ಜಾತಿ, ಅಸ್ಪೃಶ್ಯತೆ ತೊಡೆದು ಹಾಕಲು ಹೊಟೇಲ್ ನಲ್ಲಿ ಚಹಾ ಕುಡಿದ ಕಪ್ ನ್ನು ತೊಳೆದ ತಹಶಿಲ್ದಾರ್!

ಜಿಲ್ಲೆಯ ಮುಂಡರಗಿ ತಹಶಿಲ್ದಾರ್ ಆಶಪ್ಪ ಪೂಜಾರ್ ಅವರ ಅಪರೂಪದ ನಡೆಯೊಂದು ಹಳ್ಳಿಯಲ್ಲಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕೆನ್ನುವ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡುತ್ತದೆ. ತಹಶಿಲ್ದಾರ್ ಅವರ ನಡೆ ಹೊರೊಗೇರಿ ಗ್ರಾಮಸ್ಥರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.

Published: 06th March 2021 11:40 AM  |   Last Updated: 06th March 2021 01:18 PM   |  A+A-


A video clip showing tahsildar Ashappa Pujar washing a tea cup at a hotel in Horogeri village in Gadag district

ಚಹಾ ಕುಡಿದು ಗ್ಲಾಸ್ ತೊಳೆಯುತ್ತಿರುವ ತಹಶಿಲ್ದಾರ್ ಪೂಜಾರ್

Posted By : Sumana Upadhyaya
Source : The New Indian Express

ಗದಗ: ಜಿಲ್ಲೆಯ ಮುಂಡರಗಿ ತಹಶಿಲ್ದಾರ್ ಆಶಪ್ಪ ಪೂಜಾರ್ ಅವರ ಅಪರೂಪದ ನಡೆಯೊಂದು ಹಳ್ಳಿಯಲ್ಲಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕೆನ್ನುವ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡುತ್ತದೆ. ತಹಶಿಲ್ದಾರ್ ಅವರ ನಡೆ ಹೊರೊಗೇರಿ ಗ್ರಾಮಸ್ಥರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.

ತಹಶಿಲ್ದಾರ್ ಪೂಜಾರ್ ಅವರು ಹೊಟೇಲೊಂದರಲ್ಲಿ ಟೀ ಲೋಟವನ್ನು ತೊಳೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಗಿದ್ದೇನು?:ಗ್ರಾಮದಲ್ಲಿ ಸಾಕಷ್ಟು ಅಸ್ಪೃಶ್ಯತೆಯಿದೆ ಎಂದು ಹಲವರು ದೂರು ನೀಡುತ್ತಲೇ ಇದ್ದರು, ಹಾಗಾದರೆ ನೋಡಬೇಕೆಂದು ಸ್ವತಃ ಪೂಜಾರ್ ಅವರು ಹೊಟೇಲೊಂದಕ್ಕೆ ಹೋಗಿ ತಪಾಸಣೆ ಮಾಡಿದರು. ಇಲ್ಲಿನ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿಯ ಯಾವುದಾದರೂ ಮದುವೆ, ಶುಭ ಸಮಾರಂಭವಿದ್ದರೆ ಹೊಟೇಲ್ ಗಳನ್ನು ತೆರೆಯುವುದೇ ಇಲ್ಲವಂತೆ. ಈ ಬಗ್ಗೆ ಸ್ಥಳೀಯ ನಾಯಕರು ಮತ್ತು ನೆರೆ ಗ್ರಾಮಸ್ಥರು ಎಷ್ಟೇ ಎಚ್ಚರಿಕೆ ನೀಡಿದರೂ ಸಂಪ್ರದಾಯ, ಅಭ್ಯಾಸ ಮುಂದುವರಿಸಿಕೊಂಡು ಹೋಗಿದ್ದಾರೆ. ಎರಡು ದಿನಗಳ ಹಿಂದೆ ಹೀಗೆ ಅಸ್ಪೃಶ್ಯತೆ ಬಗ್ಗೆ ಆದ ಘಟನೆ ಬಗ್ಗೆ ತಹಶಿಲ್ದಾರ್ ಪೂಜಾರ್ ಗಮನಕ್ಕೆ ತರಲಾಗಿತ್ತು. ಗ್ರಾಮಕ್ಕೆ ಹೋಗಿ ಸಭೆಗಳನ್ನು ನಡೆಸಿದ್ದರು.

ಅವರ ಜೊತೆ ಸರ್ಕಲ್ ಇನ್ಸ್ ಪೆಕ್ಟರ್ ಸುಧೀರ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಯಲಿವಾರ್ ಮೊದಲಾದವರಿದ್ದರು. ಹೊಟೇಲ್ ಮಾಲೀಕರಲ್ಲಿ ಇಂತಹ ಕ್ರಮಗಳನ್ನು ನಿಲ್ಲಿಸಿ ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಮ್ಮ ವೈರಲ್ ಆಗಿರುವ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾರ್, ಅಸ್ಪೃಶ್ಯತೆ ಬಗ್ಗೆ ದೂರು ಬಂದ ಮೇಲೆ ಕೆಲವು ಅಧಿಕಾರಿಗಳು ಮತ್ತು ನಾನು ಹೊಟೇಲ್ ಮಾಲೀಕರ ಜೊತೆ ಸಭೆ ನಡೆಸಿದೆವು.ಗ್ರಾಮಸ್ಥರ ಜೊತೆ ಟೀ ಸೇವಿಸಿದೆವು. ಟೀ ಕಪ್ ತೊಳೆಯುವ ಉದ್ದೇಶ ನಾನು ಹೊಂದಿರಲಿಲ್ಲ. ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ನಾನು ಟೀ ಕಪ್ ತೊಳೆದರೆ ಏನೂ ಕಳೆದುಕೊಳ್ಳುವುದಿಲ್ಲ. ಪ್ರತಿ ಕೆಲಸಕ್ಕೂ ಅದರದ್ದೇ ಆದ ಗೌರವವಿದೆ, ಆದರೆ ಸಮಾಜದಲ್ಲಿರುವ ಕೆಟ್ಟ ಸಂಪ್ರದಾಯಗಳನ್ನು ಬುಡಸಮೇತ ಕಿತ್ತೊಗೆಯಬೇಕು ಎಂದರು.

ಸ್ಥಳೀಯ ಸಂಜೀವ್ ಕುಮಾರ್ ಪಾಟೀಲ್, ಹೊಟೇಲ್ ಒಳಗೆ ಹೋಗಿ ಟೀ ಕುಡಿದೆವು. ತಹಶಿಲ್ದಾರ್ ಅವರು ಟೀ ಕುಡಿದು ವಾಶಿಂಗ್ ಬೇಸಿನ್ ಬಳಿ ಹೋಗಿ ಟೀ ಕಪ್ ತೆಗೆದು ತೊಳೆದರು. ಗ್ರಾಮದಲ್ಲಿರುವ ಕೆಟ್ಟ ಆಚರಣೆಗಳನ್ನು ತೊಡೆಯಬೇಕು ಎಂದು ಹೇಳಿದರು. ಅವರ ನಡೆ ನಮಗೆ ಅಚ್ಚರಿ ತಂದಿತು ಎನ್ನುತ್ತಾರೆ.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp