ಬೆಂಗಳೂರು: ಶಾಲೆಯ 7 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ 

ಇಲ್ಲಿನ ನಾರಾಯಣಪುರ ಸರ್ಕಾರಿ ಹೈಸ್ಕೂಲ್ ನ ಏಳು ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು ಒಬ್ಬ ವಿದ್ಯಾರ್ಥಿಯನ್ನು ಕೆ ಆರ್ ಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Published: 06th March 2021 01:28 PM  |   Last Updated: 06th March 2021 01:28 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಇಲ್ಲಿನ ನಾರಾಯಣಪುರ ಸರ್ಕಾರಿ ಹೈಸ್ಕೂಲ್ ನ ಏಳು ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು ಒಬ್ಬ ವಿದ್ಯಾರ್ಥಿಯನ್ನು ಕೆ ಆರ್ ಪುರಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲಾ ಮಕ್ಕಳು ಕೋವಿಡ್-19 ಸೋಂಕು ರಹಿತ ಲಕ್ಷಣಗಳನ್ನು ಹೊಂದಿದ್ದಾರೆ. ಶಾಲೆಯಲ್ಲಿ ಒಟ್ಟು 188 ಮಕ್ಕಳಿದ್ದು ಇನ್ನೂ 28 ವಿದ್ಯಾರ್ಥಿಗಳನ್ನು ಕೊರೋನಾ ಪರೀಕ್ಷೆಗೊಳಪಡಿಸಬೇಕಿದೆ. ಈ ಹಿಂದೆ ಶಾಲೆಯ ಇಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು.

ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಶಾಲೆಯನ್ನು ಮುಚ್ಚಲಾಗಿದ್ದು ಇಲ್ಲಿ 66 ಮಂದಿ ಪ್ರಾಥಮಿಕ ಸಂಪರ್ಕಿತರು ಮತ್ತು 53 ಮಂದಿ ದ್ವಿತೀಯ ಸಂಪರ್ಕಿತರಿದ್ದಾರೆ. ಈ ವಲಯವನ್ನು ಕ್ಲಸ್ಟರ್ ಆಗಿ ಘೋಷಿಸಲಾಗಿದೆ. ಇಲ್ಲಿ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಸಹ ಕೊರೋನಾ ಪರೀಕ್ಷೆಗೊಳಪಡಿಸಲಾಗುವುದು. ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಐದು ಮಹಡಿಗಳನ್ನು ಹೊಂದಿರುವ ಸಾಯಿ ಕುಟೀರ ಮಲ್ಟಿಡೆವೆಲಿಂಗ್ ಘಟಕದಲ್ಲಿರುವ ವಸಂತಪುರ ವಾರ್ಡ್‌ನ ಬೊಮ್ಮನಹಳ್ಳಿ ವಲಯದಲ್ಲಿ ಎಂಟು ಜನರು ಕೊರೋನಾ ಪಾಸಿಟಿವ್ ಎಂದು ಕಂಡುಬಂದಿದ್ದಾರೆ. ಫೆಬ್ರವರಿ 25 ರಂದು ನಾಲ್ಕು ಪಾಸಿಟಿವ್ ಮತ್ತು ಎರಡು ದ್ವಿತೀಯ ಸಂಪರ್ಕಗಳು ಮುಂದಿನ ಎರಡು ದಿನಗಳಲ್ಲಿ ಪಾಸಿಟಿವ್ ಎಂದು ಕಂಡುಬಂದವು. ಮಾರ್ಚ್ 3 ರಂದು ಇನ್ನೂ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಬಂತು. ಇದನ್ನೂ ಕ್ಲಸ್ಟರ್ ಮತ್ತು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp