ಸಚಿವ ಜಗದೀಶ್ ಶೆಟ್ಟರ್ ಸಂಧಾನ: ಟೊಯೊಟಾ ಕಾರ್ಮಿಕರ ಸಮಸ್ಯೆ ಪರಿಹಾರ

2020 ನವೆಂಬರ್ 9ರಂದು ಪ್ರಾರಂಭವಾದ ಕಾರ್ಮಿಕರ ಮುಷ್ಕರದ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

Published: 06th March 2021 02:05 PM  |   Last Updated: 06th March 2021 02:05 PM   |  A+A-


Jagdish shetter

ಜಗದೀಶ್ ಶೆಟ್ಟರ್

Posted By : Shilpa D
Source : The New Indian Express

ಬೆಂಗಳೂರು:  ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧೆ ಉದ್ಭವಿಸಿದ್ದ ಸಮಸ್ಯೆಗಳ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರಿಗಳು ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

2020 ನವೆಂಬರ್ 9ರಂದು ಪ್ರಾರಂಭವಾದ ಕಾರ್ಮಿಕರ ಮುಷ್ಕರದ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಮುಷ್ಕರ ಮುಂದುವರಿದಾಗ ಆ ಪ್ರದೇಶದ ಜನಪ್ರತಿನಿಧಿಗಳು ಹಾಗೂ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ 2 ಬಾರಿ ಸಭೆಯನ್ನು ನಡೆಸಿದ್ದರು. ಅಲ್ಲದೆ, ಹಲವು ಬಾರಿ ಸಚಿವರನ್ನು ಭೇಟಿಯಾಗಿದ್ದ ಕಾರ್ಮಿಕ ಸಂಘಟನೆಗಳ ನಿಯೋಗ ಹಾಗೂ ಅಧಿಕಾರಿಗಳ ತಂಡಕ್ಕೆ ಸಚಿವರು ಸಮಸ್ಯೆಯ ಪರಿಹಾರಕ್ಕೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದ್ದರು.

ಸಮಸ್ಯೆ ಇನ್ನು ಮುಂದುವರಿದಾಗ ಕಾರ್ಮಿಕ ಸಂಘಟನೆಯ ಮುಖಂಡರುಗಳು ಭೇಟಿ ಮಾಡಿ ಸಲಹೆ ಸೂಚನೆಯನ್ನು ಪಡೆದುಕೊಂಡಿದ್ದರು.

ನಾನು ಎರಡು ಬಾರಿ ಫ್ಯಾಕ್ಟರಿಗೆ ಭೇಟಿ ನೀಡಿದ್ದೆ,  ಎರಡು ಕಡೆಯ ಪ್ರತಿನಿಧಿಗಳನ್ನು ನಾನು ನನ್ನ ಮನೆಯಲ್ಲಿ ಭೇಟಿ ಮಾಡಿ, ಚರ್ಚಿಸಿದ್ದೆ,  ಅದಾದ ನಂತರ  ನಾನು ಎರಡು  ಕಡೆಯವರ ಜೊತೆ ಸಂಪರ್ಕದಲ್ಲಿದ್ದೆ. ಮ್ಯಾನೇಜ್ ಮೆಂಟ್ ಕೆಲವು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಿದೆ,  ನಾನು ವಿಚಾರಣೆಯನ್ನುಸಮಸ್ಯೆ ಬಗೆಹರಿಸಿದ್ದೇನೆ  ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಕೋಲಾರ ಜಿಲ್ಲೆಯ ಐಫೋನ್ ತಯಾರಕ ವಿಸ್ಟ್ರಾನ್ ಮತ್ತು ಮೈಸೂರು ಜಿಲ್ಲೆಯ ಏಷ್ಯನ್ ಪೇಂಟ್ಸ್‌ಗೆ ಸಂಬಂಧಿಸಿದ ಕಾರ್ಮಿಕ ಸಮಸ್ಯೆಗಳನ್ನು ಸಹ ಬಗೆಹರಿಸಿಲಾಗಿದೆ ಎಂದು ಅವರು ಹೇಳಿದರು.
 

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp