ಕೆಎಸ್ಆರ್ ಪಿ ಮಹಿಳಾ ಬೆಟಾಲಿಯನ್ ನಿಂದ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ 'ಸ್ವರಕ್ಷಣೆ ತರಬೇತಿ'!

ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್ಆರ್ ಪಿ)ಯ ಮಹಿಳಾ ಬೆಟಾಲಿಯನ್ ನ ಸಿಬ್ಬಂದಿಗಳು ಇನ್ನು ಮುಂದೆ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಅಥವಾ ಸ್ವರಕ್ಷಣೆಯ ತರಬೇತಿ ನೀಡಲಿದ್ದಾರೆ. 

Published: 03rd March 2021 01:57 PM  |   Last Updated: 03rd March 2021 02:04 PM   |  A+A-


KSRP women

ಕೆಎಸ್ಆರ್ ಪಿ ಮಹಿಳಾ ಸಿಬ್ಬಂದಿ (ಸಂಗ್ರಹ ಚಿತ್ರ)

Posted By : Srinivasamurthy VN
Source : The New Indian Express

ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್ಆರ್ ಪಿ)ಯ ಮಹಿಳಾ ಬೆಟಾಲಿಯನ್ ನ ಸಿಬ್ಬಂದಿಗಳು ಇನ್ನು ಮುಂದೆ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಅಥವಾ ಸ್ವರಕ್ಷಣೆಯ ತರಬೇತಿ ನೀಡಲಿದ್ದಾರೆ. 

ಕರ್ನಾಟಕದ ಶಾಲೆಗಳು ಮತ್ತು ಕಾಲೇಜುಗಳು ಈಗ ಯುವತಿಯರಿಗೆ ವಿಶೇಷ ಸ್ವರಕ್ಷಣೆ ತರಬೇತಿ ನೀಡಲಿವೆ. ಬಾಲಕಿಯರಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮಹಿಳಾ ದಳದ ಸಿಬ್ಬಂದಿಗಳು ತರಬೇತಿ ನೀಡಲಿದ್ದಾರೆ.  ಈ ವಿಶೇಷ ಕಾರ್ಯಕ್ರಮವನ್ನು ಮಾರ್ಚ್ 9 ರಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್ 8) ಆಚರಣೆಯ ಅಂಗವಾಗಿ ಪ್ರಾರಂಭಿಸಲಿದ್ದಾರೆ. ಇದನ್ನು ಬೆಂಗಳೂರು ಮತ್ತು ಬೆಳಗಾವಿಯ ಆಯ್ದ 15 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆರಂಭಿಸಲಾಗುತ್ತಿದೆ.

ಅಲೋಕ್ ಕುಮಾರ್ ದೂರದೃಷ್ಟಿ
ಇನ್ನು ಈ ವಿಶೇಷ ಕಾರ್ಯಕ್ರಮದ ರೂವಾರಿ ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ರಾಜ್ಯ ಮೀಸಲು ಪಡೆಯ ಹೆಚ್ಚವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು. ಈ ಹಿಂದೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದು ಇಲಾಖೆಯ ಖ್ಯಾತಿಗೆ ಕಾರಣರಾಗಿದ್ದ ಅಲೋಕ್ ಕುಮಾರ್ ಅವರು ಇದೀಗ ಮೀಸಲು ಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕರಾಟೆ ತರಬೇತಿ ಕೊಡಿಸಿ ಕಮಾಂಡೋ ಮಾದರಿ ತಯಾರು ಮಾಡಿಸಿದ್ದಾರೆ. ಅಲೋಕ್ ಕುಮಾರ್ ಅವರ ದೂರ ದೃಷ್ಟಿಯಿಂದ ಇದೀಗ ಕೆಎಸ್ ಆರ್‌ಪಿ ಪಡೆ ವಿಶೇಷ ಮಹಿಳಾ ಪೊಲೀಸ್ ಪಡೆಯಾಗಿ ರೂಪಾಂತರಗೊಳ್ಳುತ್ತಿದೆ. 

ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು, 'ಈ ತರಗತಿಗಳು ಯುವತಿಯರಿಗೆ ಮತ್ತು ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಅವರ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶಾಲೆಗಳು ಮತ್ತು ಕಾಲೇಜುಗಳು ಮಾತ್ರವಲ್ಲ, ಪೊಲೀಸ್ ಸಿಬ್ಬಂದಿಗಳ ಮಕ್ಕಳು ಮತ್ತು ಮಹಿಳಾ ಸದಸ್ಯರಿಗೆ ಸಹ ಆತ್ಮರಕ್ಷಣೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಕೆಎಸ್‌ಆರ್‌ಪಿಯ ಮಹಿಳಾ ತುಕಡಿ ಕರಾಟೆ ತರಬೇತಿ ಪಡೆದಿದೆ ಮತ್ತು ಈ ಮಹಿಳೆಯರು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯುವತಿಯರಿಗೆ ಬೋಧಕರಾಗಿ ಬದಲಾಗುತ್ತಾರೆ. ಸುಮಾರು 50 ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ನಮ್ಮ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮದಡಿ ಶಾಲೆಗಳನ್ನು ಸಹ ನಾವು ಒಳಗೊಳ್ಳಲಿದ್ದೇವೆ. ಇದು ನಮ್ಮ ಕಡೆಯಿಂದ ಸ್ವಯಂಪ್ರೇರಿತ ಉಪಕ್ರಮವಾಗಿರುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು. 

ಸ್ವಯಂ ರಕ್ಷಣೆಗೆ ಪ್ರೇರಣೆ 
ರಾಜ್ಯ ಮೀಸಲು ಪಡೆಯ ಎರಡು ಬ್ಯಾಚ್ ಗಳು ಕರಾಟೆ ತರಬೇತಿ ಪಡೆಯುವ ಮೂಲಕ ಕಮಾಂಡೋಗಳಾಗಿ ಬದಲಾಗಿದ್ದಾರೆ. ಎದೆ ಮಟ್ಟಕ್ಕೆ ಕಾಲಲ್ಲಿ ಒದೆಯಬಲ್ಲರು. ಮೊಣಕೈಯಲ್ಲಿ ಹೊಟ್ಟೆಗೆ ಗುದ್ದಿ ಎಂಥವರನ್ನಾದರೂ ಕೆಳಗೆ ಬೀಳಿಸಬಲ್ಲರು. ಮುಷ್ಠಿ ಗುದ್ದು ನೀಡಿ ಎಂತಹ ಕಿರಾತಕನನ್ನು ಬೇಕಾದರೂ ಎದುರಿಸಬಲ್ಲರು. ಕರಾಟೆಯಲ್ಲಿ ತರಬೇತಿ ಪಡೆದು ಮೀಸಲು ಪಡೆಯ ಮಹಿಳಾ ಸಿಬ್ಬಂದಿ "ಕರಾಟೆ ಪೊಲೀಸ್ " ಆಗಿ ರೂಪಾಂತರಗೊಂಡಿದ್ದಾರೆ. ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ಒಂದು ಬ್ಯಾಚ್, ಬೆಂಗಳೂರಿನಲ್ಲಿ ಒಂದು ಬ್ಯಾಚ್ ತಯಾರಾಗಿದೆ. ಹಂತ ಹಂತವಾಗಿ ರಾಜ್ಯದ ಮೀಸಲು ಪಡೆಯ ಮಹಿಳಾ ಸಿಬ್ಬಂದಿಗೆ ಇದೇ ರೀತಿ ಕರಾಟೆ ತರಬೇತಿ ಸಿಗಲಿದೆ. ಕಮಾಂಡೋಗಳ ಮಾದರಿ ತಯಾರಾಗಿರುವ ಮೀಸಲು ಪಡೆಯ ಮಹಿಳಾ ಸಿಬ್ಬಂದಿಯೇ ಇದೀಗ ಸರ್ಕಾರಿ ಶಾಲೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp