ಬೆಂಗಳೂರಿನ ಮತ್ತೊಂದು ಕೆರೆ ಅಳಿವಿನಂಚಿನಲ್ಲಿ: ರಕ್ಷಿಸಲು ಮುಂದಾಗಬೇಕಿದೆ ಇಲಾಖೆ

ನೀರಿಲ್ಲದೇ ಒಣಗಿರುವ ಕೆರೆ ಸದ್ಯ ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತಿದೆ. ಸರ್ಜಾಪುರ ರಸ್ತೆಯಲ್ಲಿ 78.97 ಎಕರೆ ವ್ಯಾಪ್ತಿಯಲ್ಲಿರುವ ಹಾಲನಾಯಕನಹಳ್ಳಿ ಕೆರೆ ಅಳಿವಿನಂಚಿನಲ್ಲಿದೆ.

Published: 04th March 2021 01:47 PM  |   Last Updated: 04th March 2021 02:16 PM   |  A+A-


The Halanayakanahalli Lake

ಹಾಲನಾಯಕನಹಳ್ಳಿ ಕೆರೆ

Posted By : Shilpa D
Source : The New Indian Express

ಬೆಂಗಳೂರು: ನೀರಿಲ್ಲದೇ ಒಣಗಿರುವ ಕೆರೆ ಸದ್ಯ ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತಿದೆ. ಸರ್ಜಾಪುರ ರಸ್ತೆಯಲ್ಲಿ 78.97 ಎಕರೆ ವ್ಯಾಪ್ತಿಯಲ್ಲಿರುವ ಹಾಲನಾಯಕನಹಳ್ಳಿ ಕೆರೆ ಅಳಿವಿನಂಚಿನಲ್ಲಿದೆ.

2014 ರಲ್ಲಿಯೇ ಸ್ಥಳೀಯರು ಈ ಸಂಬಂಧ ದೂರು ನೀಡಿದ್ದರು, ಆದರೆ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ,  ನೀರಾವರಿ ಇಲಾಖೆ ಇದನ್ನು ನಿರ್ವಹಿಸುತ್ತಿದೆ. 

ಇದು ಮೂರು ಸರ್ವೆ ಅಡಿಯಲ್ಲಿ ಬರುತ್ತದೆ, ಹಾಲನಾಯಕನಹಳ್ಳಿಯಲ್ಲಿ ಸಂಖ್ಯೆ 67, ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ 7ನೇ ಸಂಖ್ಯೆ ಮತ್ತು ಚಿಕ್ಕನಹಳ್ಳಿ ಗ್ರಾಮದ 12ನೇ ಸಂಖ್ಯೆಯ ಸರ್ವೆಯಲ್ಲಿ ಬರುತ್ತದೆ.

ಈ ಕೆರೆ ಸದ್ಯ ಕಸ ಮತ್ತು ನಿರ್ಮಾಣ ಸಾಮಾಗ್ರಿಗಳನ್ನು ಎಸೆಯುವ ಡಂಪ್ ಯಾರ್ಡ್ ಆಗಿದೆ ಎಂದು ಸ್ಥಳೀಯರು ಬಹಳ ಹಿಂದೆಯೇ ದೂರು ದಾಖಲಿಸಲಾಗಿತ್ತು. ಕೆರೆಯನ್ನು ಸದ್ಯ ರಸ್ತೆಯನ್ನಾಗಿ ಬದಲಾಗಿಸಲಾಗಿದೆ, ಕೆರೆಗೆ ನೀರು ಬರದಂತೆ ತಡೆಯಲಾಗಿದೆ, ಇದರಿಂದ ಕೆರೆಯೂ ಬಂಜರು ಭೂಮಿಯಂತಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ತಲುಪಿದೆ ಎಂದು ದೊಡ್ಡಕನ್ನೇಲ್ಲಿ ಪ್ರದೇಶದ ಶದಾಬ್ ಲಾರಿ ಹೇಳಿದ್ದಾರೆ.

2014 ರಲ್ಲಿ, ಮತ್ತೆ 2018 ರಲ್ಲಿ ಮತ್ತು 2019 ರಲ್ಲಿ ಕೆರೆಯ ಅತಿಕ್ರಮಣದ ಬಗ್ಗೆ ಸ್ಥಳೀಯರು ಇಲಾಖೆಗೆ ದೂರು ನೀಡಿದ್ದರು. ಇದರ ಜೊತೆಗೆ ಇಲಾಖೆಗೆ ಸಹಿ ಸಂಗ್ರಹ ಅಭಿಯಾನ ನಡೆಸಿ ಅದನ್ನು ನೀಡಿದ್ದಾರೆ, ಅಧಿಕಾರಿಗಳು ಅರ್ಜಿ ಸ್ನೀಕರಿಸಿದರೇ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

2018 ರಲ್ಲಿ, ಪ್ರಸಿದ್ಧ ಪರಿಸರವಾದಿ ಮತ್ತು ಮಾಜಿ ಐಎಫ್‌ಎಸ್ ಅಧಿಕಾರಿ ಎ ಎನ್ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು, ಇದು ಕೆರೆಗೆ ಭೇಟಿ ನೀಡಿತು ಮತ್ತು ಪರಿಸರವಾದಿಗಳಿಂದ  ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ ಕೆರೆ ಸುಧಾರಿಸಲು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿತು. ಆದರೆ ಸಣ್ಣ ನೀರಾವರಿ ಇಲಾಖೆ ಸಚಿವ ಜೆಸಿ ಮಾಧುಸ್ವಾಮಿ ಅವರನ್ನು ಕನ್ವಿನ್ಸ್ ಮಾಡಲಾಗಲಿಲ್ಲ, ಹೀಗಾಗಿ ತಾವು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕೆರೆಯ ಒಂದು ಭಾಗವನ್ನು ಒತ್ತುವರಿ ಮಾಡಲಾಗಿದೆ. ಈ ಸಂಬಂಧ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ, ಕೆರೆಯ ಭೂಮಿ ಎಷ್ಟಿದೆ ಎಂದು ನಿರ್ಧರಿಸಿಲು ಅಳತೆ ಮಾಡಿ ಸರ್ವೆ ಮಾಡಬೇಕೆಂದು ಒತ್ತಾಯ್ಸಲಾಗಿದೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp