ಗ್ರಾಹಕರಿಗೆ ತೃಪ್ತಿಕರ ಸೇವೆ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮೂರನೇ ಸ್ಥಾನ

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡೆಸಿದ ಗ್ರಾಹಕ ತೃಪ್ತಿ ಸೇವಾ ಸಮೀಕ್ಷೆಯಲ್ಲಿ (ಸಿಎಸ್‌ಎಸ್) ದಕ್ಷಿಣ ಪ್ರಾದೇಶಿಕ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣ 3 ನೇ ಮತ್ತು ರಾಷ್ಟ್ರವ್ಯಾಪಿ ಜಾಲದಲ್ಲಿ 15 ನೇ ಸ್ಥಾನ ಪಡೆದುಕೊಂಡಿದೆ.

Published: 03rd March 2021 12:43 PM  |   Last Updated: 03rd March 2021 01:24 PM   |  A+A-


ಹುಬ್ಬಳ್ಳಿ ವಿಮಾನ ನಿಲ್ದಾಣ

Posted By : Raghavendra Adiga
Source : UNI

ಹುಬ್ಬಳ್ಳಿ: ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಡೆಸಿದ ಗ್ರಾಹಕ ತೃಪ್ತಿ ಸೇವಾ ಸಮೀಕ್ಷೆಯಲ್ಲಿ (ಸಿಎಸ್‌ಎಸ್) ದಕ್ಷಿಣ ಪ್ರಾದೇಶಿಕ ವಿಮಾನ ನಿಲ್ದಾಣಗಳ ಪೈಕಿ ಹುಬ್ಬಳ್ಳಿ ವಿಮಾನ ಹುಬ್ಬಳ್ಳಿ ವಿಮಾನ ನಿಲ್ದಾಣ 3 ನೇ ಮತ್ತು ರಾಷ್ಟ್ರವ್ಯಾಪಿ ಜಾಲದಲ್ಲಿ 15 ನೇ ಸ್ಥಾನ ಪಡೆದುಕೊಂಡಿದೆ.

ಜುಲೈ - ಡಿಸೆಂಬರ್ 2020 ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಬುಧವಾರ ಇಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೇಶದ 56 ವಿಮಾನ ನಿಲ್ದಾಣಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಎರಡು ಸುತ್ತಿನ ಸಮೀಕ್ಷೆ ನಡೆಸಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ ಹೇಳಿದ್ದಾರೆ.

ಪಾಸ್ಪೋರ್ಟ್ ನಿಯಂತ್ರಣ, ಭದ್ರತೆ, ವಿಮಾನ ನಿಲ್ದಾಣ ಸೌಲಭ್ಯಗಳು, ಪರಿಸರ, ಸೇವೆಗಳು ಮತ್ತು ಪ್ರಯಾಣದ ವಿವರಗಳಿಗೆ ಸಂಬಂಧಿಸಿದಂತೆ ಒಟ್ಟಾರೆ ಗ್ರಾಹಕರ ತೃಪ್ತಿಯಂತಹ ಹಲವು ಕ್ರಮ ಅನುಸರಿಸಿ ಸ್ಥಾನ ನೀಡಲಾಗಿದೆ. 

ತಮ್ಮ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಒದಗಿಸಿದ್ದಕ್ಕಾಗಿ ಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಎಲ್ಲಾ ಪಾಲುದಾರರಿಗೆ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಸಿಕೊಂಡ ಪ್ರಯಾಣಿಕರಿಗೆ ಠಾಕ್ರೆ ಧನ್ಯವಾದಗಳನ್ನು ಅರ್ಪಿಸಿದರು. ಪ್ರಯಾಣಿಕರ ತೃಪ್ತಿ ನಮಗೆ ಮಹತ್ವದ್ದಾಗಿದೆ. ಹಾಗಾಗಿ ಉತ್ತಮ ಸೇವೆಗಳನ್ನು ಒದಗಿಸುವಲ್ಲಿ ಸುಧಾರಣೆ ನಿರಂತರ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp