ಪದರ ಹೊಂದಿದ ಮಾಸ್ಕ್ ರಕ್ಷಣೆ ನೀಡಬಹುದು, ಆದರೆ ವೈರಸ್ ಹರಡುವಿಕೆ ತಪ್ಪಿಸಲು ಸಾಧ್ಯವಿಲ್ಲ: ಐಐಎಸ್ಸಿ ಅಧ್ಯಯನ 

ಮೂರು ಪದರದ ಮಾಸ್ಕ್, ಬಟ್ಟೆಯಿಂದ ತಯಾರಿಸಿದ ಮಾಸ್ಕ್, ಎನ್ 95 ಮಾಸ್ಕ್ ಸಾರ್ಸ್-ಕೋವಿಡ್-2ನಿಂದ ರಕ್ಷಿಸಿಕೊಳ್ಳಲು ಉತ್ತಮವಾಗಿರುತ್ತದೆ.ವ್ಯಕ್ತಿ ಕೆಮ್ಮಿದಾಗ ಬೇರೆಯವರಿಗೆ ಸೋಂಕು ಹಬ್ಬುವುದನ್ನು ಅದು ತಡೆಯುತ್ತದೆ ಎಂದು ಐಐಎಸ್ಸಿ ಅಧ್ಯಯನ ತಿಳಿಸಿದೆ.

Published: 07th March 2021 09:44 AM  |   Last Updated: 07th March 2021 10:37 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಮೂರು ಪದರದ ಮಾಸ್ಕ್, ಬಟ್ಟೆಯಿಂದ ತಯಾರಿಸಿದ ಮಾಸ್ಕ್, ಎನ್ 95 ಮಾಸ್ಕ್ ಸಾರ್ಸ್-ಕೋವಿಡ್-2ನಿಂದ ರಕ್ಷಿಸಿಕೊಳ್ಳಲು ಉತ್ತಮವಾಗಿರುತ್ತದೆ.ವ್ಯಕ್ತಿ ಕೆಮ್ಮಿದಾಗ ಬೇರೆಯವರಿಗೆ ಸೋಂಕು ಹಬ್ಬುವುದನ್ನು ಅದು ತಡೆಯುತ್ತದೆ ಎಂದು ಐಐಎಸ್ಸಿ ಅಧ್ಯಯನ ತಿಳಿಸಿದೆ.

ಒಂದು ವೇಳೆ ಇಂತಹ ಮಾಸ್ಕ್ ಸಿಗದಿದ್ದರೆ ಒಂದು ಪದರದ ಮಾಸ್ಕ್ ರಕ್ಷಣೆ ನೀಡಬಹುದಾಗಿದ್ದು ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಮಾತ್ರ ಅಗತ್ಯವಿರುವಲ್ಲಿಯೆಲ್ಲಾ ಮಾಸ್ಕ್ ನ್ನು ಕಡ್ಡಾಯವಾಗಿ ಬಳಸಬೇಕು ಎಂದು ಅಧ್ಯಯನ ಹೇಳಿದೆ.

ಯುಸಿ ಸ್ಯಾನ್ ಡಿಯೊಗೊ ಮತ್ತು ಟೊರೊಂಟೊ ಎಂಜಿನಿಯರಿಂಗ್ ವಿಜ್ಞಾನಿಗಳ ಜೊತೆ ಐಐಎಸ್ಸಿಯ ಸಂಶೋಧಕರು ಸೇರಿ ನಡೆಸಿದ ಅಧ್ಯಯನದಿಂದ, ಮಾಸ್ಕ್ ತಯಾರಿಗೆ ಬಳಸುವ ಬಟ್ಟೆ, ವಸ್ತು, ಗಾತ್ರ ಮತ್ತು ಪದರಗಳ ಮೇಲೆ ಮಾಸ್ಕ್ ನ ಪರಿಣಾಮಗಳು ಬದಲಾಗುತ್ತಿರುತ್ತದೆ ಎಂದು ತಿಳಿದುಬಂದಿದೆ.

ಮಾಸ್ಕ್ ಧರಿಸಿದ್ದರೂ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮಾಸ್ಕ್ ನ ಬದಿಗಳಿಂದ ಸೋಂಕು ಬೇರೊಬ್ಬ ವ್ಯಕ್ತಿಗೆ ಹರಡುವ ಸಾಧ್ಯತೆಯಿದೆ. ಇದು ಎಷ್ಟರ ಮಟ್ಟಿಗೆ ಹರಡುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಒಂದು ಮತ್ತು ಎರಡು ಪದರದ ಮಾಸ್ಕ್ ಗಳಲ್ಲಿ, ಹನಿಗಳು 100 ಮೈಕ್ರಾನ್‌ಗಳಿಗಿಂತ ಚಿಕ್ಕದಾಗುತ್ತವೆ, ಏರೋಸಾಲ್‌ಗಳಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಹೊರಬಂದ ಕಣಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯಬಹುದು ಮತ್ತು ಸೋಂಕಿಗೆ ಕಾರಣವಾಗಬಹುದು. ಇದರಿಂದ ನಿಮ್ಮ ಸುತ್ತಮುತ್ತಲಿನವರು ಸೋಂಕು ತಗುಲಿಸಿಕೊಳ್ಳಬಹುದು ಎಂದು ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಪ್ತರ್ಶಿ ಬಸು ತಿಳಿಸಿದ್ದಾರೆ.

ಒಂದು ಪದರದ ಮಾಸ್ಕ್ ಗಳು ಕೊರೋನಾ ಸೋಂಕಿನ ಆರಂಭಿಕ ಹನಿ ಪರಿಮಾಣದ ಶೇಕಡಾ 30 ರಷ್ಟು ಮಾತ್ರ ರಕ್ಷಣೆ ನೀಡುತ್ತದೆ ಎಂದು ಪ್ರಯೋಗದಿಂದ ತಿಳಿದುಬಂದಿದೆ. ಎರಡು ಪದರದ ಮಾಸ್ಕ್ ಗಳು ಶೇಕಡಾ 91 ರಷ್ಟು ನಿರ್ಬಂಧಿಸಿವೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp