ಬೆಂಗಳೂರು: ಐಐಎಸ್ ಸಿ ಕ್ಯಾಂಪಸ್ ಹಾಸ್ಟೆಲ್ ಕೊಠಡಿಯಲ್ಲಿ ಪಿಹೆಚ್ ಡಿ ವಿದ್ಯಾರ್ಥಿ ಆತ್ಮಹತ್ಯೆ 

ಭಾರತೀಯ ವಿಜ್ಞಾನ ಸಂಸ್ಥೆಯ 34 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಕ್ಯಾಂಪಸ್ ನಲ್ಲಿನ ಹಾಸ್ಟೆಲ್ ಕೊಠಡಿಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Published: 03rd March 2021 07:56 PM  |   Last Updated: 03rd March 2021 07:57 PM   |  A+A-


Casual_images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ 34 ವರ್ಷದ ಪಿಹೆಚ್ ಡಿ ವಿದ್ಯಾರ್ಥಿಯೊಬ್ಬ ಕ್ಯಾಂಪಸ್ ನಲ್ಲಿನ ಹಾಸ್ಟೆಲ್ ಕೊಠಡಿಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಾವುದೇ ಸೂಸೈಡ್ ನೋಟ್ ಬರೆದಿಟ್ಟಿಲ್ಲ, ಕಾಲೇಜ್ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ  ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಲಾಗಿದೆ. ಆತ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ  ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತ ವಿದ್ಯಾರ್ಥಿ ರಣದೀರ್ ಕುಮಾರ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಬಿಹಾರದಿಂದ  ಬಂದಿದ್ದ ಎಂದು ಸದಾಶಿವನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನ್ಯಾನೋ ಟೆಕ್ನಾಲಜಿ ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದ ಆತ ಕೆಲ ವರ್ಷಗಳಿಂದ ಕ್ಯಾಂಪಸ್ ನಲ್ಲಿದ್ದ. ಈ ವರ್ಷ ಕೋರ್ಸ್ ಮುಗಿದ ಬಳಿಕ ಪಿಹೆಚ್ ಡಿ ಪ್ರಬಂಧ ಮಂಡಿಸಬೇಕಿತ್ತು.

ಸೋಮವಾರ ರಾತ್ರಿ ಫೋನ್ ಮೂಲಕ ಸಂಪರ್ಕಿಸಲು ಆತನ ಸ್ನೇಹಿತರು, ಕುಟುಂಬದವರು ಪ್ರಯತ್ನಿಸಿದ್ದಾರೆ. ಕರೆಯನ್ನು ಸ್ವೀಕರಿಸಿಲ್ಲ. ಮಂಗಳವಾರ ಮಧ್ಯಾಹ್ನ ಆತನ ಕೊಠಡಿಯನ್ನು ಪರಿಶೀಲಿಸಲು ತೆರಳಿದಾಗ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಬುಧವಾರ ಹಸ್ತಾಂತರಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಕ್ಯಾಂಪಸ್ ನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವಿನ ವರದಿ ಅತೀವ ದು:ಖವನ್ನುಂಟು ಮಾಡಿದೆ. ಮಾನಸಿಕ ಖಿನ್ನತೆಗೆ ತಲುಪಿದ ಐಐಎಸ್ ಸಿ ಸಮುದಾಯದ ಸದಸ್ಯರು, ಮಾನಸಿಕ ಆರೋಗ್ಯದ ಬಗ್ಗೆ ಫೋನ್ ನಂಬರ್ 080-47113444 ಸಂಪರ್ಕಿಸಿ ಸಲಹೆ ಪಡೆಯಬಹುದು ಎಂದು ಐಐಎಸ್ ಸಿ ರಿಜಿಸ್ಟ್ರರ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp