ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾದ ಬಳಿಕ ಲಸಿಕಾ ಕೇಂದ್ರಕ್ಕೆ ಬನ್ನಿ: ವೈದ್ಯರ ಮನವಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ತಡೆಗಾಗಿ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ಪಡೆಯಲು ಮೊದಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿ ಬಳಿಕ ನಿಮ್ಮ ಸ್ಲಾಟ್ ನ ಸಮಯಕ್ಕೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಿರಿ ಎಂದು ವೈದ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

Published: 05th March 2021 01:28 PM  |   Last Updated: 05th March 2021 01:40 PM   |  A+A-


CoWIN-Covid-19

ಲಸಿಕಾ ಕೇಂದ್ರದಲ್ಲಿ ಜನ ಜಂಗುಳಿ

Posted By : Srinivasamurthy VN
Source : The New Indian Express

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ತಡೆಗಾಗಿ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ಪಡೆಯಲು ಮೊದಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿ ಬಳಿಕ ನಿಮ್ಮ ಸ್ಲಾಟ್ ನ ಸಮಯಕ್ಕೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಿರಿ ಎಂದು ವೈದ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ಕೇಂದ್ರ ಸರ್ಕಾರ ಲಸಿಕೆ ವಿತರಣೆಯ 3ನೇ ಹಂತ ಆರಂಭಿಸಿದ್ದು, ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ದಾಟಿದ ಕೋಮಾರ್ಬಿಡಿಟಿ ರೋಗಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಲಸಿಕೆ ಕೇಂದ್ರಗಳಲ್ಲಿ ಜನ ಜಂಗುಳಿ ನೆರೆಯುತ್ತಿದ್ದು, ಇದರಿಂದ ಲಸಿಕಾ ಕೇಂದ್ರದಲ್ಲಿರುವ ವೈದ್ಯರಿಗೆ ತೀವ್ರ ತೊಂದರೆಯಾಗುತ್ತಿದೆ. ಸಾರ್ವಜನಿಕರು ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿ ಎಂದು ದುಂಬಾಲು ಬೀಳುತ್ತಿದ್ದಾರೆ. ಆದರೆ ಸರ್ಕಾರದ ನಿಯಮಗಳ ಪ್ರಕಾರ ಅರ್ಹ ಫಲಾನುಭವಿ ಮೊದಲು ಕೋವಿನ್ ಪೋರ್ಟಲ್ ನಲ್ಲಿ ತನ್ನ ಹೆಸರು ಇತರೆ ಮಾಹಿತಿಗಳನ್ನು ನಮೂದಿಸಬೇಕು. ಬಳಿಕ ಆತನಿಗೆ ಲಸಿಕಾ ಕೇಂದ್ರದ ಮಾಹಿತಿ ಮತ್ತು ಲಸಿಕೆ ನೀಡುವ ಸಮಯ ಮತ್ತು ದಿನಾಂಕ ನಿಗದಿ ಮಾಡಲಾಗುತ್ತದೆ.

ಆದರೆ ಈ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ಜಾಹಿರಾತುಗಳನ್ನು ನೀಡುತ್ತಿದ್ದರು ಜನ ಮಾತ್ರ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳದೇ ತಮ್ಮ ಲಸಿಕಾ ಸ್ಲಾಟ್ ಖಚಿತ ಪಡಿಸಿಕೊಳ್ಳದೇ ನೇರವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಪೊಲೊ ಆಸ್ಪತ್ರೆಗಳ ವೈದ್ಯಕೀಯ ಸೇವೆಗಳ ಸಹಾಯಕ ನಿರ್ದೇಶಕ ಡಾ.ಯತೀಶ್ ಗೋವಿಂದಯ್ಯ ಅವರು, ಲಸಿಕಾ ಕೇಂದ್ರಕ್ಕೆ ಆಗಮಿಸುವ ಜನರನ್ನು ನೋಡುತ್ತಿದ್ದರೆ ಅನುಭೂತಿಯಾಗುತ್ತದೆ. ಆದರೂ ನಾವು ನಿಯಮಗಳ ಅನುಸಾರವೇ ಲಸಿಕೆ ನೀಡಬೇಕು. ಜನರು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿ ಅಲ್ಲಿ ಖಚಿತವಾಗುವ ಸ್ಲಾಟ್ ನಲ್ಲೇ ಬಂದು ಲಸಿಕೆ ಪಡೆಯಬೇಕು. ಇದರಿಂದ ಹಿರಿಯ ನಾಗರಿಕರಿಗೆ ಆಗುವ ಸಮಸ್ಯೆಗಳು ತಪ್ಪುತ್ತದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ  ಮಣಿಪಾಲ್ ಆಸ್ಪತ್ರೆಯ ಔಷಧ ವಿಭಾಗದ ಹಿರಿಯ ಶ್ವಾಸಕೋಶಶಾಸ್ತ್ರಜ್ಞ ಮತ್ತು ಮುಖ್ಯಸ್ಥ ಡಾ.ಸತ್ಯನಾರಾಯಣ ಅವರು,  'ಸರ್ಕಾರವು ಸೋಂಕಿನ ದುರ್ಬಲತೆ ಮತ್ತು ಲಸಿಕೆಯ ಲಭ್ಯತೆಯ ಆಧಾರದ ಮೇಲೆ ಲಸಿಕೆಯನ್ನು ಹಂತ ಹಂತವಾಗಿ ವಿತರಿಸುತ್ತಿದೆ. ಇದೇ ಕಾರಣಕ್ಕಾಗಿ ಲಸಿಕೆ ನೀಡಿಕೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಸರ್ಕಾರವು ಹೊರಡಿಸಿದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿಯೇ ಲಸಿಕೆ ನೀಡಬೇಕು. ಅದನ್ನು ಮೀರಿ ನೀವು ಹೋಗುವಂತಿಲ್ಲ. ಅದಾಗ್ಯೂ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ವೈದ್ಯರು, ನುರಿತ ವೈದ್ಯರು, ಶ್ವಾಸಕೋಶಶಾಸ್ತ್ರಜ್ಞರು, ಯಾರು ಲಸಿಕೆ ಪಡೆಯಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರ ಅವಕಾಶ ನೀಡಬೇಕು. ಇದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಹೊರೆ ತಪ್ಪುತ್ತದೆ. ಅಲ್ಲದೆ ಲಸಿಕೆ ನೀಡಿಕೆ ಸರಾಗವಾಗುತ್ತದೆ ಎಂದು ಎಂದು ಡಾ.ಸತ್ಯನಾರಾಯಣ ಹೇಳಿದರು.

ಅಂತೆಯೇ ಪ್ರತಿ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ಮೇಲ್ವಿಚಾರಣೆಗಾಗಿ ನೋಡಲ್ ಲಸಿಕೆ ಅಧಿಕಾರಿ ಹಾಜರಿರಬೇಕು ಮತ್ತು ಶ್ವಾಸಕೋಶಶಾಸ್ತ್ರಜ್ಞರು ಮತ್ತು ವೈದ್ಯರಿಗೆ ವಿವೇಚನಾಧಿಕಾರವನ್ನು ನೀಡಬೇಕು. ಅಲ್ಲದೆ, ಆಸ್ಪತ್ರೆಯ ದತ್ತಾಂಶ ಸಂಗ್ರಹಣೆ ಮೂವರ ದುರ್ಬಲ ವ್ಯಕ್ತಿಗಳನ್ನು ಗುರುತಿಸಿ ಲಸಿಕೆ ನೀಡಬಹುದು ಮತ್ತು ಇದಕ್ಕೆ ಪ್ರತ್ಯೇಕ ವಿಧಾನವಿರಬೇಕು ಎಂದು ಡಾ.ಸತ್ಯನಾರಾಯಣ ಹೇಳಿದರು.

ಏತನ್ಮಧ್ಯೆ, ಎಂ ಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ಆತಂಕಕ್ಕೊಳಗಾದ ಹಿರಿಯ ನಾಗರಿಕರಿಗೆ ಧೈರ್ಯ ತುಂಬಲು ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆ ಮಾಡಿವೆ. ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ಅವರು, 'ಹಿರಿಯ ನಾಗರಿಕರು ನೋಂದಣಿ ಮಾಡಿಸದೇ ಲಸಿಕಾ ಕೇಂದ್ರಕ್ಕೆ ಆಗಮಿಸಿದರೆ ಅವರನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅವರ ಬಗ್ಗೆ ಸಹಾನುಭೂತಿ ಖಂಡಿತವಾಗಿಯೂ ಇದೆ. ಆದರೆ ಜನರು ನೋಂದಾಯಿಸದೇ ಬಂದರೆ ಲಸಿಕೆ ನೀಡಿಕೆ ಸಾಧ್ಯವಿಲ್ಲ. ಒಂದು ವೇಳೆ ಲಸಿಕೆ ನೀಡಿದರೆ ನೋಂದಾಯಿಸಿ ಬಂದವರಿಗೆ ಲಸಿಕೆ ದೊರೆಯುವುದಿಲ್ಲ ಎಂದು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp