ರಾಸಲೀಲೆ ಪ್ರಕರಣ: ನಕಲಿ ಸಿಡಿ ಪತ್ತೆ ಮಾಡಲು ಎಸ್.ಐ.ಟಿ. ತನಿಖೆ- ಬೊಮ್ಮಾಯಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆಯ ಸಿಡಿ ಪ್ರಕರಣದಲ್ಲಿ ಯಾರು ನಕಲಿ ಸಿಡಿ ಸೃಷ್ಟಿಸಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಎಸ್.ಐ.ಟಿ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published: 11th March 2021 08:29 PM | Last Updated: 11th March 2021 08:29 PM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆಯ ಸಿಡಿ ಪ್ರಕರಣದಲ್ಲಿ ಯಾರು ನಕಲಿ ಸಿಡಿ ಸೃಷ್ಟಿಸಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಎಸ್.ಐ.ಟಿ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಡಿ ಹಿಂದೆ ಷಡ್ಯಂತ್ರ ಇದ್ದು, ತನಿಖೆ ಮಾಡುವಂತೆ ಜಾರಕಿಹೊಳಿ ಆಗ್ರಹಿಸಿದ್ದಾರೆ. ನಕಲಿ ಸಿಡಿ ತಯಾರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುವುದು ಎಂದರು.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಎಸ್ ಐಟಿ ತನಿಖೆ ಮಾಡಲಾಗುತ್ತಿದೆ. ವರದಿ ಸಲ್ಲಿಸಲು ಎಸ್ ಐ ಟಿ ಗೆ ಸಮಯ ನಿಗದಿ ಮಾಡಿಲ್ಲ. ಪ್ರಾಥಮಿಕ ತನಿಖೆ ನಂತರ ಎಫ್.ಐ.ಆರ್ ದಾಖಲಿಸಲಿದೆ ಎಂದು ಹೇಳಿದರು.
ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪ್ರತ್ಯೇಕವಾಗಿ ದೂರು ನೀಡುವ ವಿಚಾರದಲ್ಲಿ ತಮ್ಮ ಬಳಿ ಮಾಹಿತಿ ಇಲ್ಲ. ಜಾರಕಿಹೊಳಿ ದೂರವಾಣಿ ಮೂಲಕ ತಮ್ಮೊಂದಿಗೆ ಮಾತನಾಡಿದ್ದಾರೆ. ತಾವು ನೀಡಿರುವ ಪತ್ರದ ಆಧಾರದ ಮೇಲೆ ತನಿಖೆ ಮಾಡಿ ಎಂದು ಹೇಳಿದ್ದಾರೆ. ಅದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, “ಬಿಜೆಪಿಯವರ ಶರ್ಟ್, ಪ್ಯಾಂಟ್ ಅನ್ನು ನಾವು ಬಿಚ್ಚಿಸಿದ್ದೇವೆಯೇ” ಎಂದು ಪ್ರಶ್ನಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ “ನನ್ನನ್ನು ಆ ಮಟ್ಟಕ್ಕೆ ನನ್ನನ್ನ ಇಳಿಸಬೇಡಿ. ನಕಲಿ ಸಿಡಿ ಮಾಡಿದ್ದು ಯಾರು ಅಂತ ಗೊತ್ತಾಗಬೇಕಲ್ಲವೆ ಅದಕ್ಕಾಗಿ ತನಿಖಾ ತಂಡ ರಚನೆ ಮಾಡಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದರು.