ಶಿಕ್ಷಣದ ಬಗ್ಗೆ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೀತಿಗಳಿಂದ ವಿಜ್ಞಾನಕ್ಕೆ ಲಾಭವಾಗಿದೆ: ಕಸ್ತೂರಿ ರಂಗನ್

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೀತಿಗಳಿಂದಾಗಿ ಎಂದು ದೇಶದಲ್ಲಿ ವಿಜ್ಞಾನ ವಿಭಾಗಕ್ಕೆ ಲಾಭವಾಗಿದೆ ಎಂದು ಮಾಜಿ ಇಸ್ರೋ ಅಧ್ಯಕ್ಷ ಹಾಗೂ 2020ರ ಶಿಕ್ಷಣ ನೀತಿ ಕರಡು ಸಮಿತಿಯ ಮಾಜಿ ಮುಖ್ಯಸ್ಥ ಡಾ.ಕೆ.ಕಸ್ತುರಿರಂಗನ್ ಹೇಳಿದ್ದಾರೆ.

Published: 06th March 2021 12:58 PM  |   Last Updated: 06th March 2021 01:20 PM   |  A+A-


Kasturirangan praises PM Modi

ಕಸ್ತೂರಿ ರಂಗನ್

Posted By : Srinivasamurthy VN
Source : The New Indian Express

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನೀತಿಗಳಿಂದಾಗಿ ಎಂದು ದೇಶದಲ್ಲಿ ವಿಜ್ಞಾನ ವಿಭಾಗಕ್ಕೆ ಲಾಭವಾಗಿದೆ ಎಂದು ಮಾಜಿ ಇಸ್ರೋ ಅಧ್ಯಕ್ಷ ಹಾಗೂ 2020ರ ಶಿಕ್ಷಣ ನೀತಿ ಕರಡು ಸಮಿತಿಯ ಮಾಜಿ ಮುಖ್ಯಸ್ಥ ಡಾ.ಕೆ.ಕಸ್ತುರಿರಂಗನ್ ಹೇಳಿದ್ದಾರೆ.

ತುಮಕೂರು ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದ ಅವರು, 'ಶಿಕ್ಷಣ, ನಾವೀನ್ಯತೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸುವಲ್ಲಿ ಪ್ರಧಾನಿ ಮೋದಿ ಅವರ ಪಾತ್ರ ದೊಡ್ಡದು. ಅವರ ದೂರದೃಷ್ಟಿಯ ನೀತಿಗಳ ಮೂಲಕ ದೇಶವನ್ನು ಪರಿವರ್ತಿಸಿದ್ದಾರೆ. ಇದರಿಂದ ವಿಜ್ಞಾನ ಕ್ಷೇತ್ರಕ್ಕೆ ಲಾಭವಾಗಿದೆ ಎಂದು ಹೇಳಿದರು.

'ಕೇಂದ್ರ ಬಜೆಟ್ 2021-22ರಲ್ಲಿ ವಿಜ್ಞಾನ ಸಂಬಂಧಿತ ಸಚಿವಾಲಯಗಳಿಗೆ 15,000 ಕೋಟಿ ರೂ. ನಿಧಿ ಮೀಸಲಿರಿಸಲಾಗಿದೆ.  ಒಂದೆರಡು ದಿನಗಳ ಹಿಂದೆ ವೆಬ್‌ನಾರ್ ಮೂಲಕ ವಿಜ್ಞಾನಿ ಸಮುದಾಯದೊಂದಿಗೆ ಮಾತನಾಡಿದ್ದರು. ಇದೇ ವಿಚಾರವಾಗಿ ಮಾತನಾಡಿದ ಕಸ್ತೂರಿರಂಗನ್ ಅವರು 'ರಾಷ್ಟ್ರ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಲು ವಿಶ್ವವಿದ್ಯಾಲಯಗಳಿಗೆ ಅನೇಕ ಅವಕಾಶಗಳಿವೆ.  ಎನ್‌ಇಪಿ ಉದಾರ ಶಿಕ್ಷಣವನ್ನು ರೂಪಿಸುತ್ತದೆ. ನೂತನ ಶಿಕ್ಷಣ ನೀತಿ ನ್ಯಾಯಯುತ ಸಮಾಜವನ್ನು ರಚಿಸಿ, ಪ್ರತಿಯೊಬ್ಬ ನಾಗರಿಕರ ಜೀವನವನ್ನು ಸ್ಪರ್ಶಿಸುವಂತೆ ರೂಪಿಸಲಾಗಿದೆ ಎಂದು ಹೇಳಿದರು.

ಅಂತೆಯೇ ಭಾರತೀಯ ಭಾಷೆಗಳು, ಕಲೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕೆ ವಿಶೇಷ ಗಮನ ಹರಿಸುವ ಎನ್‌ಇಪಿ ಕುರಿತು ಚರ್ಚಿಸಲು ಕರೆ ನೀಡಿದ್ದಕ್ಕಾಗಿ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರನ್ನು ಶ್ಲಾಘಿಸಿದರು.

'ಸೌಹಾರ್ದತೆಯ ಅವಶ್ಯಕತೆ ಹಿಂದಿಗಿಂತಲೂ ಇಂದೇ ಹೆಚ್ಚು ಅವಶ್ಯಕವಾಗಿದ್ದು, ನಮ್ಮ ಯೋಚನೆಗಳಲ್ಲಿ, ಕೆಲಸಗಳಲ್ಲಿ, ಧರ್ಮಗಳಲ್ಲಿ, ವಿಜ್ಞಾನಗಳಲ್ಲಿ, ವ್ಯಕ್ತಿಗಳಲ್ಲಿ ಸಮಾಜದಲ್ಲಿ ಜೀವನೋತ್ಸಾಹದ ವಾತಾವರಣ ಸೃಷ್ಟಿಗೊಳಿಸುವ ಸೌಹಾರ್ದ ಮನೋಭಾವವನ್ನು ಬೆಳೆಸಿಕೊಳ್ಳಲು ಹೋರಾಡೋಣ. ಶಿಕ್ಷಣ ಎಂಬುದು ಒಂದೇ ಹೆಜ್ಜೆಯಲ್ಲಿ ಸಂಪೂರ್ಣಗೊಳ್ಳುವ ಪ್ರಕ್ರಿಯೆಯಾಗಿರದೆ ವ್ಯಕ್ತಿತ್ವ ನಿರ್ಮಾಣಕ್ಕಗಿ ಸಮಗ್ರವಾಗಿಬೇಕಿರುವ ನಿರಂತರ ಪ್ರಯತ್ನವನ್ನು ಬಯಸುತ್ತದೆ. ಉನ್ನತ ಸಾಧನೆಯ ಹಾದಿಯು ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಜ್ಞಾನಶಾಖೆಗಳಿಂದ ಪ್ರೇರಿಪಿಸಲ್ಪಟ್ಟಿರುವ ಉತ್ಕೃಷ್ಟ ಮಟ್ಟದ ವೃತ್ತಿಪರತೆಯ ಅವಶ್ಯಕತೆಯನ್ನು ಅಪಾರವಾಗಿ ಬಯಸುತ್ತದೆ. 21ನೇ ಶತಮಾನದ ಅವಿದ್ಯಾವಂತರೆಂದರೆ ಓದಲು ಬರೆಯಲು ಬಾರದವರಲ್ಲ. ಬದಲಾಗಿ ಕಲಿಯಲು ಬಾರದವರು, ಕಲಿತಿದ್ದನ್ನು ಮರೆತು ಮರುಕಲಿಕೆ ಮಾಡಲಾಗದವರು ಎಂದು ಕಸ್ತೂರಿ ರಂಗನ್ ಹೇಳಿದರು. 

ಅಂತೆಯೇ, 'ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರತಿಯೊಬ್ಬ ನಾಗರಿಕರ ಜೀವನವನ್ನು ಅವರ ಅವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಹಾಯವಾಗುವ ದಿಸೆಯಲ್ಲಿ ಅನುಷ್ಟಾನಕ್ಕೆ ತರಲಾಗಿದೆ. ಸ್ನಾತಕ ಹಂತದಲ್ಲಿ ಸಮಗ್ರ ಬಹುಶಿಸ್ತೀಯ ಶಿಕ್ಷಣವನ್ನು ಮೂಲಭೂತ ಅಂಶವಾಗಿಸಲು ಒತ್ತು ನೀಡಲಾಗಿದೆ. ಸ್ನಾತಕ ಪದವಿಯು 3 ಅಥವಾ 4 ವರ್ಷಗಳ ಅವಧಿಯದ್ದಾಗಿದ್ದು, ವಿವಿಧ ಹಂತಗಳಲ್ಲಿ ನಿರ್ಗಮಿಸುವುದಕ್ಕೂ ಆಯಾ ಹಂತಗಳಲ್ಲಿ ಸೂಕ್ತ ಪ್ರಮಾಣ ಪತ್ರ ಪಡೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಸ್ನಾತಕೋತ್ತರ ಹಂತದಲ್ಲಿ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಸಂಶೋಧನೆಯ ಬಲವರ್ಧನೆಗೆ ಪ್ರತಿಷ್ಠಾನ ರಚಿಸಲು ನೀತಿ ರೂಪಿಸಲಾಗಿದೆ. ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯದ ಪ್ರಚಾರಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು,

ಬಹುಭಾಷಾ ಶಿಕ್ಷಕರ ತಯಾರಿಗೆ ಸಲಹೆ
ಇದೇ ವೇಳೆ ವಿಶ್ವವಿದ್ಯಾಲಯಗಳು ರಾಷ್ಟ್ರನಿರ್ಮಾಣದ ಅಡಿಪಾಯಗಳಾಗಿದ್ದು, ಹೊಸ ಅಲೋಚನೆಗಳು, ಜ್ಞಾನವನ್ನು ಉತ್ಪಾದಿಸಲು ಮತ್ತು ಪ್ರಸಾರ ಮಾಡುವ ದೀರ್ಘಕಾಲಿಕ ಮೂಲಗಳಾಗಿ ಕಾರ್ಯನಿರ್ವಹಿಸಬೇಕು. ತುಮಕೂರು ವಿವಿಯು ಕುಲಪತಿ ವೈ.ಎಸ್.ಸಿದ್ದೇಗೌಡರ ನೇತೃತ್ವದಲ್ಲಿ ಎನ್‍ಇಪಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಜಾರಿಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದು, ಸೆಂಟರ್ ಫಾರ್ ಎಕ್ಸೆಲೆನ್ಸ್ ಇನ್ ಎಜುಕೇಶನ್ ಸ್ಥಾಪಿಸಿ ಬಿ.ಇಡಿ ಮತ್ತು ಎಂಇಡಿ ಕೋಸ್‍ಗಳನ್ನುಲಭ್ಯಗೊಳಿಸಿ ಬಹುಭಾಷಾ ಶಿಕ್ಷಕರನ್ನು ಸಹ ತಯಾರು ಮಾಡಬೇಕೆಂದು ಸಲಹೆ ನೀಡಿದರು. ಅಲ್ಲದೆ ಮಾತೃಭಾಷೆಯ ಮೂಲಕ ಕಲಿಯುವುದು ಕಲಿಕೆಯ ಪ್ರಕ್ರಿಯೆಯ ಮೇಲೆ ತನ್ನದೇ ಆದ ಪ್ರಭಾವ ಬೀರುತ್ತದೆ ಎಂದು ಅವರು ಹೇಳಿದರು.  

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp