ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಹತ್ಯೆ ಮಾಡಿದವರ ಬಂಧನ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರೂ ಆರೋಪಿಗಳನ್ನು 24 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿ ಹಲಸೂರು ಪೊಲೀಸರು ಬಂಧಿಸಿದ್ದಾರೆ.

Published: 03rd March 2021 06:23 PM  |   Last Updated: 03rd March 2021 06:23 PM   |  A+A-


arrested

ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರೂ ಆರೋಪಿಗಳನ್ನು 24 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿ ಹಲಸೂರು ಪೊಲೀಸರು ಬಂಧಿಸಿದ್ದಾರೆ.

ದೊಮ್ಮಲೂರು‌ ನಿವಾಸಿಗಳಾದ ಮನು(23) ನಾಗರಾಜ್ (54) ಬಂಧಿತ ಆರೋಪಿಗಳು.

ಸ್ಟೀಫನ್ ಕೊಲೆಯಾದ ದುರ್ದೈವಿಯಾಗಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದ ಮೂವರು ಸ್ನೇಹಿತರಾಗಿದ್ದರು. ಜೀವನೋಪಾಯಕ್ಕಾಗಿ ನಗರದಲ್ಲಿ‌ ಕೂಲಿ ಕೆಲಸ ಮಾಡುತ್ತಿದ್ದರು. ವಾರಕ್ಕೊಮ್ಮೆ ‌ಮೂವರು ಒಂದೆಡೆ ಸೇರಿ ಮದ್ಯ ಸೇವನೆ ಮಾಡುತ್ತಿದ್ದರು‌‌.

ಕಳೆದ ಭಾನುವಾರ ಮೂವರು ಹಲಸೂರು ಠಾಣಾ ವ್ಯಾಪ್ತಿಯ ದೊಮ್ಮಲೂರು ಬಳಿಯ ಬಯಲು ರಂಗಮಂದಿರ ಬಳಿ ಸೇರಿದ್ದು, ಈ ವೇಳೆ‌ ಮೂವರ ನಡುವೆ ಹಣಕಾಸು ವಿಚಾರಕ್ಕಾಗಿ ಗಲಾಟೆ ನಡೆದಿದೆ. ಅಲ್ಲದೇ, ಮದ್ಯ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ಮನು ಹಾಗೂ ನಾಗರಾಜ್ ಇಬ್ಬರೂ ಸ್ಟೀಫನ್​ ಮೇಲೆ‌ ಮುಗಿಬಿದ್ದು, ಆತನನ್ನು ಹೊಡೆದಿದ್ದಾರೆ. ಬಳಿಕ ಕಾಲುವೆಗೆ ಬಿಸಾಡಿ ಆತನ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆ‌ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲಸೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಜಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp