ಅವರು ಮಾತನಾಡಿದಷ್ಟು ಆರ್'ಎಸ್ಎಸ್ ಪ್ರಬಲಗೊಳ್ಳುತ್ತದೆ: ವಿಪಕ್ಷಗಳ ಕುರಿತು ಸಿಎಂ ಯಡಿಯೂರಪ್ಪ

ವಿರೋಧ ಪಕ್ಷಗಳ ನಾಯಕರು ಎಷ್ಟು ಬಾರಿ ಆರ್'ಎಸ್ಎಸ್-ಆರ್'ಎಸ್ಎಸ್ ಎಂದು ಹೇಳುತ್ತಾರೋ, ಆರ್'ಎಸ್ಎಸ್ ಪ್ರಬಲಗೊಳ್ಳುತ್ತಲೇ ಇರುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

Published: 05th March 2021 11:58 AM  |   Last Updated: 05th March 2021 12:55 PM   |  A+A-


Yeddyurappa

ಸಿಎಂ ಯಡಿಯೂರಪ್ಪ

Posted By : Manjula VN
Source : ANI

ಬೆಂಗಳೂರು: ವಿರೋಧ ಪಕ್ಷಗಳ ನಾಯಕರು ಎಷ್ಟು ಬಾರಿ ಆರ್'ಎಸ್ಎಸ್-ಆರ್'ಎಸ್ಎಸ್ ಎಂದು ಹೇಳುತ್ತಾರೋ, ಆರ್'ಎಸ್ಎಸ್ ಪ್ರಬಲಗೊಳ್ಳುತ್ತಲೇ ಇರುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ ಅವರು, ಆರ್'ಎಸ್ಎಸ್ ನಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ತಾವು ಆರ್'ಎಸ್ಎಸ್ ನವರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೆಮ್ಮೆಯಿಂದ ಹೇಳುತ್ತಾರೆ. ಕೊರೋನಾ ವಿರುದ್ಧದ ಹೋರಾಟ ಕುರಿತು ಇಡೀ ವಿಶ್ವವೇ ಪ್ರಧಾನಮಂತ್ರಿಗಳನ್ನು ಕೊಂಡಾಡುತ್ತಿರುವಾಗ ವಿಪಕ್ಷಗಳ ನಾಯಕರು ಮೋದಿಯವರ ಗಡ್ಡದ ಕುರಿತು ಕೆಟ್ಟದಾಗಿ ಮಾತನಾಡುತ್ತಾರೆಂದು ಕಿಡಿಕಾರಿದ್ದಾರೆ

ನೀವು ವಿರೋಧ ಪಕ್ಷಗ ಶಾಸಕರು, ವಿಧಾನಸಭೆಯಲ್ಲಿ ಕುಳಿತು ರಾಜ್ಯದ ಜನರ ಕಲ್ಯಾಣದ ಕುರಿತು ಮಾತನಾಡಬೇಕು. ಕ್ಷುಲ್ಲಕ ವಿಚಾರಗಳ ಕುರಿತು ಮಾತನಾಡಬಾರದು. ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲು ಎರಡು ದಿನಗಳ ಕಾಲ ವಿಶೇಷ ಅಧಿವೇಶನವನ್ನು ಕರೆದಿದ್ದೇನೆ. ಆದರೆ, ಚರ್ಚೆ ನಡೆಸುವುದನ್ನು ಬಿಟ್ಟು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮ ಹಿನ್ನಲೆಯೇನು?: ಬಿಎಸ್ ವೈ ನೇರ ತರಾಟೆ
ಪ್ರತಿಪಕ್ಷ ನಾಯಕರಿಗೆ ಟೀಕೆ ಮಾಡುವುದೇ ಕೆಲಸ. ಎಲ್ಲದಕ್ಕೂ ಆರ್ ಎಸ್ಎಸ್ ಎಂದು ಬೊಬ್ಬೆ ಹೊಡೆಯುತ್ತಾರೆ. ಇವತ್ತು ಈ ಸ್ಥಾನಕ್ಕೆ ಬರಲು ಆರ್ ಎಸ್ಎಸ್ ಕಾರಣ. ಅವರ ಐಡಿಯಾಲಜಿಯನ್ನು ನಾನು ಕಲಿತಿದ್ದೇನೆ. ಸಿದ್ದರಾಮಯ್ಯನವರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp