ಮಂಗಳೂರು ಭೇಟಿ ಬಳಿಕ ಸಂಪರ್ಕಕ್ಕೆ ಸಿಗದ ಸಚಿವ ಭೈರತಿ ಬಸವರಾಜ್!

ತಮ್ಮ ಘನತೆಗೆ ಧಕ್ಕೆಯಾಗುವಂತಹ ದೃಶ್ಯಾವಳಿ ಬಿತ್ತರಿಸದಂತೆ ಕೋರ್ಟ್ ಮೆಟ್ಟಿಲೇರಿ, ನ್ಯಾಯಾಲಯದಿಂದ ತಾತ್ಕಾಲಿಕ ಬಂದ ಆದೇಶದಿಂದ ನಿರಾಳದ ಬಳಿಕ ಮಂಗಳೂರಿಗೆ ತೆರಳಿದ್ದ ಸಚಿವ ಭೈರತಿ ಬಸವರಾಜ್ ಅವರು ನಾಪತ್ತೆಯಾಗಿದ್ದಾರೆ.

Published: 07th March 2021 01:15 PM  |   Last Updated: 07th March 2021 01:15 PM   |  A+A-


Byrathi Basavaraj

ಭೈರತಿ ಬಸವರಾಜ್

Posted By : Manjula VN
Source : The New Indian Express

ಮಂಗಳೂರು: ತಮ್ಮ ಘನತೆಗೆ ಧಕ್ಕೆಯಾಗುವಂತಹ ದೃಶ್ಯಾವಳಿ ಬಿತ್ತರಿಸದಂತೆ ಕೋರ್ಟ್ ಮೆಟ್ಟಿಲೇರಿ, ನ್ಯಾಯಾಲಯದಿಂದ ತಾತ್ಕಾಲಿಕ ಬಂದ ಆದೇಶದಿಂದ ನಿರಾಳದ ಬಳಿಕ ಮಂಗಳೂರಿಗೆ ತೆರಳಿದ್ದ ಸಚಿವ ಭೈರತಿ ಬಸವರಾಜ್ ಅವರು ನಾಪತ್ತೆಯಾಗಿದ್ದಾರೆ.

ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಭೈರತಿ ಬಸವರಾಜ್ ಅವರನ್ನು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಡಳಿಯ ಮುಖ್ಯಸ್ಥ ನಿತಿನ್ ಕುಮಾರ್ ಅವರು ಸ್ವಾಗತಿಸಿದ್ದರು. ಬಳಿಕ ಕಾರಿನಲ್ಲಿ ತೆರಳಿದ ಭೈರತಿ ಬಸವರಾಜ್ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ವೇಳಾಪಟ್ಟಿಯಂತೆ ಶನಿವಾರ ಭೈರತಿ ಬಸವರಾಜ್ ಅವರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯಕ್ಕೆ ತೆರಳಬೇಕಿತ್ತು. ನಂತರ ಕಟೀಲು ದುರ್ಗಾಪರಮೇಶ್ವರಿ ದೇವಾಲಕ್ಕೆ ಭೇಟಿ ನೀಡಬೇಕಿತ್ತು.

ಆದರೆ, ರಾತ್ರಿ 9 ಗಂಟೆಯವರೆಗೂ ಭೈರತಿಯವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಭೈರತಿ ಬಸವರಾಜ್ ಅವರು, ಕಾಂಗ್ರೆಸ್ ಪಕ್ಷದಿಂದ ಹೊರ ಬಂದ ಹಿನ್ನೆಲೆಯಲ್ಲಿ ನಮ್ಮನ್ನು ಗುರಿ ಮಾಡಲಾಗುತ್ತಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಹೇಳಿದ್ದಾರೆ.

ನಮ್ಮ ಅವಶ್ಯಕತೆಗೆ ನಾವು ಹೋಗಿದ್ದೇವ. ಮುಂಬೈನಲ್ಲಿ ಏನೂ ನಡೆದಿಲ್ಲ. ನಡೆದಿದ್ದರೆ, ಅವರು ದಾಖಲೆ ಬಿಡುಗಡೆ ಮಾಡಲಿ. ನಾವು ಕೈ, ಬಾಯಿ ಶುದ್ಧವಾಗಿ ಇಟ್ಟುಕೊಂಡಿದ್ದೇವೆಂದು ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp