿಎಫ್​ಸಿ, 1 ಆಕ್ಸಿಸ್ ಬ್ಯಾಂಕ್ ಹಾಗು ಎರಡು ಬ್ಯಾಂಕ್ ಆಫ್ ಬರೋಡಾ ಎಟಿಎಂ ಕಾರ್ಡ್​ಗಳ ಬಳಸಿ ವಂಚಿಸಿದ್ದಾನೆ. ಒಟ್ಟು ಅಂದಾಜು  4-5 ಲಕ್ಷ ಹಣ ವಂಚಿಸಿರುವ ಬಗ್ಗೆ ತನಿಳೆಯಿಂದ ತಿಳಿದುಬಂದಿದೆ.

ಇನ್ನು ದೀಪಕ್ ಉತ್ತರ ಪ್ರದೇಶದ ವ್ಯಕ್ತಿಗಳಿಂದ ಎಟಿಎಂ ಕಾರ್ಡ್ ತರಿಸಿಕೊಳ್ಳುತ್ತಿದ್ದ. ಒಂದು ಕಾರ್ಡ್ ಗೆ ಇಂತಿಷ್ಟು ಕಮಿಷನ್ ಎಂದು ನಿಗದಿ ಮಾಡಿದ್ದ. ಹಾಗೆ ಪಡೆದ ಕಾರ್ಡ್ ಗಳಿಂದ ಬ್ಯಾಂಕುಗಳಿಗೆ ವಂಚಿಸುತ್ತಿದ್ದ. ಹಣ ನಾಪತ್ತೆಯಾಗಿರುವ ಬಗ್ಗೆ ಎಂಎಫ್​ಸಿಎಸ್ ಎಜೆನ್ಸಿ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೋಲೀಸರು ಈಗ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp