
ಸಂಗ್ರಹ ಚಿತ್ರ
ಬೆಂಗಳೂರು: ಬೆಳ್ಳಂಬೆಳ್ಳಗೆ ಪೊಲೀಸರು ರೌಡಿ ಓರ್ವನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕೊಲೆಗೆ ಯತ್ನಿಸಿದ್ದ ಆರೋಪದಡಿ ರೌಡಿ ಕಿರಣ್ ಅಲಿಯಾಸ್ ಚಡ್ಡಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಮಾ. 2ರಂದು ರೌಡಿ ಕಿರಣ್ ಹಾಗೂ ಸಹಚರರು ವಿನೋದ್ ಮತ್ತು ಅವರ ಕುಟುಂಬದವರ ಮೇಲೆ ದಾಳಿ ಮಾಡಿದ್ದು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದಿದ್ದ ಪಿಎಸ್ಐ ನವೀದ್ ಹಾಗೂ ಸಿಬ್ಬಂದಿ, ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಭಾನುವಾರ ನಸುಕಿನಲ್ಲಿ ಲಗ್ಗೆರೆ ಸೇತುವೆ ಬಳಿ ರೌಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು.