ಎಲ್'ಪಿಜಿ ಸಿಲಿಂಡರ್ ಬೆಲೆ ಏರಿಕೆ ನನ್ನ ಮೇಲೂ ಪರಿಣಾಮ ಬೀರಿದೆ: ಡಿ.ಕೆ.ಶಿವಕುಮಾರ್

ಇಂದು ನನ್ನ ಪತ್ನಿ ನನಗೆ ಬೆಳಗಿನ ಉಪಾಹಾರ ನೀಡಿಲ್ಲ. ಕಾರಣ ಕೇಳಿದರೆ, ಮನೆಗೆ ಬರುತ್ತಿದ್ದ ಎಲ್ಲಾ ಕೆಲಸದ ಮಹಿಳೆಯರು ಎಲ್'ಪಿಜಿ ಸಿಲಿಂಡಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಗೆ ಹೋಗಿದ್ದಾರೆಂದು ಹೇಳಿದರು, ಹೀಗೆ ಸಿಲಿಂಡರ್ ಬೆಲೆ ಏರಿಕೆ ನನ್ನ ಮೇಲೂ ಪರಿಣಾಮ ಬೀರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

Published: 03rd March 2021 08:20 AM  |   Last Updated: 03rd March 2021 08:20 AM   |  A+A-


KPCC president D K Shivakumar and members of Mahila Congress stage a protest against the LPG and fuel price hike at Sangoli Rayanna Circle, in Bengaluru on Tuesday

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಡಿಕೆ.ಶಿವಕುಮಾರ್

Posted By : Manjula VN
Source : The New Indian Express

ಬೆಂಗಳೂರು: ಇಂದು ನನ್ನ ಪತ್ನಿ ನನಗೆ ಬೆಳಗಿನ ಉಪಾಹಾರ ನೀಡಿಲ್ಲ. ಕಾರಣ ಕೇಳಿದರೆ, ಮನೆಗೆ ಬರುತ್ತಿದ್ದ ಎಲ್ಲಾ ಕೆಲಸದ ಮಹಿಳೆಯರು ಎಲ್'ಪಿಜಿ ಸಿಲಿಂಡಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆಗೆ ಹೋಗಿದ್ದಾರೆಂದು ಹೇಳಿದರು, ಹೀಗೆ ಸಿಲಿಂಡರ್ ಬೆಲೆ ಏರಿಕೆ ನನ್ನ ಮೇಲೂ ಪರಿಣಾಮ ಬೀರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಎಲ್​ಪಿಜಿ ಸಿಲಿಂಡರ್​ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್​ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮೌರ್ಯ ಸರ್ಕಲ್​ನಲ್ಲಿ ನಡು ರಸ್ತೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ದಿನೇ ದಿನೇ ಏರಿಕೆ ಮಾಡುತ್ತಿವೆ. ಈ ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲ. ಬೆಲೆ ಏರಿಗೆ ವಿರುದ್ಧ ಶೀಘ್ರದಲ್ಲೇ ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದು ಹೆಣ್ಣುಮಕ್ಕಳಿಗೆ ಹಾಗೂ ಎಲ್ಲರಿಗೂ ಅನ್ವಯಿಸುತ್ತೆ. ಇಂದು ನನ್ನ ಪತ್ನಿ ಬೆಳಗಿನ ಉಪಾಹಾರ ನೀಡಲಿಲ್ಲ. ಕಾರಣ ಮನೆಗೆ ಬರುತ್ತಿದ್ದ ಎಲ್ಲಾ ಕೆಲಸದ ಹೆಣ್ಣುಮಕ್ಕಳು ಬೆಲೆ ಏರಿಕೆ ವಿರುದ್ದ ಪ್ರತಿಭಟನೆಗೆ ಬಂದಿದ್ದಾರೆ. ಸಿಲಿಂಡರ್ ಬೆಲೆ ಏರಿಕೆ ನನ್ನ ಮೇಲೂ ಪರಿಣಾಮ ಬೀರಿದೆ. ನನಗೂ‌ ಹೊಟ್ಟೆ ಹಸಿದಿತ್ತು. ಇಲ್ಲಿಗೆ ಬಂದು ನಾಲ್ಕು ಇಡ್ಲಿ ತಿಂದಿದ್ದೇನೆ. ಗ್ಯಾಸ್ ಇಲ್ಲದೆ ಜನ ನೋವು ಅನುಭವಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್​ ಬೆಲೆ ಏರಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ರೂ.300 ರಿಂದ ರೂ.900ಕ್ಕೆ ಏರಿದೆ. ನಾನು ಎಷ್ಟಾದರೂ ಖರೀದಿ ಮಾಡುತ್ತೇನೆ. ಜನಸಾಮಾನ್ಯರ ಪಾಡೇನು? ಎಂದು ಶಿವಕುಮಾರ್​ ಪ್ರಶ್ನಿಸಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp