ದೇಶ, ಜಾಗತಿಕ ಮಟ್ಟಕ್ಕಿಂತ ಬೆಂಗಳೂರಿನಲ್ಲಿ ಹೆಚ್ಚು ಕೊರೋನಾ ರೂಪಾಂತರಿಗಳು ವೇಗವಾಗಿ ಹಬ್ಬುತ್ತಿವೆ: ಐಐಎಸ್ಸಿ ಅಧ್ಯಯನ 

ಕೋವಿಡ್-19 ಸಾಂಕ್ರಾಮಿಕದ ರೂಪಾಂತರಿ ದೇಶ ಮತ್ತು ಜಾಗತಿಕ ಮಟ್ಟದ ಸರಾಸರಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ವೇಗವಾಗಿ ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಅಧ್ಯಯನ ತಿಳಿಸಿದೆ.

Published: 05th March 2021 01:40 PM  |   Last Updated: 05th March 2021 01:43 PM   |  A+A-


For representational purposes

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ರೂಪಾಂತರಿ ದೇಶ ಮತ್ತು ಜಾಗತಿಕ ಮಟ್ಟದ ಸರಾಸರಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ವೇಗವಾಗಿ ಅಧಿಕ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಅಧ್ಯಯನ ತಿಳಿಸಿದೆ.

ಐಐಎಸ್ಸಿ ಅಧ್ಯಯನ ಮಾಡಿ ತೋರಿಸಿರುವ ಸಾಕ್ಷಿಯಲ್ಲಿ ಸಾರ್ಸ್-ಕೋವಿಡ್-2 ರೂಪಾಂತರಿ ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಹೈ ರೆಸೊಲ್ಯೂಷನ್ ಮಾಸ್ ಸ್ಪೆಕ್ಟ್ರೊಮೆಟ್ರಿ ಎಂಬ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಇದನ್ನು ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಗಳ ಮೂಗಿನಿಂದ ಸೋರುವಿಕೆಯ ಸ್ಯಾಂಪಲ್ ಗಳನ್ನು ಪಡೆದು ಪರೀಕ್ಷೆ ಮಾಡಲಾಗಿದ್ದು ಪ್ರೋಟಿಯೋಮ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕೋವಿಡ್ ಐಸೊಲೇಟ್‌ ವೈರಲ್ ಜೀನೋಮ್‌ಗಳಲ್ಲಿ 27 ರೂಪಾಂತರಗಳನ್ನು ಹೊಂದಿದ್ದು, ಪ್ರತಿ ಸ್ಯಾಂಪಲ್‌ಗೆ 11 ಕ್ಕೂ ಹೆಚ್ಚು ರೂಪಾಂತರಗಳಿವೆ - ಇದು ರಾಷ್ಟ್ರೀಯ ಸರಾಸರಿ ಶೇಕಡಾ 8.4 ಮತ್ತು ಜಾಗತಿಕ ಸರಾಸರಿ ಶೇಕಡಾ 7.3 ಎರಡಕ್ಕಿಂತ ಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಆದಾಗ್ಯೂ, ಈ ರೂಪಾಂತರಿತ ಸಾರ್ಸ್ ಕೋವಿಡ್-2 ರೂಪಾಂತರಗಳು ಎಷ್ಟು ವೈರಸ್‌ಗಳಾಗಿವೆ ಎಂದು ಇನ್ನೂ ತಿಳಿದುಬಂದಿಲ್ಲ. ಅಧ್ಯಯನದ ನೇತೃತ್ವ ವಹಿಸಿದ್ದ ಐಐಎಸ್‌ಸಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಉತ್ಪಾಲ್ ಟಾಟು, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, ರೂಪಾಂತರಿ ಸ್ಥಿರವಾದಾಗ ಮಾತ್ರ ಆ ಸ್ಥಿರ ರೂಪಾಂತರಿಯ ಪರಿಣಾಮ ಬೆಳಕಿಗೆ ಬರುತ್ತದೆ ಎನ್ನುತ್ತಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp