ಮೂರ್ನಾಲ್ಕು ತಿಂಗಳ ಮಕ್ಕಳ ಮಾರಾಟಗಾರರ ಬಂಧನ: ಒಂದು ಮಗು ರಕ್ಷಣೆ 

ಮೂರು–ನಾಲ್ಕು ತಿಂಗಳ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರೂ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. 

Published: 05th March 2021 07:14 PM  |   Last Updated: 05th March 2021 07:27 PM   |  A+A-


Representational Image.

ಮಗು ರಕ್ಷಣೆ (ಸಾಂಕೇತಿಕ ಚಿತ್ರ)

Posted By : Srinivas Rao BV
Source : The New Indian Express

ಮಂಗಳೂರು: ಮೂರು–ನಾಲ್ಕು ತಿಂಗಳ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರೂ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. 

ಮೂಲ್ಕಿ ನಿವಾಸಿ ರಾಯನ್ (30) , ಕವಿತಾ, ಮರಿಯಮ್ಮ ಬಂಧಿತ ಆರೋಪಿಗಳು. ಮಂಗಳೂರಿನ ಕದ್ರಿ ಹೋಟೆಲ್ ನಲ್ಲಿ ಆರೋಪಿ ರಾಯನ್ ನನ್ನು ಪೊಲೀಸರು ಬಂಧಿಸಿದ್ದಾರೆ. 

ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಖರೀದಿಸಿ ಮಾರಾಟ ಮಾಡಿದ ಕವಿತಾ ಎಂಬುವವರನ್ನು ಹಾಗೂ ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. 

ಆರೋಪಿ ರಯಾನ್ ಹಾಸನದ ಸುಮಾರು ಐದು ತಿಂಗಳ ಮಗುವನ್ನು ಕಾರ್ಕಳದ ಕವಿತಾ ಅವರಿಗೆ ಸುಮಾರು 5 ಲಕ್ಷ ರೂ. ಮಾರಾಟ ಮಾಡಿದ್ದನು. ಮಗುವನ್ನು ಖರೀದಿಸಿದ ಕವಿತಾ ಅದನ್ನು ಮತ್ತೆ ಮರಿಯಮ್ಮ ಎಂಬುವವಳಿಗೆ ಮಾರಾಟ ಮಾಡಿದ್ದಾಳೆ. ಸದ್ಯ ಕವಿತಾ ಮತ್ತು ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಆರೋಪಿಗಳಿಂದ‌ ಸದ್ಯ ಒಂದು ಮಗುವನ್ನು ರಕ್ಷಿಸಲಾಗಿದ್ದು, ಮಕ್ಕಳ ಮಾರಾಟದ‌ ಜಾಲದ‌ ಕುರಿತು ಸಮಗ್ರ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp