ನಾವು ಈಗ ಸುರಕ್ಷಿತವಾಗಿದ್ದೇವೆ: ಕೋವಿಡ್ ಲಸಿಕೆ ಪಡೆದ ಶತಾಯುಷಿ ಅನಿಸಿಕೆ!

ಸೋಮವಾರ ರಾಜ್ಯದಲ್ಲಿ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಯಿತು, ಈ ವೇಳೆ ಬೆಂಗಳೂರಿನಲ್ಲಿ 102 ವರ್ಷದ ನಿವೃತ್ತ ಭಾರತೀಯ ಸೇನಾಧಿಕಾರಿ ಲಸಿಕೆ ಪಡೆದಿದ್ದಾರೆ.

Published: 02nd March 2021 01:46 PM  |   Last Updated: 02nd March 2021 01:54 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಸೋಮವಾರ ರಾಜ್ಯದಲ್ಲಿ ಮೂರನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಯಿತು, ಈ ವೇಳೆ ಬೆಂಗಳೂರಿನಲ್ಲಿ 102 ವರ್ಷದ ನಿವೃತ್ತ ಭಾರತೀಯ ಸೇನಾಧಿಕಾರಿ ಲಸಿಕೆ ಪಡೆದಿದ್ದಾರೆ.

ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ 102 ವರ್ಷದ ಕೆ.ಎನ್. ಸುಬ್ರಮಣಿಯನ್ ಲಸಿಕೆ ಪಡೆದುಕೊಂಡಿದ್ದಾರೆ.  ನಾನು ದುರ್ಬಲ ಗುಂಪಿನಲ್ಲಿರುವುದರಿಂದ ಅದನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ  ಹಾಗೂ ಸೋಂಕುಹರಡಲು ಬಯಸುವುದಿಲ್ಲ.

ಈ ಹಿಂದೆ ನಾನು ಸೇನೆಯಲ್ಲಿದ್ದಾಗ ಗುಂಡಿನ ದಾಳಿಗೆ ಎದೆಯೊಡ್ಡಿದ್ದೇನೆ, ಇಲ್ಲಿಯವರೆಗೆ ಆರೋಗ್ಯಯುತ ಜೀವನ ನಡೆಸಿದ್ದೇನೆ, ಲಸಿಕೆ ಪಡೆದ ನಂತರ ನಾನು ಸುರಕ್ಷಿತವಾಗಿದ್ದೇನೆ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ 60 ವರ್ಷಕ್ಕಿಂತ ಮೇಲ್ಪಟ್ಟ 1,576 ಕ್ಕೂ ಹೆಚ್ಚು ಜನರು ಪಡೆದರು. ಮೈಸೂರು (285), ಬೆಂಗಳೂರು ನಗರ (170), ಬಳ್ಳಾರಿ (168), ಮತ್ತು ಉತ್ತರ ಕನ್ನಡ (120)  ಸೇರಿದಂತೆ ಹಲವು ಜಿಲ್ಲೆಗಳು ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಲಸಿಕೆ ಪಡೆಯುವಲ್ಲಿ ಉತ್ತಮವಾಗಿವೆ, 

ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಇಂದು 97 ವರ್ಷದ ಹಿರಿಯ ವಿಜ್ಞಾನಿಯಾದ ರಾಮಸ್ವಾಮಿ ಪಾರ್ಥಸಾರಥಿ ಅವರು ಕೊರೊನಾ ಲಸಿಕೆ ಪಡೆದಿದ್ದಾರೆ. ರಾಮಸ್ವಾಮಿ ಅವರು ಅಮೆರಿಕಾದಲ್ಲಿ ಸ್ಯಾಟಲೈಟ್​ ಸಂಪರ್ಕ ಕಲ್ಪಿಸುವ ಕಂಪನಿಯಲ್ಲಿ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಲಸಿಕೆ ಪಡೆದ ಬಳಿಕ ಮಾತನಾಡಿದ ರಾಮಸ್ವಾಮಿ ಪಾರ್ಥಸಾರಥಿ ಅವರು.. ಲಸಿಕೆ ನೀಡಿದ ಭಾಗದಲ್ಲಿ ಯಾವುದೇ ನೋವು ಕಾಣಿಸಿಕೊಂಡಿಲ್ಲ. ಇಂದು ಲಸಿಕೆ ಪಡೆದಿರುವುದರಿಂದ ಪರಿಣಾಮದ ಬಗ್ಗೆ ಶೀಘ್ರವೇ ಮಾತನಾಡುತ್ತೇನೆ ಎಂದರು. ಸಲ್ಪ ಮಟ್ಟಿನ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳವ ಕುತೂಹಲವಿದೆ. ಆದರೆ ವ್ಯಾಕ್ಸಿನೇಷನ್​ ಬಗೆಗಿನ ಅನಗತ್ಯ ಆತಂಕಗಳನ್ನು ದೂರ ಮಾಡಬೇಕು. ನಾನು ವಿಜ್ಞಾದ ಬಗ್ಗೆ ತಿಳಿದಿರುವುದರಿಂದ ಹಾಗೂ ನಾನೊಬ್ಬ ವಿಜ್ಞಾನಿಯಾದ್ದರಿಂದ ನನಗೆ ಕೊರೊನಾ ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಇರಲಿಲ್ಲ ಎಂದರು.

ನಾನು ಸಂಜೆ 5 ಗಂಟೆ ಸುಮಾರಿಗೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿರುವ ಆರೋಗ್ಯ ಸೇತು ಎಂಬಲ್ಲಿ ನೋಂದಾಯಿಸಿಕೊಂಡಿದ್ದೆ. ಸಂಜೆ 5.50 ರ ಹೊತ್ತಿಗೆ ನನಗೆ ಲಸಿಕೆ ನೀಡಲಾಯಿತು. ಆರಂಭದಲ್ಲಿ, ನಾನು ಸ್ವಲ್ಪ ಹೆದರುತ್ತಿದ್ದೆ, ಆದರೆ ಈಗ  ನಾವು ಸುರಕ್ಷಿತವಾಗಿರಲು ಲಸಿಕೆ ಪಡೆಯಬೇಕು ಎನಿಸುತ್ತಿದೆ. ನನ್ನ 67 ವರ್ಷದ ಸಹೋದರ ಮತ್ತು ಅವನ 64 ವರ್ಷದ ಪತ್ನಿಯ ಜೊತೆ ಬಂದಿದ್ದೇನೆ. ನಮಗೆ ಯಾವುದೇ ಅಡ್ಡಪರಿಣಾಮಗಳಿಲ್ಲ , ಭಯವೂ ಇಲ್ಲ ಎಂದು ಬನ್ನೇರು ಘಟ್ಟ ನಿವಾಸಿ ಹೇಮಗಂಧಿ ತಿಳಿಸಿದ್ದಾರೆ.

ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರು ಕೊರೋನಾ ಲಸಿಕೆ ಪಡೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಲಸಿಕೆ ಪಡೆದ ಮೇಲೆ ತಾವು ಸುರಕ್ಷಿತವೆಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp