ಚಿನ್ನ ಕಳ್ಳಸಾಗಣೆ ಮಾಡುವವರಿಗೆ ಸಹಕಾರ: ವಿಮಾನ ನಿಲ್ದಾಣ ಸಿಬ್ಬಂದಿ ಬಂಧನ

ಚಿನ್ನ ಕಳ್ಳಸಾಗಣೆ ಮಾಡುವವರಿಗೆ ಸಹಕಾರ ನೀಡುತ್ತಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಬಂಧಿಸಲಾಗಿದೆ. 

Published: 11th March 2021 01:31 PM  |   Last Updated: 11th March 2021 02:47 PM   |  A+A-


The gold which was seized from smugglers by Customs at KIA in Bengaluru on Wednesday

ಚಿನ್ನ ಕಳ್ಳಸಾಗಣೆ ಮಾಡುವವರಿಗೆ ಸಹಕಾರ: ವಿಮಾನ ನಿಲ್ದಾಣ ಸಿಬ್ಬಂದಿ ಬಂಧನ

Posted By : Srinivas Rao BV
Source : The New Indian Express

ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡುವವರಿಗೆ ಸಹಕಾರ ನೀಡುತ್ತಿದ್ದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಬಂಧಿಸಲಾಗಿದೆ. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ನಿರ್ವಹಣೆ ಮಾಡುವ ವಿಭಾಗದಲ್ಲಿದ್ದ ವ್ಯಕ್ತಿ ಬುಧವಾರದಂದು ಅಪರಾಧ ಎಸಗುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆ. ದುಬೈ ನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮಹಿಳೆಗೆ ಈ ವ್ಯಕ್ತಿ ಸಹಕರಿಸುತ್ತಿದ್ದ ಎಂದು ತಿಳಿದುಬಂದಿದೆ. 

ಏರ್ ಪೋರ್ಟ್ ಕಸ್ಟಮ್ಸ್ ವಿಭಾಗದ ಗುಪ್ತಚರ ಮಹಿಳಾ ಸಿಬ್ಬಂದಿಗಳು ಬುರ್ಖಾ ಧರಿಸಿ ಮಹಿಳೆಯರ ಶೌಚಾಲಯದ ಬಳಿ ನಿಂತು ಶಂಕಿತರ ಚಿನ್ನ ಕಳ್ಳಸಾಗಣೆ ಯತ್ನವನ್ನು ಗಮನಿಸಿ ಹಿಡಿದಿದ್ದಾರೆ. 

ಪ್ಲಾಸ್ಟಿಕ್ ಹಾಳೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನ 1 ಕೆ.ಜಿಯಷ್ಟಿದ್ದು, ಪೂರ್ಣ ಹೊರತೆಗೆದ ಬಳಿಕ ಇದರ ಪ್ರಮಾಣ 880 ಗ್ರಾಮ್ ಗಳಷ್ಟಿದ್ದವು. 22 ವರ್ಷದ ಬಂಧಿತ ವ್ಯಕ್ತಿ ಎಐಎಸ್ಎಟಿಎಸ್ ನ ಉದ್ಯೋಗಿಯಾಗಿದ್ದಾರೆ ಎಂದು ಉನ್ನತ ಮಟ್ಟದ ಕಸ್ಟಮ್ಸ್ ಅಧಿಕಾರಿ ತಿಳಿಸಿದ್ದಾರೆ. 

ಎಮಿರೇಟ್ಸ್ ಫ್ಲೈಟ್ ನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ಬಗ್ಗೆ ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಅರಿತ ಅಧಿಕಾರಿಗಳು ಪ್ರಯಾಣಿಕರ ಚಲನವಲನಗಳನ್ನು ತೀಕ್ಷ್ಣವಾಗಿ ಗಮನಿಸುತ್ತಿದ್ದರು. ಈ ಪೈಕಿ ಇಬ್ಬರು ವ್ಯಕ್ತಿಗಳು ಪದೇ ಪದೇ ಶೌಚಾಲಯಕ್ಕೆ ಹೋಗಿ ಬರುತ್ತಿದ್ದದು ಕಂಡುಬಂದಿದೆ. ಅಧಿಕಾರಿಗಳು ಬುರ್ಖಾ ಧರಿಸಿ ಮಹಿಳಾ ಶೌಚಾಲಯಕ್ಕೆ ಕಳ್ಳರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಈ ವೇಳೆ ಚಿನ್ನ ಕಳ್ಳಸಾಗಣೆ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ದುಬೈ ನಿಂದ ಚಿನ್ನ ಕಳ್ಳಸಾಗಣೆಯಾಗುತ್ತಿದ್ದ ಪ್ರಕರಣಗಳು ಹೆಚ್ಚಿದ್ದವು. ಈ ಬೆನ್ನಲ್ಲೇ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆದಿದೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp