ಬೆಳ್ಳಂದೂರು ಕೆರೆ ಬಳಿ ಕಸದ ರಾಶಿಗೆ ಬೆಂಕಿ: ಕೆಲಕಾಲ ಆತಂಕ ಸೃಷ್ಟಿ

ಬೆಳ್ಳಂದೂರು ಕೆರೆ ಬಳಿ ಇದ್ದ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿದ್ದ ಘಟನೆ ಗುರುವಾರ ನಡೆದಿದೆ.

Published: 05th March 2021 12:36 PM  |   Last Updated: 05th March 2021 12:36 PM   |  A+A-


Garbage set on fire in the buffer area of Bellandur lake

ಕಸದ ರಾಶಿಗೆ ಬೆಂಕಿ ಹಚ್ಚಿರುವುದು

Posted By : Manjula VN
Source : The New Indian Express

ಬೆಂಗಳೂರು: ಬೆಳ್ಳಂದೂರು ಕೆರೆ ಬಳಿ ಇದ್ದ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿದ್ದ ಘಟನೆ ಗುರುವಾರ ನಡೆದಿದೆ.

ಕೆರೆ ನೀರಿನಲ್ಲಿ ಈ ಹಿಂದೆ ನೊರೆ ಹಾಗೂ ಬೆಂಕಿ ಸಂಭವಿಸಿತ್ತು. ಇದರಿಂದ ತೀವ್ರ ಆತಂಕಕ್ಕೊಳಗಾಗಿದ್ದರು. ನಿನ್ನೆ ಕೆರೆ ಬಳಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಮತ್ತೆ ಆಂತಕಕ್ಕೊಳಗಾಗುವಂತಾಗಿತ್ತು. ಆದರೆ, ಕೆರೆಯಲ್ಲಿ ರಾಸಾಯನಿಕದಿಂದಲ್ಲ, ಕಸದ ರಾಶಿಗೆ ಕೆಲವರು ಬೆಂಕಿ ಹಚ್ಚಿದ್ದರಿಂದ ಅಗ್ನಿ ಕಾಣಿಸಿಕೊಂಡಿದೆ ಎಂಬ ವಿಚಾರ ತಿಳಿದ ಬಳಿಕ ನಿಟ್ಟುಸಿರು ಬಿಟ್ಟರು.

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕೆಲವರು ಕಸದ ರಾಶಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಕೆರೆಯ ಬಳಿ ಹೊಗೆ ಆವರಿಸಿಕೊಂಡಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಾರ್ಷಲ್ ಗಳು ಇದನ್ನು ಗಮನಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp