ತಮಿಳುನಾಡಿನ ಕಾವೇರಿ ನದಿ ಯೋಜನೆಗಳಿಗೆ ವಿರೋಧ: ವಿಧಾನಪರಿಷತ್ ನಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಕಾವೇರಿ ಅಂತರ್-ರಾಜ್ಯ ನದಿ-ಸಂಪರ್ಕ ಯೋಜನೆಯನ್ನು ನಿಲ್ಲಿಸಲು ಕರ್ನಾಟಕ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

Published: 10th March 2021 08:34 AM  |   Last Updated: 10th March 2021 12:25 PM   |  A+A-


ಗೋವಿಂದ ಕಾರಜೋಳ

Posted By : Raghavendra Adiga
Source : The New Indian Express

ಬೆಂಗಳೂರು: ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಕಾವೇರಿ ಅಂತರ್-ರಾಜ್ಯ ನದಿ-ಸಂಪರ್ಕ ಯೋಜನೆಯನ್ನು ನಿಲ್ಲಿಸಲು ಕರ್ನಾಟಕ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

ಎಂಎಲ್‌ಸಿಗಳಾದ ಕೆ.ಟಿ.ಶ್ರೀಕಾಂತೆಗೌಡ, ಮರಿತಿಪ್ಪೇಗೌಡ, ಕೆ.ಎ. ತಿಪ್ಪೇಸ್ವಾಮಿ, ಎಸ್‌.ಎಲ್. ಭೋಜೇಗೌಡ ಅವರು ಮೇಲ್ಮನೆಯಲ್ಲಿ ಸಾರ್ವಜನಿಕ ಪ್ರಾಮುಖ್ಯವಾದ ವಿಚಾರವನ್ನು ಎತ್ತಿದ್ದರು. ವಿವರವಾದ ಚರ್ಚೆ ನಡೆಯಿತಾದರೂ ತಮಿಳುನಾಡು ಸರ್ಕಾರ ರಾಜ್ಯ ಸರ್ಕಾರದಿಂದ ಅಥವಾ ಬೇರೆ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಶ್ರೀಕಾಂತೇಗೌಡ ಹೇಳಿದ್ದಾರೆ..ರಾಜ್ಯ ಸರ್ಕಾರ ನಿದ್ರೆಯಲ್ಲಿದೆ, ಮತ್ತು ತಮಿಳುನಾಡಿಗೆ ಬಲವಾದ ಸಂದೇಶವನ್ನು ಕಳುಹಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಈ ಯೋಜನೆಯನ್ನು ನಿಲ್ಲಿಸಲು ಕರ್ನಾಟಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ ಶ್ರೀಕಾಂತೇಗೌಡ ಸರ್ಕಾರವು ಕಾವೇರಿ ಉನ್ನತ ಮಟ್ಟದ ಚಾನೆಲ್ ಯೋಜನೆ, ಕಬಿನಿ ಬ್ಯಾಕ್‌ವಾಟರ್ ಲಿಫ್ಟ್ ನೀರಾವರಿ ಯೋಜನೆ ಮತ್ತು ಮೆಕೆಡಾಟು ಯೋಜನೆಯನ್ನು ಮುಂದುವರಿಸಬೇಕೆಂದು ಸೂಚಿಸಿದರು.

"ತಮಿಳುನಾಡು ಸರ್ಕಾರವು ಸುಮಾರು 14,400 ಕೋಟಿ ರೂ. ಖರ್ಚು ಮಾಡುತ್ತಿದೆ, ಕರ್ನಾಟಕ ಸರ್ಕಾರವು ಸುಮಾರು 6,500 ಕೋಟಿ ರೂಗಳನ್ನು ಏಕೆ ಖರ್ಚು ಮಾಡಬಾರದು ಮತ್ತು ಇಲ್ಲಿ ಯೋಜನೆಗಳನ್ನು ಪ್ರಾರಂಭಿಸಿದರೆ ಇದು ಲಕ್ಷಾಂತರ ರೈತರಿಗೆ ಸಹಾಯ ಆಗುತ್ತದೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ" ಎಂದು ಅವರು ಹೇಳಿದ್ದಾರೆ.

ತಿಪ್ಪೇಶ್ವಾಮಿ ಮತ್ತು ಇತರರು ಮಾತನಾಡಿ ತಮಿಳುನಾಡಿನ ಯೋಜನೆಯನ್ನು ನಿಲ್ಲಿಸಲು ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.  ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್"ಸರ್ಕಾರವು ಸಮಯವನ್ನು ವ್ಯರ್ಥ ಮಾಡಬಾರದು ಮತ್ತು ಸರ್ವಪಕ್ಷಗಳ ನಿಯೋಗವನ್ನು ಪ್ರಧಾನ ಮಂತ್ರಿಯ ಬಳಿಗೆ ಕೊಂಡೊಯ್ಯಬೇಕು." ಎಂದರು. ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಈ ಕುರಿತು ಚರ್ಚಿಸಲು ಸರ್ಕಾರ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆಯಲಿದೆ ಎಂದು ಹೇಳಿದರು. “ಮುಖ್ಯಮಂತ್ರಿ ಈಗಾಗಲೇ ಈ ವಿಷಯವನ್ನು ಪ್ರಧಾನ ಮಂತ್ರಿಯೊಂದಿಗೆ ಪ್ರಸ್ತಾಪಿಸಿದ್ದು ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು ನಮ್ಮ ಆಕ್ಷೇಪಣೆಯನ್ನು ದಾಖಲಿಸಿದ್ದಾರೆ. ಯೋಜನೆಯನ್ನು ನಿಲ್ಲಿಸುವಂತೆ ತಮಿಳುನಾಡಿಗೆ ನಿರ್ದೇಶನ ನೀಡುವಂತೆ ನಾವು ಕೇಂದ್ರವನ್ನು ಕೇಳಿದ್ದೇವೆ ಮತ್ತು ಕಾನೂನು ತಜ್ಞರನ್ನು ಭೇಟಿ ಮಾಡುತ್ತಿದ್ದೇವೆ. ” ಎಂದರು.

ಇದಾಗ್ಯೂ ಸರ್ಕಾರದ ಉತ್ತರ ತೃಪ್ತಿಕರವಾಗಿಲ್ಲ ಎಂದು ಪಾಟೀಲ್ ಹೇಳಿದರು, ಮತ್ತು ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ರೂಪದಲ್ಲಿ ಸದನದಿಂದ ಹೊರನಡೆದರು.ಆದರೆ ಜೆಡಿಎಸ್ ಸದಸ್ಯರು ಬಿಜೆಪಿ ಸದಸ್ಯರಿಗೆ ಪ್ರಧಾನ ಮಂತ್ರಿಯೊಂದಿಗೆ ಭೇಟಿಗೆ ಅನುಮತಿ ಪಡೆಯಲೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp